ವಿನಯ್ ಶಾಸ್ತ್ರಿ ಅವರ ನಿರ್ದೇಶನದ ಓಬಿರಾಯನ ಕಥೆ ಚಿತ್ರದ ಟೈಟಲ್ ಅನಾವರಣ ಕಳೆದವಾರ ನೆರವೇರಿತು. ರಾಜೇಶ್ ನಟರಂಗ ಒಬ್ಬ ಫೋಟೋಗ್ರಾಫರ್ ಆಗಿ ನಟಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ರಾಕಿಂಗ್‍ಸ್ಟಾರ್ ಯಶ್ ಅನಾವರಣ ಮಾಡಿದರು. ನಂತರ ಮಾತನಾಡುತ್ತಾ ನಾನು ಹಿಂದೆ ಪ್ರೀತಿ ಇಲ್ಲದೆ ಮೇಲೆ ಧಾರಾವಾಹಿಯಲ್ಲಿ ನಟಿಸುತ್ತಿರುವಾಗ ಅಚ್ಯುತಕುಮಾರ್, ರಾಜೇಶ್ ಅವರನ್ನು ಅಣ್ಣ ಎಂದೇ ಕರೆಯುತ್ತಿz್ದÉ. ಅವರು ತೆರೆಮೇಲೆ ಹೀರೋ ಆಗಲಿಲ್ಲವಾದರೂ, ಸೆಟ್‍ನಲ್ಲಿ ಯಾವಾಗಲೂ ಹೀರೋನಂತೆಯೇ ಇರುತ್ತಿದ್ದರು. ತಡವಾಗಿಯಾದರೂ ರಾಜೇಶ್ ಹೀರೋ ಆಗುತ್ತಿರುವುದಕ್ಕೆ ಖುಷಿಯಾಗಿದೆ. ನನ್ನ ಬೆಳವಣಿಗೆಗೆ ಇವರೆಲ್ಲ ಕಾರಣರಾಗಿರುತ್ತಾರೆ. ಈ ಚಿತ್ರದ ಶೀರ್ಷಿಕೆ ತುಂಬಾ ಚೆನ್ನಾಗಿದೆ, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಇದೇ ಮೊದಲಬಾರಿಗೆ ಚಿತ್ರದ ಕಥೆ, ಚಿತ್ರಕತೆ ಬರೆದು ನಿರ್ದೇಶನ ಮಾಡುತ್ತಿರುವ ವಿನಯಶಾಸ್ತ್ರಿ ಅವರಿಗೆ ಚಿತ್ರರಂಗ ಹೊಸ ಅನುಭವ. ಚಿತ್ರದ ನಾಯಕಿಯಾಗಿ ಚೈತ್ರಾ ಆಚಾರ್ ಬಣ್ಣ ಹಚ್ಚುತ್ತಿದ್ದಾರೆ. ಹಿರಿಯನಟ ದತ್ತಣ್ಣ ಕೂಡ ಚಿತ್ರದಲ್ಲಿ ನಟಿಸುತ್ತಿದ್ದು, ರಘು ದೀಕ್ಷಿತ್ ಚಿತ್ರದ ಸಂಗೀತ ನಿರ್ದೇಶನದ ಜೊತೆ ಒಂದು ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಛಾಯಾಗ್ರಹಣ ಸುನೀತ ಹಲಗೇರಿ ಅವರದಾಗಿದೆ. ನಾಟಕದ ಹಿನ್ನಲೆಯಲ್ಲಿ ಗುರುತಿಸಿಕೊಂಡಿರುವ ಶಾಮ್ ಅನ್ನೂರ್ ಅವರು ಅನ್ನೂರ್ ಪೆÇ್ರಡP್ಷÀನ್ಸ್ ಮೂಲಕ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿz್ದÁರೆ.