ಹಾಸನ, ಕೊಡಗಿನ ಇಂಜಿನಿರ‍್ಸ್ ಸೇರಿ ರಾಜ್ಯಾದ್ಯಂತ 21 ಅಧಿಕಾರಿಗಳ 80ಸ್ಥಳಗಳಲ್ಲಿ ಎಸಿಬಿ ದಾಳಿ
ಮೈಸೂರು

ಹಾಸನ, ಕೊಡಗಿನ ಇಂಜಿನಿರ‍್ಸ್ ಸೇರಿ ರಾಜ್ಯಾದ್ಯಂತ 21 ಅಧಿಕಾರಿಗಳ 80ಸ್ಥಳಗಳಲ್ಲಿ ಎಸಿಬಿ ದಾಳಿ

June 18, 2022

 ಅಪಾರ ಪ್ರಮಾಣದ ಆಸ್ತಿಪಾಸ್ತಿ ದಾಖಲೆ ವಶ
 ಬಿಡಿಎ ಮಾಲಿ ಬೆಂಗಳೂರಲ್ಲಿ ಮೂರುಭವ್ಯ ಬಂಗಲೆ ಮಾಲೀಕ

ಉಡುಪಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಹರೀಶ್ ಅವರ ಮನೆಯಲ್ಲಿ ಎಸಿಬಿ ತಪಾಸಣೆ ನಡೆಸುತ್ತಿರುವುದು. ಮತ್ತೊಂದು ಚಿತ್ರದಲ್ಲಿ ಹರೀಶ್ ಭವ್ಯ ಬಂಗಲೆಯನ್ನು ಕಾಣಬಹುದು.

ಬೆಂಗಳೂರು, ಜೂ.೧೭(ಕೆಎಂಶಿ)- ರಾಜ್ಯ ಸರ್ಕಾರದ ೨೧ ಅಧಿಕಾರಿಗಳಿಗೆ ಸೇರಿದ ೮೦ ಸ್ಥಳಗಳ ಮೇಲೆ ಏಕಕಾಲಕ್ಕೆ ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿ ಗಳು ಮೆಗಾ ರೇಡ್ ನಡೆಸಿದ್ದು, ೩೦೦ಕ್ಕೂ ಹೆಚ್ಚು ಪೊಲೀಸರು ದಾಳಿಯಲ್ಲಿ ಪಾಲ್ಗೊಂಡು ಭಾರೀ ಪ್ರಮಾಣದ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ.

ಕಳೆದ ಕೆಲ ದಿನಗಳಿಂದ ಖಾಲಿ ಇದ್ದ ಲೋಕಾ ಯುಕ್ತರ ನೇಮಕ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಭಾರೀ ಪ್ರಮಾಣದ ದಾಳಿ ನಡೆಸಿ ಸಂಚಲನ ಸೃಷ್ಟಿಸಿದ್ದಾರೆ. ಭ್ರಷ್ಟ ಅಧಿಕಾರಿಗಳೊಂದಿಗೆ ಇಬ್ಬರು ನಿವೃತ್ತ ಸರ್ಕಾರಿ ನೌಕರರಿಗೂ ದಾಳಿ ಬಿಸಿ ಮುಟ್ಟಿಸಿ ರುವುದು ವಿಶೇಷವಾಗಿದೆ.

