ಕೊರೊನಾ ಟೈಟಲ್‍ನಲ್ಲಿ ಸಿನಿಮಾ !
ಸಿನಿಮಾ

ಕೊರೊನಾ ಟೈಟಲ್‍ನಲ್ಲಿ ಸಿನಿಮಾ !

March 13, 2020

ಜಗತ್ತನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಈಗ ಚಿತ್ರರಂಗಕ್ಕೂ ಆವರಿಸಿದೆ. ಏನಪ್ಪಾ ಕೊರೋನಾ ವೈರಸ್ ಮನುಷ್ಯರಿಗೆ ಬಿಟ್ಟು ಸಿನಿಮಾಗೆ ಅಂದ್ಕೋಬೇಡಿ, ಈ ಭೀಕರ ಕಾಯಿಲೆಯನ್ನೇ ಆಧರಿಸಿ ಸಿನಿಮಾ ಮಾಡಲು ತಯಾರಿ ನಡೆಯುತ್ತಿದೆ. ಇಂಥz್ದÉೂಂದು ಅಧಿಕೃತ ಸುದ್ದಿ ಗಾಂಧಿನಗರದಿಂದ ಕೇಳಿಬಂದಿದೆ.

ಒಂದೊಳ್ಳೆಯ ಸಿನಿಮಾ ಮಾಡಲು ಕಥೆ ಯಾವ P್ಷÀಣದಲ್ಲಿ ಹೊಳೆಯುತ್ತೆ ಎಂಬುದನ್ನು ಹೇಳೋಕಾಗಲ್ಲ. ಅದರಲ್ಲೂ ಸಮಾಜದಲ್ಲಿ ನಡೆಯುವ ಪ್ರಮುಖ ಬೆಳವಣಿಗೆಗಳ ಬಗ್ಗೆ ನಿರ್ದೇಶಕ ಹಾಗೂ ನಿರ್ಮಾಪಕರು ಸದಾ ಕಣ್ಣು ಇಟ್ಟಿರುತ್ತಾರೆ. ಈಗ ಕೊರೊನಾ ವೈರಸ್‍ನ ಕಥೆ ಇಟ್ಟು ಕೊಂಡು ಚಿತ್ರ ಮಾಡಿದರೆ ಹೇಗೆ ಎಂಬ ಆಲೋಚನೆ ಗಾಂಧಿನಗರದಲ್ಲಿ ನಡೆಯುತ್ತಿದೆ. ಅಚ್ಚರಿ ಎನಿಸಿದರೂ ಈ ಮಾಹಿತಿ ನಿಜ. ಕೊರೊನಾ ವೈರಸ್ ಮಾಡಿರುವ ಅನಾಹುತಗಳನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ಈ ಬಗ್ಗೆ ಈಗ ಅಧಿಕೃತ ಮಾಹಿತಿ ಹೊರಬಿದ್ದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆ ಕೂಡ ನೋಂದಣಿ ಆಗಿದೆ. ಕನ್ನಡ ಮಾತ್ರವಲ್ಲದೆ, ಹಿಂದಿಯಲ್ಲೂ ಸಹ ಕೊರೊನಾ ಕುರಿತ ಚಿತ್ರ ನಿರ್ಮಾಣ ವಾಗಲಿದೆ. ಕನ್ನಡದಲ್ಲಿ ‘ಕೊರೊನಾ’ ಹಾಗೂ ಹಿಂದಿಯಲ್ಲಿ ‘ಡೆಡ್ಲಿ ಕೊರೊನಾ’ ಎಂದು ಹೆಸರಿಡಲಾಗಿದೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ಮಾಪಕ ಉಮೇಶ್ ಬಣಕಾರ್ ಅವರು ‘ಕೊರೊನಾ’ ಶೀರ್ಷಿಕೆಯನ್ನು ನೋಂದಣಿ ಮಾಡಿಸಿz್ದÁರೆ. ಯಾವಾಗ ಈ ಕಾಯಿಲೆ ಭಾರತಕ್ಕೆ ಕಾಲಿಟ್ಟಿತೋ ಆಗಲೇ ಅವರಿಗೆ ಈ ಸಿನಿಮಾ ಮಾಡುವ ಆಲೋಚನೆ ಬಂತಂತೆ. ಕೆಲವೇ ದಿನಗಳ ಹಿಂದೆ ಟೈಟಲ್ ರಿಜಿಸ್ಟರ್ ಮಾಡಿಸುವ ಮೂಲಕ ಚಿತ್ರ ನಿರ್ಮಾಣ ಕಾರ್ಯಕ್ಕೆ ಅವರು ಕೈಹಾಕಿz್ದÁರೆ. ಇಂಥ ಸಮಸ್ಯೆ ಗಳು ಎದುರಾದಾಗ ಜನರು ಹೇಗೆ ನಡೆದುಕೊಳ್ಳಬೇಕು ಎಂಬ ಸಂದೇಶ ಕೂಡ ಈ ಸಿನಿಮಾದಲ್ಲಿ ಇರಲಿದೆಯಂತೆ. ಈ ಹಿಂದೆ ‘ಬಿಸಿರಕ್ತ’ ಸಿನಿಮಾ ಮಾಡಿರುವ ಶಿವಕುಮಾರ್ ಅವರು ಚಿತ್ರದ ನಿರ್ದೇಶನದ ಹೊಣೆ ಹೊತ್ತಿz್ದÁರೆ. ಈ ಸಿನಿಮಾದಲ್ಲಿ ಯಾರ್ಯಾರು ನಟಿಸಲಿz್ದÁರೆ ಎಂಬುದನ್ನೂ ಚಿತ್ರತಂಡ ಶೀಘ್ರದಲ್ಲೇ ತಿಳಿಸಲಿದೆ.

Translate »