ಮೈಸೂರು, ನಾಗನಹಳ್ಳಿ ರೈಲು ನಿಲ್ದಾಣಗಳ ಅಂಗಳ 488 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ
ಮೈಸೂರು

ಮೈಸೂರು, ನಾಗನಹಳ್ಳಿ ರೈಲು ನಿಲ್ದಾಣಗಳ ಅಂಗಳ 488 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ

June 19, 2022

ನಾಳೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಧಾನಿ ಮೋದಿ ಅವರಿಂದ ಕಾಮಗಾರಿಗಳಿಗೆ ಶಂಕುಸ್ಥಾಪನೆ: ಸಂಸದ ಪ್ರತಾಪ್ ಸಿಂಹ ಪ್ರಕಟ
ಮೈಸೂರು, ಜೂ.೧೮(ಆರ್‌ಕೆ)-ಮೈಸೂರು ಮತ್ತು ನಾಗನಹಳ್ಳಿ ರೈಲು ನಿಲ್ದಾಣದ ಯಾರ್ಡ್ ೪೮೮ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗು ವುದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನ ರೈಲು ನಿಲ್ದಾಣದ ಡಿಆರ್‌ಎಂ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩೯೫.೭೩ ಕೋಟಿ ರೂ. ವೆಚ್ಚದಲ್ಲಿ ಮೈಸೂರು ರೈಲು ನಿಲ್ದಾಣ (ಅಂಗಳ) ವಿಸ್ತರಿಸುವುದರೊಂದಿಗೆ ಪುನರ್ ನಿರ್ಮಾಣ ಹಾಗೂ ೯೨.೦೭ ಕೋಟಿ ರೂ. ವೆಚ್ಚದಲ್ಲಿ ನಾಗನಹಳ್ಳಿ ನಿಲ್ದಾಣದ ಅಂಗಳ ಪುನರ್ ನಿರ್ಮಾಣ ಮಾಡಿ ಮೆಮು ಶೆಡ್ ಜೊತೆಗೆ ಡ್ರೆöÊಫಿಟ್ ಲೈನ್ ಮಾಡುವ ಕಾಮ ಗಾರಿಗಳಿಗೆ ಜೂ.೨೦ರಂದು ಸಂಜೆ ಮಹಾ ರಾಜ ಕಾಲೇಜು ಮೈದಾನದಲ್ಲಿ ನಡೆಯಲಿ ರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡುವರು ಎಂದರು.
ಹಳೇ ಕ್ವಾಟ್ರ‍್ಸ್ನಲ್ಲಿ ವಾಸವಿರುವ ರೈಲ್ವೆ ಸಿಬ್ಬಂದಿಗೆ ಮೈಸೂರಿನ ಒಂಟಿಕೊಪ್ಪಲು ದೇವ ಸ್ಥಾನದ ಎದುರಿನಲ್ಲಿರುವ ಯಾದವಗಿರಿಯ ರೈಲ್ವೆ ಕ್ವಾಟ್ರ‍್ಸ್ನಲ್ಲಿ ೩೦೦ ಹೊಸ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರೈಲು ನಿಲ್ದಾಣ ವಿಸ್ತರಿಸುವುದರಿಂದ ಪ್ರಸ್ತುತ ಪ್ರಯಾಣ ಕರ ದಟ್ಟಣೆ ನಿರ್ವಹಣೆ ಸಾಧ್ಯವಾಗುವುದಲ್ಲದೆ, ಸೌಲಭ್ಯ ಗಳನ್ನು ಹೆಚ್ಚಿಸಿದಂತಾಗುತ್ತದೆ ಎಂದರು.