ಬೆಳಗಾವಿಯ ಸೂಪರಿಂಟೆAಡೆAಟ್ ಎಂಜಿನಿಯರ್ ಭೀಮಾರಾವ್ ವೈ. ಪವಾರ್, ಉಡುಪಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಹರೀಶ್, ಹಾಸನ ಸಣ್ಣ ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ ಎಚ್.ವಿ., ಕಾರವಾರ ಲೋಕೋಪ ಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ರಾಜೀವ್ ಪುರುಷಯ್ಯ ನಾಯಕ್, ಪೊನ್ನಂಪೇಟೆ ಜಿಲ್ಲಾ ಪಂಚಾಯತ್ ಜೂನಿಯರ್ ಎಂಜಿನಿಯರ್ ಬಿ.ಆರ್.ಬೋಪಯ್ಯ, ಬೆಳಗಾಂ ಐಜಿಆರ್ ಕಚೇರಿಯ ಜಿಲ್ಲಾ ರಿಜಿಸ್ಟಾçರ್ ಮಧುಸೂದನ್, ಹೂವಿನ ಹಡಗಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಪರಮೇಶ್ವರಪ್ಪ, ಬಾಗಲ ಕೋಟೆ ಆರ್‌ಟಿಒ ಯಲ್ಲಪ್ಪ ಎನ್.ಪಡಸಾಲಿ, ಬಾಗಲ ಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಪ್ಪ ನಾಗಪ್ಪ ಗೋಗಿ, ಗದಗ ಆರ್‌ಡಿಪಿಆರ್ ಪಂಚಾಯತ್ ಗ್ರೇಡ್ ಕಾರ್ಯದರ್ಶಿ ಪ್ರದೀಪ್ ಎಸ್. ಹಾಲೂರ್, ಬೆಂಗಳೂರಿನ ಉಪ ಮುಖ್ಯ ವಿದ್ಯುತ್ ಇನ್ಸ್ಪೆಕ್ಟರ್ ಸಿದ್ದಪ್ಪ ಟಿ.,

ಬೀದರ್‌ನ ಜಿಲ್ಲಾ ಯೋಜನಾಕಾರಿ ತಿಪ್ಪಣ್ಣ ಪಿ.ಸಿರಸಂಗಿ, ಬೀದರ್ ಪಶು ವಿಶ್ವವಿದ್ಯಾಲ ಯದ ಸಹಾಯಕ ನಿಯಂತ್ರಕ ಮೃತ್ಯುಂಜಯ ಚನ್ನಬಸಯ್ಯ ತಿರಣ , ಚಿಕ್ಕಬಳ್ಳಾಪುರ ನೀರಾವರಿ ಇಲಾಖೆಯ ಇಇ ಮೋಹನ್‌ಕುಮಾರ್, ಕಾರವಾರದ ಜಿಲ್ಲಾ ರಿಜಿಸ್ಟಾçರ್ ಶ್ರೀಧರ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಜಿ., ಬಿಡಿಎನಲ್ಲಿ ಗ್ರೂಪ್ ‘ಸಿ’ ಸಿಬ್ಬಂದಿ ಶಿವಲಿಂಗಯ್ಯ, ಕೊಪ್ಪಳ ಪೊಲೀಸ್ ಇನ್ಸ್ಪೆಕ್ಟರ್ ಉದಯರವಿ, ಕಡೂರು ಪುರಸಭೆಯ ಕೇಸ್ ವರ್ಕರ್ ಬಿ.ಜಿ.ತಿಮ್ಮಯ್ಯ, ರಾಣೆಬೆನ್ನೂರು ಯುಟಿಪಿ ಕಚೇರಿಯ ಚಂದ್ರಪ್ಪ ಸಿ.ಓಲೇಕಾರ್ ಹಾಗೂ ಬೆಂಗಳೂರಿನ ನಿವೃತ್ತ ಭೂಸ್ವಾಧೀನಾಧಿಕಾರಿ ಜನಾರ್ದನ್ ಎಸಿಬಿ ಬಲೆಗೆ ಬಿದ್ದವರು.

