ಮೈಸೂರು ಪುರಭವನ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್  ಬಾಕಿ ಕಾಮಗಾರಿಗೆ ಮರು ಟೆಂಡರ್ ಪ್ರಕ್ರಿಯೆ
ಮೈಸೂರು

ಮೈಸೂರು ಪುರಭವನ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ಬಾಕಿ ಕಾಮಗಾರಿಗೆ ಮರು ಟೆಂಡರ್ ಪ್ರಕ್ರಿಯೆ

January 10, 2021

ಮೈಸೂರು, ಜ.9(ಆರ್‍ಕೆ)-ಕಳೆದ 6 ವರ್ಷಗಳಿಂದ ನೆನೆ ಗುದಿಗೆ ಬಿದ್ದಿರುವ ಪುರಭವನ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ಮಾಣ ಕಾಮಗಾರಿಗೆ ಮರುಟೆಂಡರ್ ಕರೆಯಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.

2011ರಲ್ಲಿ ಆರಂಭವಾದ ಕಾಮಗಾರಿಯನ್ನು ಕೆಲ ತಾಂತ್ರಿಕ ಕಾರಣಗಳಿಂದಾಗಿ 2015ರಲ್ಲಿ ಸ್ಥಗಿತಗೊಳಿಸ ಲಾಗಿದ್ದು, ಪರಿಣಾಮ ಶೇ.30ರಷ್ಟು ಕೆಲಸ ಬಾಕಿ ಉಳಿ ದಿದೆ. ಇದೀಗ 5 ಕೋಟಿ ರೂ. ವೆಚ್ಚದ ಸಿವಿಲ್ ಕಾಮಗಾರಿ ಮತ್ತು 2 ಕೋಟಿ ರೂ. ವೆಚ್ಚದ ಲಿಫ್ಟ್ ಸೇರಿದಂತೆ ಎಲೆ ಕ್ಟ್ರಿಕಲ್ ಕೆಲಸಗಳಿಗೆ ಪ್ರತ್ಯೇಕವಾಗಿ ಎರಡು ಟೆಂಡರ್ ಕರೆ ಯಲು ಮೈಸೂರು ಮಹಾನಗರ ಪಾಲಿಕೆ ಪ್ರಕ್ರಿಯೆ ಆರಂ ಭಿಸಿದೆ. ಬೇಸ್‍ಮೆಂಟ್-1, ಬೇಸ್‍ಮೆಂಟ್-2, ನಂತರದ ಮಹಡಿಯಲ್ಲಿ ದ್ವಿಚಕ್ರವಾಹನ ನಿಲುಗಡೆ ಪ್ಲಾಟ್ ಹಾಗೂ ಒಂದು ಆಂಪಿ ಥಿಯೇಟರ್ ನಿರ್ಮಿಸಲು ಸಿಕಂದರಾ ಬಾದ್ ಮೂಲದ ಮೇ 11 ಛಾಬ್ರಿಸ್ ಅಸೋಸಿಯೇಟ್ಸ್ ಕಂಪನಿಗೆ 18.5 ಕೋಟಿ ರೂ.ಗಳಿಗೆ ಟೆಂಡರ್ ಮೂಲಕ ಕಾಮಗಾರಿಯನ್ನು 2011ರಲ್ಲಿ ವಹಿಸಲಾಗಿತ್ತು.

ಕಾಮಗಾರಿ ಪ್ರಗತಿಯಲ್ಲಿರು ವಾಗಲೇ ಸಮಯಕ್ಕೆ ಸರಿಯಾಗಿ ತಮಗೆ ಹಣ ಪಾವತಿಸಿಲ್ಲ ಎಂದು ಕಂಪನಿಯು ನಗರ ಪಾಲಿಕೆ ವಿರುದ್ಧ 2015ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಲ್ಲದೆ, ಆರ್ಬಿ ಟ್ರೇಷನ್ ಪ್ರಕರಣದಲ್ಲಿ ನ್ಯಾಯಾ ಲಯ ನಿರ್ಮಾಣ ಕಂಪನಿ ಪರ ತೀರ್ಪು ನೀಡಿತ್ತು. ನಂತರ ಪಾಲಿಕೆಯು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಈಗ ವಿಚಾರಣೆ ಹಂತದಲ್ಲಿದೆ.

ಪ್ರಕರಣ ಇತ್ಯರ್ಥವಾಗದೇ ಇದ್ದರೂ ಕಾನೂನು ತಜ್ಞರ ಅಭಿಪ್ರಾಯ ಪಡೆದು ಸಾರ್ವಜನಿಕರಿಗೆ ಅನಾನುಕೂಲ ವಾಗುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಇದೀಗ ಬಾಕಿ ಉಳಿದಿರುವ ಶೇ.30ರಷ್ಟು ಕಾಮಗಾರಿ ಪೂರ್ಣ ಗೊಳಿಸಲು ಟೆಂಡರ್ ಆಹ್ವಾನಿಸುವುದಕ್ಕೆ ತಾವು ಸಿದ್ಧತೆ ನಡೆಸುತ್ತಿರುವುದಾಗಿ ಮೈಸೂರು ಮಹಾನಗರ ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಿ.ನಾಗರಾಜ್ ತಿಳಿಸಿದ್ದಾರೆ.

ಈ ಸಂಬಂಧ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ(ಏಇಖಅ)ದ ಇಂಜಿನಿಯರ್ ಗಳಿಂದ ಮಲ್ಟಿಲೆವೆಲ್ ಪಾರ್ಕಿಂಗ್ ಲಾಟ್ ಕಟ್ಟಡದ ಸುಸ್ಥಿರತೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದು, ಅವರ ಸಲಹೆ ಯಂತೆ ನಿರ್ಮಾಣ ತಜ್ಞ ಪ್ರೊ.ಶಕೀಬ್ ಉರ್ ರೆಹ ಮಾನ್ ಹಾಗೂ ತಂಡದಿಂದಲೂ ವರದಿ ಪಡೆಯಲಾಗಿದೆ.

ಈಗ ಅರ್ಧಕ್ಕೆ ನಿಂತಿರುವ ಕಾಮಗಾರಿ ಮುಂದುವರಿ ಸಲು ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಅವರು ತಿಳಿಸಿದರು. ಬೇಸ್‍ಮೆಂಟ್-1ರಲ್ಲಿ 300, ಬೇಸ್‍ಮೆಂಟ್ -2ರಲ್ಲಿ 350 ಕಾರುಗಳನ್ನು ಪಾರ್ಕ್ ಮಾಡಬಹುದಾಗಿದ್ದು, ನಂತರದ ಮಹಡಿಯಲ್ಲಿ, ಒಂದೂವರೆ ಸಾವಿರ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆಯಲ್ಲದೆ ಸುಮಾರು 500 ಮಂದಿ ಕೂರುವ ಆಂಪಿ ಥಿಯೇಟರ್ ಸೌಲಭ್ಯವೂ ಇದೆ ಎಂದು ನಾಗರಾಜು ತಿಳಿಸಿದರು.

Translate »