ವರ್ಷವಾದರೂ ಟೇಕ್‌ಆಫ್ ಆಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ: ಕೆಲ ಸಚಿವರಿಗೆ ಆರ್‌ಎಸ್‌ಎಸ್ ಕ್ಲಾಸ್!
ಮೈಸೂರು

ವರ್ಷವಾದರೂ ಟೇಕ್‌ಆಫ್ ಆಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ: ಕೆಲ ಸಚಿವರಿಗೆ ಆರ್‌ಎಸ್‌ಎಸ್ ಕ್ಲಾಸ್!

June 18, 2022

ಬೆಂಗಳೂರು, ಜೂ.೧೭(ಕೆಎಂಶಿ)- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದರೂ ಆಡಳಿತ ಇನ್ನೂ ಟೇಕ್ ಆಫ್ ಆಗದಿರುವ ಬಗ್ಗೆ ಅಸಮಾಧಾನಗೊಂಡಿರುವ ಆರ್‌ಎಸ್‌ಎಸ್, ಎರಡು ದಿನಗಳ ಕಾಲ ಬೈಠಕ್ ನಡೆಸಿ, ಕೆಲ ಸಚಿವರಿಗೆ ಕ್ಲಾಸ್ ತೆಗೆದುಕೊಳ್ಳಲು ನಿರ್ಧರಿಸಿದೆ.

ಬಸವರಾಜ ಬೊಮ್ಮಾಯಿ ಅವರ ಸಂಪುಟದ ಆಯ್ದ ಕೆಲವು ಸಚಿವರಿಗೆ ಜೂನ್ ೨೩ ಹಾಗೂ ೨೪ ರಂದು ಎರಡು ದಿನಗಳ ಕಾಲ ಕೇಶವಶಿಲ್ಪದಿಂದ ಸೂಚನೆ ಬಂದ ತಕ್ಷಣ ಬರುವಂತೆ ತಿಳಿಸಲಾಗಿದೆ. ಅಲ್ಲದೆ ಈ ಎರಡು ದಿನ ಸರ್ಕಾರದ ಕಾರ್ಯವೈಖರಿ ಹಾಗೂ ಹಿಂದುತ್ವ ಪ್ರತಿಪಾದನಾ ವಿಷಯಗಳಿಗೆ ಸಂಬAಧಿಸಿದAತೆ ಬೈಠಕ್ ನಡೆಸುತ್ತಿದೆ.

ಬೈಠಕ್ ಸಂದರ್ಭದಲ್ಲಿ ಬಿಜೆಪಿ ರಾಷ್ಟಿçÃಯ ಸಂಘ ಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಂಘ ಪರಿವಾರದ ಮುಕುಂದ್, ತಿಪ್ಪೇಸ್ವಾಮಿ, ಬಿಜೆಪಿಯ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿದಂತೆ ಪರಿ ವಾರದ ಇತರ ಸದಸ್ಯರು ಮುಖ್ಯಮಂತ್ರಿ ಹಾಗೂ ಸಚಿವರ ಜೊತೆ ಆಡಳಿತ ಮತ್ತು ಹಿಂದುತ್ವ ಪ್ರತಿಪಾದನೆ ಬಗ್ಗೆ ಚಿಂತನ-ಮAಥನ ನಡೆಸಲಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ೯ ತಿಂಗಳು ಬಾಕಿ ಉಳಿದಿದೆ, ಸರ್ಕಾರ ತನ್ನ ವರ್ಚಸ್ಸು ಉಳಿಸಿಕೊಳ್ಳಲು ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿಲ್ಲ. ಸರ್ಕಾರದ ವರ್ಚಸ್ಸು ಹೆಚ್ಚಾದರೆ ಪಕ್ಷದ ವರ್ಚಸ್ಸು ತಾನಾಗಿಯೇ ವೃದ್ಧಿಸುತ್ತದೆ. ಆದರೆ, ಇತ್ತ ಆಡಳಿತ ನಡೆಸು ವವರು ಗಮನ ಕೊಡುತ್ತಿಲ್ಲ ಎಂಬುದು ಆರ್‌ಎಸ್‌ಎಸ್ ಅಸಮಾಧಾನ. ಕೆಲವು ಸಚಿವರು ಒಳ್ಳೆ ಆಡಳಿತ ನೀಡಿದರೂ ಅದನ್ನು ತಮ್ಮ ವೈಯಕ್ತಿಕ ವರ್ಚಸ್ಸು ವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಪಕ್ಷದ ಸಂಘಟನೆಗೆ ಗಮನ ಕೊಡುತ್ತಿಲ್ಲ. ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಹಗರಣಗಳ ಆರೋಪ ಬಂದರೂ ಅದನ್ನು ಬಲವಾಗಿ ನಿರಾಕರಣೆ ಮಾಡುವ ಕೆಲಸವನ್ನೂ ಮಾಡಿಲ್ಲ, ವಿರೋಧಿಗಳಿಗೆ ಸೂಕ್ತ ಉತ್ತರವನ್ನೂ ನೀಡಿಲ್ಲ. ಇನ್ನು ಪಠ್ಯ ಪುಸ್ತಕ ವಿಚಾರದಲ್ಲಿ ಬುದ್ಧ, ಅಂಬೇಡ್ಕರ್, ಬಸವಣ್ಣ, ಕುವೆಂಪು ವಿಷಯದಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿದೆ. ಪ್ರತಿಪಕ್ಷದ ಸದಸ್ಯರು ಮತ್ತು ಬುದ್ಧಿ ಜೀವಿಗಳು ಟೀಕಾಪ್ರಹಾರ ಮಾಡಿದ ಸಂದರ್ಭ ದಲ್ಲಿ ಸಚಿವರು ಸಮಜಾಯಿಷಿ ನೀಡುವ ಕಾರ್ಯವನ್ನೂ ಮಾಡಿಲ್ಲ. ಈ ವಿಚಾರದಲ್ಲಿ ಪೂರ್ಣವಾಗಿ ಎಡವಿದ್ದಾರೆ.

ಇನ್ನು ಪ್ರಜ್ಞಾವಂತ ಮತದಾರರ ಕ್ಷೇತ್ರದಿಂದ ಪರಿಷತ್ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಉತ್ತರ ಕರ್ನಾಟಕ ಭಾಗದವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಪಕ್ಷ ಅಲ್ಲೇ ಸೋಲನನುಭವಿಸುತ್ತಿದೆ.

ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊAಡು ಎರಡು ದಿನಗಳ ಕಾಲ ಬೈಠಕ್ ನಡೆಸುವ ಸಂಘ ಪರಿವಾರ, ಇನ್ನುಳಿದ ಅವಧಿಯಲ್ಲಿ ಸರ್ಕಾರ ಹೇಗೆ ಆಡಳಿತ ನಡೆಸಬೇಕು ಹಾಗೂ ಹಿಂದುತ್ವ ಸಂಘಟನೆಗೆ ಯಾವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು ಎಂಬ ಬಗ್ಗೆ ಪಾಠ ಮಾಡಲಿದೆ.

Translate »