ಇಂದು ದ್ವಿತೀಯ ಪಿಯು ಫಲಿತಾಂಶ
ಮೈಸೂರು

ಇಂದು ದ್ವಿತೀಯ ಪಿಯು ಫಲಿತಾಂಶ

June 18, 2022

ಬೆAಗಳೂರು, ಜೂ.೧೭(ಕೆಎಂಶಿ)- ಮಕ್ಕಳ ಭವಿಷ್ಯದ ಮಹತ್ವದ ತಿರುವು ಎಂದೇ ಪರಿಗಣ ಸಲ್ಪಡುವ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ ಬೆಳಗ್ಗೆ ೧೧ ಗಂಟೆಗೆ ಪ್ರಕಟವಾಗಲಿದೆ. ಕಳೆದ ಏ.೨೨ರಿಂದ ಮೇ ೧೮ರವ ರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಶನಿವಾರ ಬೆಳಗ್ಗೆ ೧೧ ಗಂಟೆಗೆ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.ರಾಜ್ಯಾದ್ಯಂತ ಒಟ್ಟು ೬,೮೪,೨೫೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ೩,೪೬,೯೩೬ ಬಾಲಕರು, ೩,೩೭,೩೧೯ ಬಾಲಕಿಯರು ಸೇರಿದಂತೆ ೬,೦೦,೫೧೯ ಮಂದಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿದ್ದರೆ, ೬೧,೮೦೮ ಪುನಾರಾವರ್ತಿತ, ೨೮,೯೨೮ ಮಂದಿ ಖಾಸಗಿ ಅಭ್ಯರ್ಥಿಗಳಾಗಿದ್ದರು. ಕಲಾ ವಿಭಾಗದಿಂದ ೨,೨೮,೧೬೭, ವಾಣ ಜ್ಯ ವಿಭಾಗದಿಂದ ೨,೪೫,೫೯೧ ಹಾಗೂ ೨,೧೦,೫೬೯ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದವರಾಗಿದ್ದಾರೆ. ಈ ಬಾರಿ ಹಿಜಾಬ್ ಸಂಘರ್ಷದ ನಡುವೆಯೂ ದ್ವಿತೀಯ ಪಿಯುಸಿ ಪರೀಕ್ಷೆ ಸುಗಮವಾಗಿ ನಡೆದಿತ್ತು. ರಾಜ್ಯಾದ್ಯಂತ ಒಟ್ಟು ೫,೨೪೧ ಕಾಲೇಜು ಗಳಿಂದ ಪರೀಕ್ಷಾ ನೋಂದಣ ಮಾಡಿಕೊಳ್ಳ ಲಾಗಿತ್ತು. ಒಟ್ಟು ೧೦೭೬ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಸರ್ಕಾರದ ಅಧಿಕೃತ ವೆಬ್‌ಸೈಟ್ ಹೊರತುಪಡಿಸಿ ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಫಲಿತಾಂಶವನ್ನು ವಿದ್ಯಾರ್ಥಿ ಗಳು, ಪೋಷಕರು ಪರಿಗಣ ಸಬಾರದು ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ತಿಳಿಸಿದೆ.

Translate »