ರಾಜ್ಯದ 187 ತಹಶೀಲ್ದಾರ್ ಗಳ ಮರು ನಿಯುಕ್ತಿ
ಮೈಸೂರು

ರಾಜ್ಯದ 187 ತಹಶೀಲ್ದಾರ್ ಗಳ ಮರು ನಿಯುಕ್ತಿ

June 17, 2018

ಮೈಸೂರು: ಚುನಾವಣಾ ವೇಳೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡಿದ್ದ ರಾಜ್ಯದ 187 ತಹಶೀಲ್ದಾರ್ ರನ್ನು ಸರ್ಕಾರ ಮೂಲ ಸ್ಥಳ ಗಳಿಗೆ ಮರು ನಿಯುಕ್ತಿಗೊಳಿಸಿ ಇಂದು ಆದೇಶ ಹೊರಡಿಸಿದೆ.

ಮೈಸೂರು ತಾಲೂಕು ತಹಶಿಲ್ದಾರ್ ಆಗಿ ಟಿ.ರಮೇಶಬಾಬು, ಹೆಚ್ಚುವರಿ ತಹಶಿಲ್ದಾರ್ ಆಗಿ ಹೆಚ್.ಆರ್.ಚಂದ್ರ ಕುಮಾರ್, ಮುಡಾಗೆ ಎಂ.ರಮಾದೇವಿ, ನಂಜನಗೂಡಿಗೆ ಎಂ.ದಯಾನಂದ, ಸೋಮವಾರ ಪೇಟೆಗೆ ಪಿ.ಎಸ್.ಮಹೇಶ, ಹಾಸನ ಡಿಸಿ ಕಚೇರಿಗೆ ತಿಮ್ಮಪ್ಪ, ಕೊಳ್ಳೇಗಾಲಕ್ಕೆ ಕಾಮಾಕ್ಷಮ್ಮ, ಮಳವಳ್ಳಿಗೆ ಹೆಚ್.ಎನ್.ದಿನೇಶ್ ಚಂದ್ರ, ಯಳಂದೂರಿಗೆ ಕೆ.ಚಂದ್ರ ಮೌಳಿ, ಕೆ.ಆರ್.ಪೇಟೆಗೆ ಕೆ.ರತ್ನ, ಮಂಡ್ಯಗೆ ಎಂ.ಜಿ.ವಸಂತಕುಮಾರ್ ಸೇರಿದಂತೆ ಎಲ್ಲಾ 187 ಮಂದಿ ತಹಶಿಲ್ದಾರ್ ಗಳನ್ನು ತಮ್ಮ ಹಿಂದಿನ ಸ್ಥಳಗಳಿಗೆ ನಿಯುಕ್ತಿಗೊಳಿಸಲಾಗಿದೆ.

 

Translate »