ಗಾಳಿಪಟ -2 ಚಿತ್ರಕ್ಕೂ ತಟ್ಟಿದ ಕೊರೊನಾ ಎಫೆಕ್ಟ್ ! 2 ತಿಂಗಳು ಶೂಟಿಂಗ್ ಮುಂದಕ್ಕೆ
ಸಿನಿಮಾ

ಗಾಳಿಪಟ -2 ಚಿತ್ರಕ್ಕೂ ತಟ್ಟಿದ ಕೊರೊನಾ ಎಫೆಕ್ಟ್ ! 2 ತಿಂಗಳು ಶೂಟಿಂಗ್ ಮುಂದಕ್ಕೆ

March 13, 2020

ಇಡೀ ಜಗತ್ತನ್ನೇ ತಲ್ಲಣಗೊಳಿಸು ತ್ತಿರುವ ಕೊರೊನಾ ವೈರಸ್ ಭೀತಿ ಇದೀಗ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಅದರ ಪರಿಣಾಮ ಕೆಲ ಚಿತ್ರಗಳ ಫಾರಿನ್ ಶೂಟಿಂಗ್ ರದ್ದಾದ ಬೆನ್ನಲ್ಲೇ ಈಗ ಗಾಳಿಪಟ 2 ಚಿತ್ರದ ಚಿತ್ರೀಕರಣವನ್ನೂ ಒಂದಷ್ಟು ದಿನಗಳ ಕಾಲ ಪೆÇೀಸ್ಟ್‍ಪೆÇೀನ್ ಮಾಡಿದ ಘಟನೆ ನಡೆದಿದೆ. ಹೌದು, ಗೋಲ್ಡನ್‍ಸ್ಟಾರ್ ಗಣೇಶ್, ದಿಗಂತ್, ಪವನ್‍ಕುಮಾರ್ ಅಭಿನಯದ ಗಾಳಿಪಟ 2 ಚಿತ್ರದ ಚಿತ್ರೀ ಕರಣವನ್ನು ನಿರ್ದೇಶಕ ಯೋಗರಾಜ ಭಟ್ಟರು ಎರಡು ತಿಂಗಳ ಕಾಲ ಮುಂದಕ್ಕೆ ಹಾಕಿದ್ದಾರೆ. ಯೋಗರಾಜ್ ಭಟ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಬಹುದೊಡ್ಡ ತಾರಾಗಣವಿದೆ.

ಹಿರಿಯನಟ ಅನಂತ್‍ನಾಗ್, ದಿಗಂತ್, ಪವನ್‍ಕುಮಾರ್, ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಷ್ಣವಿ ಶಾಂಡಿಲ್ಯ ಹೀಗೆ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿ ಅಭಿನಯಿಸುತ್ತಿದೆ. ಇನ್ನು ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ವಿದೇಶಗಳಲ್ಲಿ ನಡೆಯಬೇಕಿದ್ದರಿಂದ ಸದ್ಯ ಕೊರೊನಾ ವೈರಸ್ ಭೀತಿಯಿಂದ ಚಿತ್ರೀಕರಣವನ್ನು ಎರಡು ತಿಂಗಳವರೆಗೆ ಮುಂದಕ್ಕೆ ಹಾಕಲಾಗಿದೆ. ಇಲ್ಲಿಯವರೆಗೆ ಅಂದಾಜು 30 ದಿನಗಳ ಕಾಲ ಕರ್ನಾಟಕದಾದ್ಯಂತ ಗಾಳಿಪಟ 2 ಚಿತ್ರದ ಶೂಟಿಂಗ್‍ನ್ನು ಮಾಡಲಾಗಿದೆ.

ಕುದುರೆ ಮುಖದ ಪ್ರಕೃತಿ ಸೌಂದರ್ಯ ದಲ್ಲಿ ಈಗಾಗಲೇ ಚಿತ್ರದ ಕೆಲವು ದೃಶ್ಯ ಗಳನ್ನು ಚಿತ್ರಿಸಿಕೊಳ್ಳಲಾಗಿದೆ. ಪಡ್ಡೆಹುಲಿ ನಿರ್ಮಿಸಿದ ರಮೇಶ್ ರೆಡ್ಡಿ ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

Translate »