ಮಗನ ಪ್ರಾರಂಭ ಚಿತ್ರಕ್ಕೆ ರವಿಚಂದ್ರನ್ ಸಾಥ್
ಸಿನಿಮಾ

ಮಗನ ಪ್ರಾರಂಭ ಚಿತ್ರಕ್ಕೆ ರವಿಚಂದ್ರನ್ ಸಾಥ್

March 13, 2020

ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡಿದ್ದಾನೆ, ಸಿಗರೇಟ್ ಸೇದಿz್ದÁನೆ.
ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಸಾಹೇಬ, ಬೃಹಸ್ಪತಿ ಚಿತ್ರಗಳ ನಂತರ ಅಭಿನಯಿಸಿರುವ ಮತ್ತೊಂದು ಚಿತ್ರ ಪ್ರಾರಂಭ. ಇದೇ ಮೊದಲಬಾರಿಗೆ ಮನುರಂಜನ್ ಮಾಸ್ ಕಮ್ ಆಕ್ಷನ್ ಲವ್‍ಸ್ಟೋರಿ ಒಳಗೊಂಡ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ತಯಾರಾದ ಈ ಚಿತ್ರಕ್ಕೆ ಮನು ಕಲ್ಯಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಲಿರಿಕಲ್ ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಪುತ್ರನ ಚಿತ್ರದ ಲಿರಿಕಲ್ ಹಾಡುಗಳನ್ನು ಬಿಡುಗಡೆ ಮಾಡಿ, ಹಾಡುಗಳನ್ನು ವೀಕ್ಷಿಸಿದ ನಂತರ ಮಾತನಾಡುತ್ತಾ ಇದು ನನ್ನ ಮಗನ ಚಿತ್ರ, ಬೇರೆಯವರ ಚಿತ್ರ ಅಂತ ತಲೆಗೆ ಹಾಕಿಕೊಳ್ಳ¯್ಲÁ. ನನಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತೇನೆ. ಫೋಟೋಸ್ ಇಟ್ಟುಕೊಂಡು ಹಾಡು ರೆಡಿ ಮಾಡಿರುವುದನ್ನು ನೋಡಿ ಪ್ರಮಾಣೀಕರಿಸಲು ಆಗುವುದಿಲ್ಲ. ಮೂರು ಹಾಡುಗಳಲ್ಲಿ ಭಾವನೆಗಳು, ಪ್ರೀತಿಯ ನೋವು ಇದೆ. ಪ್ರೀತಿಯಲ್ಲಿ ವೇದನೆ ಇದ್ದರೆ ಅದು ಚೆನ್ನಾಗಿಯೇ ಕಾಣುತ್ತದೆ. ನನ್ನ ಮಗ ನನಗಿಂತ ಚೆನ್ನಾಗಿ ಕಿಸ್ ಮಾಡಿದ್ದಾನೆ, ಸಿಗರೇಟ್ ಸೇದಿz್ದÁನೆ. ಪ್ರತಿಯೊಬ್ಬರ ಮನೆಯಲ್ಲಿ ನಮ್ಮ ಮಗ ಸೈನಿಕನಾಗಬೇಕೆಂದು ಆಸೆಪಟ್ಟಂತೆ, ನಮ್ಮದು ಕಲಾವಿದರ ಕುಟುಂಬ. ಅದರಂತೆ ನಮ್ಮ ಮನೆಯಲ್ಲೂ ಎಲ್ಲರೂ ಹೀರೋ ಆಗಬೇಕೆಂಬ ಆಸೆ ಇರುತ್ತದೆ. ನಮ್ಮ ಈಶ್ವರಿ ಸಂಸ್ಥೆಗೆ 50 ವರ್ಷ ತುಂಬಿದ ಸಂದರ್ಭದಲ್ಲಿ, ನನ್ನ ಇಬ್ಬರು ಮಕ್ಕಳನ್ನು ಕೊಡುಗೆಯಾಗಿ ಚಿತ್ರರಂಗಕ್ಕೆ ಅರ್ಪಿಸಿz್ದÉೀನೆ ಎಂದು ಹೇಳಿದರು. ಸಹೋದರ ವಿಕ್ರಂ ಕೂಡ ಅಣ್ಣನ ಕುರಿತಂತೆ ಮಾತನಾಡಿದರು. ನಂತರ ನಾಯಕ ಮನುರಂಜನ್ ಮಾತನಾಡಿ. ಎಲ್ಲವನ್ನು ಹೇಳಬೇಕೆಂದು ಬಂದೆ. ಅಪ್ಪ ಇರುವುದರಿಂದ ಮರೆತು ಹೋಯಿತು. `ಪ್ರಾರಂಭ’ ನನಗೂ ಹೊಸದು. ಇದು ಖಂಡಿತಾ ಅರ್ಜುನ್‍ರೆಡ್ಡಿ ಚಿತ್ರದ ರೀಮೇಕ್ ಅಲ್ಲ. ಪ್ರೀತಿ ಸೋತಾಗ ಕೆಟ್ಟ ಚಟಗಳಿಗೆ ದಾಸರಾಗು Á್ತರೆ. ಆದರೆ ಇದರಲ್ಲಿ ನಾಯಕನಿಗೆ ತನ್ನ ಪ್ರೀತಿ ದೂರವಾದ ಮೇಲೇ ಹೊಸ ಜೀವನ ಎನ್ನುವುದು ಶುರುವಾಗುತ್ತದೆ ಎಂದು ಹೇಳಿದರು. ನಿರ್ದೇಶಕರ ಸಹೋದರ ಜಗದೀಶ್ ಕಲ್ಯಾಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಬಳ್ಳಾರಿ, ಜಿಂದಾಲ್, ಚಿಕ್ಕಮಗಳೂರು, ಗೋವಾ, ಮೂಡಿಗೆರೆ ಹಾಗೂ ಮಡಿಕೇರಿ ಸುತ್ತಮುತ್ತ ಈ ಚಿತ್ರಕ್ಕೆ 75ಕ್ಕೂ ಹೆಚ್ಚು ದಿನಗಳ ಕಾಲ ಮಾತಿನ ಭಾಗ ಹಾಗೂ ಹಾಡುಗಳನ್ನು ಚಿತ್ರೀಕರಣ ಮಾಡಲಾಗಿದೆ.

ಐದು ಸುಂದರವಾದ ಹಾಡುಗಳನ್ನು ಹೊಂದಿರುವ ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಪ್ರಜ್ವಲ್ ಪೈ ರಾಗ ಸಂಯೋಜನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಮನುರಂಜನ್ ರವಿಚಂದ್ರನ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿ ಸಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Translate »