ಬೆಂಗಳೂರು, ಜೂ.೧೭(ಕೆಎಂಶಿ)- ಅಗ್ನಿಪಥ್ ಯೋಜನೆಯಡಿ ನೇಮ ಕಾತಿ ವಯೋಮಿತಿ ಯನ್ನು ೨೧ ರಿಂದ ೨೩ ವರ್ಷಕ್ಕೆ ಏರಿ ಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಅಗತ್ಯಗಳಿಗೆ ಸ್ಪಂದಿಸಿದೆ ಎಂಬು ದನ್ನು ನಿರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ರಕ್ಷಣಾ ಪಡೆಗಳಿಗೆ ನೇಮಕಾತಿ ನಡೆದಿರಲಿಲ್ಲ, ಮೊದಲ ವರ್ಷದ ನೇಮಕಾತಿಯಲ್ಲಿ ವಯೋಮಿತಿಯನ್ನು ಹೆಚ್ಚಿಸಲಾಗಿದೆ, ಈ ನಿರ್ಧಾರದಿಂದ ದೊಡ್ಡ ಸಂಖ್ಯೆ ಯಲ್ಲಿ ಯುವಜನರಿಗೆ ಪ್ರಯೋಜನ ವಾಗಲಿದೆ. ತಾಯ್ನಾಡಿನ ಸೇವೆಯ ಪಥ ದಲ್ಲಿ ಯಶಸ್ವಿಯಾಗಿ ನಡೆದು ತಮ್ಮ ಉಜ್ವಲ ಭವಿಷ್ಯವನ್ನು ಯುವ ಜನತೆ ರೂಪಿಸಿ ಕೊಳ್ಳಲಿದ್ದಾರೆ. ದೇಶದ ಯುವಜನರ ಪರವಾಗಿ ಪ್ರಧಾನಮಂತ್ರಿಗಳಿಗೆ ಟ್ವೀಟ್ ಮೂಲಕ ಸಿಎಂ ಧನ್ಯವಾದ ತಿಳಿಸಿದ್ದಾರೆ.