ರೈತನ ಹೋರಾಟದ ಕಥನ ನರಗುಂದ ಬಂಡಾಯ
ಸಿನಿಮಾ

ರೈತನ ಹೋರಾಟದ ಕಥನ ನರಗುಂದ ಬಂಡಾಯ

March 13, 2020

ನೈಜಘಟನೆ ಆಧಾರಿತ ಚಿತ್ರಗಳು ಬರುವುದು ತುಂಬಾ ವಿರಳ. ಆದರೆ, 1980ರಲ್ಲಿ ರೈತರ ಜಮೀನಿನ ಮೇಲೆ ಸರ್ಕಾರ ಹೇರಿದ ದುಪ್ಪಟ್ಟು ಕಂದಾಯದ ವಿರುದ್ದ ದಂಗೆಯೆದ್ದ ರೈತರ ಹೋರಾಟದ ಕಥನ `ನರಗುಂದ ಬಂಡಾಯ’ ಈಗಾಗಲೇ ನಾಟಕ ರೂಪದಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡು ಯಶಸ್ವಿ ಯಾಗಿತ್ತು. ಇದೇ ಕಥೆಯನ್ನು ನಿರ್ದೇಶಕ ನಾಗೇಂದ್ರ ಮಾಗಡಿ ಅವರು ಚಿತ್ರರೂಪಕ್ಕಿಳಿಸಿದ್ದಾರೆ. ಇಂದು ಈ ಚಿತ್ರ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಇಂದಿರಾಗಾಂಧಿ ಪ್ರಧಾನಿ ಯಾಗಿದ್ದ ಕಾಲದಲ್ಲಿ ರೈತರ ಜಮೀನಿನ ಮೇಲೆ ಹೆಚ್ಚಿನ ಕರ ವಿಧಿಸಲಾಗಿತ್ತು. ಅದರ ವಿರುದ್ಧ ನಡೆದ ಹೋರಾಟದಲ್ಲಿ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಗೋಲಿ ಬಾರ್‍ನಲ್ಲಿ ವೀರಮರಣ ಹೊಂದುತ್ತಾನೆ. ಆಗ ರೈತರ ಹೋರಾಟ ಇನ್ನು ತೀವ್ರವಾಗುತ್ತದೆ. ಒಂದು ಸರ್ಕಾರವೇ ಉರುಳುವಂತಾಗುತ್ತದೆ. ಇಂಥ ಕಥೆ ಈಗ ತೆರೆ ಮೇಲೆ ಬಂದಿದೆ. ಕಿರುತೆರೆಯ ಪುಟ್ಟಗೌರಿ ಮದುವೆ ಖ್ಯಾತಿಯ ನಟ ರಕ್ಷ್ ಈ ಚಿತ್ರದ ನಾಯಕನಾಗಿದ್ದು, ಶುಭಾಪುಂಜಾ ನಾಯಕಿಯಾಗಿದ್ದಾರೆ. ಉತ್ತರ ಕರ್ನಾಟಕದ ಎಸ್.ಜಿ.ಸಿz್ದÉೀಶ್ ಹಾಗೂ ಶೇಖರ್ ಯಲವಿಗಿ(ಹುಬ್ಬಳ್ಳಿ) ಚಿತ್ರದ ನಿರ್ಮಾಪಕರಾಗಿದ್ದಾರೆ. ಸಂಗೊಳ್ಳಿ ರಾಯಣ್ಣನಿಗೆ ಡೈಲಾಗ್ ಬರೆದಿದ್ದ ಕೇಶವಾದಿತ್ಯ ಚಿತ್ರದ ಸಂಭಾಷಣೆಗಳನ್ನು ರಚಿಸಿದ್ದಾರೆ. ಯಶೋವರ್ಧನ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಶೇಖರ್, ನಮ್ಮ ಸಿನಿಮಾ ನಾಡಿನ ಮನೆಮನೆಗೂ ಮುಟ್ಟಿದೆ. ಇಂಥ ಒಳ್ಳೇ ಚಿತ್ರಕ್ಕೆ ಒಬ್ಬ ರೈತನ ಮಗನಾಗಿ ನಾನು ಸÀಪೆÇೀರ್ಟ್ ಮಾಡಿz್ದÉೀನೆ ಎಂದರು.

ನಾಯಕ ನಟ ರಕ್ಷ್ ಮಾತನಾಡಿ, ಬಯೋಪಿಕ್ ಸಿನಿಮಾ ಅಂದರೆ ಅದಕ್ಕೆ ಅದರz್ದÉೀ ಆದ ಒಂದು ತೂಕ ಇರುತ್ತದೆ. ಒಂದು ಒಳ್ಳೇ ಸಬ್ಜೆಕ್ಟ್‍ಗಾಗಿ ಕಾಯ್ತಿದ್ದಾಗ ನನಗೆ ಸಿಕ್ಕ ಚಿತ್ರವಿದು ಎಂದು ಹೇಳಿದರು. ನಾಯಕಿ ಶುಭಾ ಪುಂಜಾ ಮಾತನಾಡಿ, ತುಂಬಾ ವರ್ಷಗಳ ನಂತರ ಇಂಥ ಒಂದು ಪಾತ್ರ ಮಾಡಿz್ದÉೀನೆ. ಉತ್ತರ ಕರ್ನಾಟಕದ ಮಹಿಳೆಯಾಗಿ ಅಭಿನಯಿಸಿದ್ದ ಖುಷಿ ನೀಡಿದೆ ಎಂದು ಹೇಳಿದರು.

ನಿರ್ದೇಶಕ ನಾಗೇಂದ್ರ ಮಾಗಡಿ ಮಾತನಾಡಿ, ನಾನು ಈ ಹಿಂದೆ ಮಾಡಿದ 11 ಚಿತ್ರಗಳಿಗಿಂತಲೂ ಈ ಚಿತ್ರ ವಿಶೇಷ ವಾಗಿದೆ. ಇದು ನನ್ನ ಜಿಲ್ಲೆಯಲ್ಲೇ ನಡೆದ ಕಥೆಯಾಗಿದ್ದು, ಬಹಳ ಶ್ರಮವಹಿಸಿ ಪ್ರೀತಿಯಿಂದ ಚಿತ್ರವನ್ನು ಮಾಡಿz್ದÉೀವೆ ಎಂದು ಹೇಳಿದರು.

Translate »