ದಿಗಂತ್ ಅಭಿನಯದ ಕಾಮಿಡಿ, ಕ್ರೈಂ, ಥ್ರಿಲ್ಲರ್ ‘ಮಾರಿಗೋಲ್ಡ್’ಗೆ ಚಾಲನೆ
ಸಿನಿಮಾ

ದಿಗಂತ್ ಅಭಿನಯದ ಕಾಮಿಡಿ, ಕ್ರೈಂ, ಥ್ರಿಲ್ಲರ್ ‘ಮಾರಿಗೋಲ್ಡ್’ಗೆ ಚಾಲನೆ

March 13, 2020

ಕಾಮಿಡಿ, ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಮಾರಿಗೋಲ್ಡ್ ದಿಗಂತ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ರಾಘವೇಂದ್ರ ಎಂ.ನಾಯಕ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ ಕಟ್ ಹೇಳುತ್ತಿದ್ದಾರೆ. ಆರ್.ವಿ.ಕ್ರಿಯೇಷನ್ಸ್ ಮೂಲಕ ರಘುವರ್ಧನ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಕಳೆದ À 5 ರಿಂದ ಚಿತ್ರೀ ಕರಣ ಆರಂಭವಾಗಿದ್ದು, ಬೆಂಗಳೂರು, ಶಿವಮೊಗ್ಗ ಹಾಗೂ ಚಿತ್ರದುರ್ಗ ಸುತ್ತಮುತ್ತ 35 ರಿಂದ 40 ದಿನಗಳ ಕಾಲ ಒಂದಷ್ಟು ವಿಶೇಷ ಲೊಕೇಶನ್‍ಗಳಲ್ಲಿ ನಡೆಯಲಿದೆ. ಒಂದೇ ಹಂತದಲ್ಲಿ ಚಿತ್ರದ ಹಾಡುಗಳು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಯಲಿದೆ. ರಘುವರ್ಧನ್ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ ಈ ಕಥೆ ಕೇಳಿ ಇಷ್ಟಪಟ್ಟು ಬೇರೊಬ್ಬ ನಿರ್ದೇಶಕರಿಗೆ ಅವಕಾಶ ನೀಡಿದ್ದಾರೆ.

ಚಿತ್ರಕ್ಕೆ ಸಂಗೀತ ಶೃಂಗೇರಿ ಚಿತ್ರದ ನಾಯಕಿಯಾಗಿದ್ದು, ಈಗಾಗಲೇ 777ಚಾರ್ಲಿ ಚಿತ್ರದಲ್ಲಿ ಇವರು ನಟಿಸಿದ್ದಾರೆ. ರಘು ನೀಡುವಳ್ಳಿ ಸಂಭಾಷಣೆಗಳನ್ನು ರಚಿಸಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮರಾ ವರ್ಕ್ ನಿಭಾಯಿಸಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನವಿದೆ. ಈ ಚಿತ್ರದ 2 ಹಾಡುಗಳಿಗೆ ವೀರ್ ಸಮರ್ಥ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾಕ್ರೋಚ್ ಸುಧಿ, ಅಥರ್ವ ಖ್ಯಾತಿಯ ಯಶ್‍ಶೆಟ್ಟಿ ಕೂಡ ಈ ಚಿತ್ರದಲ್ಲಿದ್ದಾರೆ. ಕ್ರೈಂ, ಕಾಮಿಡಿ ಹಾಗೂ ಎಮೋಷನಲ್ ಕಥಾನಕ ಚಿತ್ರದಲ್ಲಿದ್ದು, ಕೆ.ಜಿ.ಎಫ್ ಖ್ಯಾತಿಯ ಸಂಪತ್ ಕುಮಾರ್ ಒಬ್ಬ ಪೊಲೀಸ್ ಅಧಿಕಾರಿಯಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಇನ್ನು ಗಾಳಿಪಟ-2, ಹುಟ್ಟುಹಬ್ಬದ ಶುಭಾಶಯಗಳು ಚಿತ್ರಗಳ ನಂತರ ದಿಗಂತ್ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.

Translate »