ರಾಜ್ಯದಲ್ಲಿ81  ಉದ್ಯಮಗಳಿಗೆ ಅನುಮೋದನೆ; 6825ಕ್ಕೂ ಅಧಿಕ ಉದ್ಯೋಗ ಸೃಷ್ಟಿ
ಮೈಸೂರು

ರಾಜ್ಯದಲ್ಲಿ81 ಉದ್ಯಮಗಳಿಗೆ ಅನುಮೋದನೆ; 6825ಕ್ಕೂ ಅಧಿಕ ಉದ್ಯೋಗ ಸೃಷ್ಟಿ

June 18, 2022

ಬೆಂಗಳೂರು, ಜೂ.೧೭(ಕೆಎಂಶಿ)- ರಾಜ್ಯದಲ್ಲಿ ಕೈಗಾರಿಕಾ ಬೆಳವಣ ಗೆಗೆ ಮತ್ತಷ್ಟು ಉತ್ತೇಜನ ನೀಡಿ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಿರುವ ವಾಣ ಜ್ಯ ಮತ್ತು ಕೈಗಾರಿಕಾ ಇಲಾಖೆಯು ಸುಮಾರು ೬,೮೨೫ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ೨,೬೮೯.೫೧ ಕೋಟಿ ರೂ. ಮೌಲ್ಯದ ೮೧ ಕೈಗಾರಿಕಾ ಯೋಜನೆ ಗಳಿಗೆ ಇಂದಿಲ್ಲಿ ಅನುಮೋದನೆ ನೀಡಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್. ನಿರಾಣ ನೇತೃತ್ವದಲ್ಲಿ ನಡೆದ ೧೩೨ನೇ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿ (ಎಸ್‌ಎಲ್ ಎಸ್‌ಡಬ್ಲು÷್ಯಸಿಸಿ) ಸಭೆ ಈ ಯೋಜನೆ ಗಳಿಗೆ ಅನುಮೋದನೆ ನೀಡಿತು.

ಸಮಿತಿಯು ೫೦ ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯ ೭ ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣ ಸಿ ಅನು ಮೋದನೆ ನೀಡಿದೆ. ೧,೨೨೯.೪೩ ರೂ. ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ ೧,೭೩೪ ಜನರಿಗೆ ಉದ್ಯೋಗಾವ ಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಯಿದೆ ಎಂದು ನಿರಾಣ ತಿಳಿಸಿದ್ದಾರೆ.

ಎಸ್‌ಎಲ್‌ಎಸ್‌ಡಬ್ಲು÷್ಯಸಿಸಿ ಸಭೆಯಲ್ಲಿ ೧೫ ಕೋಟಿ ರೂ. ಗಿಂತ ಹೆಚ್ಚು ಹಾಗೂ ೫೦ ಕೋಟಿ ರೂ. ಗಿಂತ ಕಡಿಮೆ ಹೂಡಿಕೆಯ ೭೧ ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ ಹಾಗೂ ೧,೩೦೮.೦೬ ಕೋಟಿ ರೂ. ಮೌಲ್ಯದ ಈ ಯೋಜನೆ ಗಳು ರಾಜ್ಯದಲ್ಲಿ ೫,೦೯೧ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ೧೫೧.೪೨ ಕೋಟಿ ರೂ. ಹೂಡಿಕೆಯ ಮೂರು ಯೋಜನೆಗಳಿಗೆ ಅನು ಮೋದನೆ ನೀಡಲಾಗಿದೆ.

 

 

 

Translate »