ನಟ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾಗಾಗಿ ಪ್ರಖ್ಯಾತ ಗಾಯಕರು
ಸಿನಿಮಾ

ನಟ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾಗಾಗಿ ಪ್ರಖ್ಯಾತ ಗಾಯಕರು

March 13, 2020

ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ಸಲಗ ಸಿನಿಮಾಗೆ ಚರಣ್ ರಾಜ್ ಸಂಗೀತ ನೀಡುತ್ತಿ ದ್ದಾರೆ. ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ಈ ಸಿನಿಮಾ ದಲ್ಲಿ ಘಟಾನುಘಟಿ ಗಾಯಕರು ಹಿನ್ನೆಲೆ ಗಾಯನ ನೀಡಿದ್ದಾರೆ.

ಟಗರು ಬಂತು ಟಗರು ಖ್ಯಾತಿಯ ಜಾನಪದ ಗಾಯಕ ಆಂಥೋಣಿ ದಾಸನ್, ಮಲೆಶಿಯನ್ ರ್ಯಾಪರ್ ಯೋಗಿ, ಸಂಜಿತ್ ಹೆಗಡೆ, ನವೀನ್ ಸಜ್ಜು ತಮ್ಮ ಹಾಡುಗಳನ್ನು ಹಾಡಿದ್ದಾರೆ.ಸಲಗ ಸಿನಿಮಾ ತಂಡ 2 ಹಾಡುಗಳನ್ನು ರಿಲೀಸ್ ಮಾಡಿದೆ. ಸೂರಿ ಅಣ್ಣ ಮತ್ತು ಐ ಲವ್ ಯೂ ಹಾಡುಗಳು ಈಗಾಗಲೇ ಸದ್ದು ಮಾಡುತ್ತಿವೆ.ಸಲಗದ ಸಿನಿಮಾದಲ್ಲಿ ಸಂಜನಾ ಆನಂದ್, ವಿಜಯ್‍ಗೆ ನಾಯಕಿಯಾಗಿದ್ದಾರೆ. ಧನಂಜಯ್ ಪೆÇಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಸೆನ್ಸಾರ್ ಬೋರ್ಡ್ ಅನುಮತಿ ಸಿಕ್ಕಿದ ಮೇಲೆ ಸಿನಿಮಾ ರಿಲೀಸ್ ಡೇಟ್ ಪ್ರಕಟಿಸಲಾಗುತ್ತದೆ. ಯುಗಾದಿಗೆ ಸಲಗ ರಿಲೀಸ್ ಆಗುವ ಸಾಧ್ಯತೆಯಿದೆ.

Translate »