ನಾಗನಹಳ್ಳಿಯಿAದ ಮೆಮು ಸೇವೆ: ೯೨.೦೭ ಕೋಟಿ ವೆಚ್ಚದಲ್ಲಿ ಪ್ರಸ್ತಾವಿತ ನಾಗನಹಳ್ಳಿ ರೈಲು ನಿಲ್ದಾಣದ ಯಾರ್ಡ್ ಮರು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ೧ ಹೆಚ್ಚುವರಿ ಪ್ಲಾಟ್ ಫಾರಂ ಲೈನ್, ೧ ಸ್ಟೆಬ್ಲಿಂಗ್ ಲೈನ್, ೧ ಮೆಮು ಶೆಡ್ ಜೊತೆಗೆ ಡ್ರೆöÊಫಿಟ್‌ಲೈನ್ ನಿರ್ಮಿಸಲಾಗು ತ್ತಿದೆ. ಅದರಿಂದಾಗಿ ನಾಗನಹಳ್ಳಿಯಿಂದಲೇ ಮೆಮು ರೈಲು ಸಂಚಾರ ಆರಂಭಿಸಬಹುದಾಗಿದ್ದು, ಈ ರೈಲು ಕೋಚಿಂಗ್ ಕಾಂಪ್ಲೆಕ್ಸ್ನಿAದಾಗಿ ಹೆಚ್ಚುವರಿ ರೈಲುಗಳ ನಿಲುಗಡೆ, ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಾಗನ ಹಳ್ಳಿ ಹೊಸ ಕೋಚಿಂಗ್ ಕಾಂಪ್ಲೆಕ್ಸ್ ನಿಂದಾಗಿ ಮೆಮು ಸೇರಿದಂತೆ ದೂರದ ಸ್ಥಳಗಳಿಗೆ ಸಂಚರಿಸುವ ಇತರ ರೈಲು ಪ್ರಯಾಣ ಕರಿಗೆ ಅನು ಕೂಲವಾಗಲಿದ್ದು, ಅದರಿಂದ ಮೈಸೂರು ಪ್ರವಾಸೋದ್ಯಮ ಕೈಗಾರಿಕೋದ್ಯಮದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದರು.

ಅಶೋಕಪುರAನಲ್ಲಿ ೨ ಟ್ರಾö್ಯಕ್: ಮೈಸೂರಿನ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಎರಡು ಹೆಚ್ಚುವರಿ ರೈಲ್ವೆ ಟ್ರಾö್ಯಕ್ ನಿರ್ಮಿಸಿ ಪ್ರಯಾಣ ಕರು ಟ್ರಾö್ಯಕ್ ದಾಟಲು ಮೇಲು ಸೇತುವೆ ಸೌಲಭ್ಯ ಕಲ್ಪಿ ಸಲು ಯೋಜನೆ ಸಿದ್ಧಪಡಿಸಲಾಗಿದೆ. ರೈಲುಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿ ಟ್ರಾö್ಯಕ್ ವಿಸ್ತ ರಣೆ ಅತ್ಯವಶ್ಯವಾಗಿದೆ ಎಂದರು. ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರವಾಲ್, ಸೀನಿ ಯರ್ ಅಸಿಸ್ಟೆಂಟ್ ಇಂಜಿನಿಯರ್ (ಕೋ-ಆರ್ಡಿ ನೇಷನ್) ರವಿಚಂದ್ರನ್, ಸೀನಿಯರ್ ಡಿವಿಷನಲ್ ಕಮರ್ಷಿಯಲ್ ಮ್ಯಾನೇಜರ್ ಮಂಜುನಾಥ್ ರೈಲ್ವೆ ಅಧಿಕಾರಿಗಳೊಂದಿಗೆ ಸಂಸದ ಪ್ರತಾಪ್‌ಸಿಂಹ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕುರಿತಂತೆ ಚರ್ಚಿಸಿದರು.

ಮಹಾರಾಜ ಕಾಲೇಜು ಮೈದಾನದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆಸಾರ್ವಜನಿಕರಿಗೆ ಮುಕ್ತ ಅವಕಾಶ
ಮೈಸೂರು: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಪ್ರಧಾನಿ ಮೋದಿಯವರ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಶಾಂತಿ ಮತ್ತು ಶಿಸ್ತು ಕಾಯ್ದುಕೊಂಡು ಈ ಕಾರ್ಯ ಕ್ರಮದಲ್ಲಿ ಭಾಗವಹಿಸುವಂತೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ಕೇವಲ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ಯವರು ಸಂವಾದ ನಡೆಸುವರು ಎಂದು ಬಿಂಬಿಸಲಾಗುತ್ತಿದೆ. ಆದರೆ ಇದು ಸಾರ್ವ ಜನಿಕ ಕಾರ್ಯಕ್ರಮ. ಇದರಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶವಿದೆ. ಇದಕ್ಕೆ ಪಾಸ್‌ನ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Translate »