ಪಿಯುಸಿ ಪರೀಕ್ಷೆಯಲ್ಲಿ ಫೇಲ್, ಕಡಿಮೆ ಅಂಕ ಬಂದ ಕಾರಣಕ್ಕೆ ಶ್ರೀರಂಗಪಟ್ಟಣ, ಕುಶಾಲನಗರ ಸೇರಿ ರಾಜ್ಯದಲ್ಲಿ ಆರು ವಿದ್ಯಾರ್ಥಿಗಳ ಆತ್ಮಹತ್ಯೆ
ಮೈಸೂರು

ಪಿಯುಸಿ ಪರೀಕ್ಷೆಯಲ್ಲಿ ಫೇಲ್, ಕಡಿಮೆ ಅಂಕ ಬಂದ ಕಾರಣಕ್ಕೆ ಶ್ರೀರಂಗಪಟ್ಟಣ, ಕುಶಾಲನಗರ ಸೇರಿ ರಾಜ್ಯದಲ್ಲಿ ಆರು ವಿದ್ಯಾರ್ಥಿಗಳ ಆತ್ಮಹತ್ಯೆ

June 19, 2022

ಮೈಸೂರು, ಜೂ.೧೮-ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣ ಹಾಗೂ ನಿರೀಕ್ಷಿತ ಅಂಕ ಗಳಿಸಲಿಲ್ಲ ಎಂಬ ಕಾರಣಕ್ಕಾಗಿ ಮನನೊಂದು ಶ್ರೀರಂಗಪಟ್ಟಣ, ಕುಶಾಲನಗರ ಸೇರಿದಂತೆ ರಾಜ್ಯದಲ್ಲಿ ಆರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೊಡಗು ಜಿಲ್ಲೆ ಕುಶಾಲನಗರ ತಾಲೂಕು ಹೆರೂರು ಗ್ರಾಮದ ಸಂಧ್ಯಾ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ್ದರೂ, ನಿರೀಕ್ಷಿತ ಅಂಕ ಗಳಿಸಿಲ್ಲವೆಂದು ಆತ್ಮಹತ್ಯೆಗೆ ಶರಣಾದರೆ, ಶ್ರೀರಂಗ ಪಟ್ಟಣ ತಾಲೂಕು ಮಹದೇವಪುರ ಗ್ರಾಮದ ಎಂ.ಜೆ.ಸ್ಪAದನಾ, ಗದಗದ ಹತ್ರಿ ಗ್ರಾಮದ ಪವಿತ್ರ ಲಿಂಗದಾಳ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಕಡ್ಲೆ ಗ್ರಾಮದ ಪ್ರಣಬ್ ಈಶ್ವರ ನಾಯ್ಕ್ ಅನುತ್ತೀರ್ಣಗೊಂಡಿದ್ದರಿAದ ನೇಣ ಗೆ ಶರಣಾಗಿದ್ದಾರೆ.

ಕುಶಾಲನಗರ ತಾಲೂಕು ಹೆರೂರು ಗ್ರಾಮದ ನಿವೃತ್ತ ಯೋಧ ಶುಭಾಷ್ ಪುತ್ರಿ ಸಂಧ್ಯಾ(೧೮) ಕುಶಾಲನಗರದ ವಿವೇಕಾ ನಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣ ಯಲ್ಲಿ ತೇರ್ಗಡೆ ಹೊಂದಿದ್ದ ಈಕೆ, ದ್ವಿತೀಯ ಪಿಯುಸಿ ಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ ಳಂತೆ. ಇಂದು ಪರೀಕ್ಷಾ ಫಲಿತಾಂಶ ಹೊರ ಬಿದ್ದಿದ್ದು, ಈಕೆಗೆ ಶೇ.೬೭ರಷ್ಟು (೪೦೪) ಅಂಕ ಬಂದಿದ್ದರಿAದ ಮನನೊಂದು ಮನೆಯಲ್ಲೇ ನೇಣ ಗೆ ಶರಣಾಗಿದ್ದಾಳೆ. ಈ ಸಂಬAಧ ಕುಶಾಲ ನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದ ಸ್ಯಾಂತೋಮ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದ
ಜಗದೀಶ್ ಎಂಬುವರ ಪುತ್ರಿ ಎಂ.ಜೆ.ಸ್ಪAದನಾ (೧೭) ಮೂರು ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರಿAದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಈ ಸಂಬAಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗದ ಅತ್ರಿ ಗ್ರಾಮದ ಪವಿತ್ರ ಲಿಂಗದಾಳ (೧೮) ದ್ವಿತೀಯ ಪಿಯುಸಿಯಲ್ಲಿ ಅನು ತ್ತೀರ್ಣಗೊಂಡಿದ್ದರಿAದ ಮನ ನೊಂದು ನೇಣ ಗೆ ಶರಣಾಗಿದ್ದಾಳೆ. ಉತ್ತರ ಕನ್ನಡ ಜಿಲ್ಲೆ ಕುಮಟಾದ ಎ.ವಿ.ಬಾಳಿಗ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಕಡ್ಲೆ ಗ್ರಾಮದ ನಿವಾಸಿ ಪ್ರಣಬ್ ಈಶ್ವರ ನಾಯ್ಕ್ (೧೮) ದ್ವಿತೀಯ ಪಿಯುಸಿಯಲ್ಲಿ ೪ ವಿಷಯಗಳಲ್ಲಿ ಅನುತ್ತೀರ್ಣಗೊಂಡಿದ್ದರಿAದ ಮನ ನೊಂದು ನೇಣ ಗೆ ಶರಣಾಗಿ ದ್ದಾನೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕು ಯಡಹಳ್ಳಿ ಗ್ರಾಮದ ಪೂಜಾ ರಾಚಪ್ಪ ಚಳಗೇರಿ-ಬಳಿಗಾರ್(೧೯) ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿದ್ದ ರಿಂದ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೀದರ್ ಜಿಲ್ಲೆ ಹುಮನಾ ಬಾದ್ ತಾಲೂಕಿನ ಚಟಗುಪ್ಪ ಪಟ್ಟಣದ ಶಾಹೀನ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ, ಮದರಗಿ ಗ್ರಾಮದ ನಿವಾಸಿ ಸುಹಾಸಿನಿ ದಿಲೀಪ್ ಮಳಚಾಪುರ್(೧೮) ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿದ್ದರಿAದ ಮನನೊಂದು ನೇಣ ಗೆ ಶರಣಾಗಿದ್ದಾಳೆ.

 

Translate »