ಈ ವಾರ 5 ಅಡಿ 7 ಅಂಗುಲದ ಮಿಸ್ಟ್ರಿ
ಸಿನಿಮಾ

ಈ ವಾರ 5 ಅಡಿ 7 ಅಂಗುಲದ ಮಿಸ್ಟ್ರಿ

March 13, 2020

5 ಅಡಿ 7 ಅಂಗುಲ ನಂದಳಿಕೆ ನಿತ್ಯಾನಂದ ಪ್ರಭು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ, ಮರ್ಡರ್ ಮಿಸ್ಟ್ರಿ ಕಥೆ ಒಳಗೊಂಡ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಇತ್ತೀಚೆಗಷ್ಟೇ ಯು/ಎ ಪ್ರಮಾಣ ಪತ್ರ ನೀಡಿದ್ದು, ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಯಾಗುತ್ತಿದೆ. ತಂತ್ರ, ಕುತಂತ್ರ, ಯುಕ್ತಿ, ಕುಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಈ ತ್ರಿವಳಿ ಸೂತ್ರಗಳನ್ನು ಇಟ್ಟುಕೊಂಡು ಕಥೆ ಮಾಡಲಾ ಗಿರುವ ಚಿತ್ರ ಇದಾಗಿದೆ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಎತ್ತರ 5.2ಅಡಿಯಿಂದ 6.3ರವರೆಗೆ ಇರುತ್ತದೆ. ಹಾಗಾಗಿ ಚಿತ್ರದ ಕಥೆಗೆ ಹತ್ತಿರವಾಗಿದ್ದರಿಂದ ಚಿತ್ರಕ್ಕೆ 5 ಅಡಿ 7 ಅಂಗುಲ ಎಂಬ ಶೀರ್ಷಿಕೆ ಯನ್ನು ಇಟ್ಟಿರುವುದಾಗಿ ಮೊನ್ನೆ ನಡೆದ ಚಿತ್ರದ ಬಿಡುಗಡೆಪೂರ್ವ ಪತ್ರಿಕಾ ಗೋಷ್ಟಿಯಲ್ಲಿ ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು ಅವರು ಹೇಳಿದರು.

ಜೀವನದಲ್ಲಿ ಸದಾ ಚೆ¯್ಲÁಟವಾಡುವ ಯುವ ಉದ್ಯಮಿಯೊಬ್ಬನ ಕೊಲೆ ಹೇಗೆ ನಡೆಯುತ್ತದೆ, ಆ ಕೊಲೆಯ ಹಿಂದಿರುವ ರಹಸ್ಯವೇನು, ಮುಂದೆ ಆ ಘಟನೆ ಹೇಗೆ ದೊಡ್ಡ ತಿರುವನ್ನು ಪಡೆದುಕೊಂಡು ನಂಬಲಾಗದ ಘಟನೆಗೆ ಸಾಕ್ಷಿಯಾಗುತ್ತದೆ. ಕೊನೆಗೆ ಕೊಲೆಯಾದಾತನೇ ಅದರ ಸುಳಿಯಲ್ಲಿ ಸಿಲುಕಿಕೊಂಡಾಗ, ಕೊನೆಗೂ ಆತನನ್ನು ಹುಡುಕುವುದು ಸಾಧ್ಯವಾಯಿತೇ, ಇಲ್ಲವೇ ಎನ್ನುವುದೇ ಈ ಚಿತ್ರದ ಕಥಾಹಂದರವಾಗಿದೆ. ಚಿತ್ರದ ಮುಖ್ಯಪಾತ್ರವೊಂದರಲ್ಲಿ ಕಾಗೆಯೊಂದು ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ರಾಸಿಕುಮಾರ್ ಈ ಚಿತ್ರದ ನಾಯಕನಾಗಿದ್ದು, ಅದಿತಿ ಚಿತ್ರದ ನಾಯಕಿ. ಇವರೊಂದಿಗೆ ಭುವನ್ ನಾರಾಯಣ್, ಸತ್ಯನಾಥ್, ಪ್ರಣವಮೂರ್ತಿ, ಚಕ್ರವರ್ತಿ ದಾವಣಗೆರೆ, ಮಹದೇವ, ಮಾ.ಮಹೇಂದ್ರ ಪ್ರಸಾದ್, ಕೃಷ್ಣಮೂರ್ತಿ.ವಿ, ನರೇಂದ್ರ, ವಿನಯಕುಮಾರ್ ಚಿತ್ರದ ಉಳಿದ ಪಾತ್ರಗಳಲ್ಲಿz್ದÁರೆ. ಈವರೆಗೆ ಸಂಕಲನಕಾರನಾಗಿದ್ದ ನಂದಳಿಕೆ ನಿತ್ಯಾನಂದ ಪ್ರಭು ಚಿತ್ರದ ನಿರ್ಮಾಣ, ನಿರ್ದೇಶನದ ಜೊತೆ ಕೋಮಿಯೋ ಪಾತ್ರಕ್ಕೆ ಬಣ್ಣ ಹಚ್ಚಿz್ದÁರೆ. ಚಿತ್ರದ ಮೂರು ಹಾಡುಗಳಿಗೆ ರಘು ಠಾಣೆ ಅವರ ಸಂಗೀತವಿದೆ. ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಆರ್.ಎಸ್.ಗಣೇಶ್ ನಾರಾಯಣ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಬೆಂಗಳೂರು, ನೆಲಮಂಗಲ, ತಡಿಯಾಂಡಮೋಲï, ಸುಂಟಿ ಕೊಪ್ಪ ಮತ್ತು ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮಗನ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ನಂದಳಿಕೆ ಚಂದ್ರಶೇಖರ ಪ್ರಭು ಕೈಜೋಡಿಸಿದ್ದಾರೆ.

Translate »