ರಾಜಧಾನಿಯ ಬಿಟಿಎಂ ಬಡಾವಣೆಯ ಎಲ್‌ಬಿಎಸ್ ನಗರ ನಿವಾಸಿ ಉಪಮುಖ್ಯ ವಿದ್ಯುತ್ ಇನ್ಸ್ಪೆಕ್ಟರ್ ಸಿದ್ದಪ್ಪ ನಿವಾಸದ ಮೇಲೆ ದಾಳಿ ನಡೆಸಿದಾಗ ಕಂತೆ ಕಂತೆ ನೋಟುಗಳು, ಕೆ.ಜಿ.ಗಟ್ಟಲೆ ಚಿನ್ನಾಭರಣ ಮತ್ತಿತರ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ.
ಶಿವಮೊಗ್ಗದಲ್ಲಿ ೪ ಹಾಗೂ ಹೊನ್ನಾಳಿಯಲ್ಲಿ ೩ ನಿವೇಶನಗಳನ್ನು ಹೊಂದಿರುವ ಪತ್ರಗಳು, ೨ ಮನೆ, ಹುಟ್ಟೂರಿನಲ್ಲಿ ೮ ಎಕರೆ ತೋಟ, ತಾವರೆ ಚಕ್ಕನಹಳ್ಳಿಯಲ್ಲಿ ೧.೭ ಎಕರೆ ಭೂಮಿ, ೭ ಲಕ್ಷ ನಗದು, ೧ ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ಹಾಗೂ ಐಷಾರಾಮಿ ಕಾರು ಹೊಂದಿರು ವುದು ಬೆಳಕಿಗೆ ಬಂದಿದೆ. ಬಿಡಿಎನಲ್ಲಿ ಮಾಲಿ ಕೆಲಸ ಮಾಡುವ ಶಿವಲಿಂಗಯ್ಯ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂರು ಭವ್ಯ ಬಂಗಲೆಗಳನ್ನು ಹೊಂದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರಾಗಿ ಸೇವೆಯಿಂದ ನಿವೃತ್ತರಾಗಿರುವ ಮಂಜುನಾಥ್, ಭೂಮಾಪನ ಇಲಾಖೆಯ ನಿವೃತ್ತ ಅಧಿಕಾರಿ ಜನಾರ್ಧನ್ ನಿವಾಸಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಜುನಾಥ್ ಅವರ ಬಸವೇಶ್ವರನಗರದಲ್ಲಿರುವ ಶಾರದಾ ಕಾಲೋನಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಜಯನಗರ ೯ನೆ ಬ್ಲಾಕ್‌ನ ಚೈತನ್ಯ ಗೋಲ್ಡ್ ಕಾಂಪ್ಲೆಕ್ಸ್ ಹಾಗೂ ಮಗಳ ಹೆಸರಿನಲ್ಲಿರುವ ಕೆ.ಆರ್.ಪುರಂನ ಅಪಾರ್ಟ್ಮೆಂಟ್, ತಾವರೆಕೆರೆಯಲ್ಲಿ ತಾಯಿ ಹೆಸರಿನಲ್ಲಿರುವ ೪ ಎಕರೆ ಜಮೀನು ಮತ್ತಿತರ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಜನಾರ್ಧನ್ ಅಕ್ರಮವಾಗಿ ಸಂಪಾದಿಸಿದ್ದ ಭಾರೀ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಕಾರವಾರದ ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಉಪನೋಂದಣಾಕಾರಿಯಾಗಿರುವ ಶ್ರೀಧರ್ ಅವರ ಕನಕಪುರ ಸಮೀಪದ ಅಗರದಲ್ಲಿರುವ ತೋಟದ ಮನೆ ಹಾಗೂ ಮತ್ತಿತರ ಕಡೆಗಳಲ್ಲೂ ದಾಳಿ ನಡೆದಿದೆ.

ಕೋಲಾರ ಎಸಿಬಿಯ ೮ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ ಮಡಿಕೇರಿ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್, ಕೋಲಾರ, ಕನಕಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಸಂಪಾದಿಸಿರುವ ಕೋಟಿ ಕೋಟಿ ಮೌಲ್ಯದ ಸಂಪತ್ತನ್ನು ಪತ್ತೆ ಹಚ್ಚಿದೆ.ಹಾಸನದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ರಾಮಕೃಷ್ಣ ಅವರ ಮನೆ ಮೇಲೆ ಎಸಿಬಿ ಡಿವೈಎಸ್‌ಪಿ ಸತೀಶ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಸಂಪತ್ತು ಪತ್ತೆ ಹಚ್ಚಿದೆ. ಹಾಸನದ ವಿದ್ಯಾನಗರದಲ್ಲಿ ರುವ ರಾಮಕೃಷ್ಣ ಅವರ ನಿವಾಸ, ಹಿರಿಸಾವೆಯಲ್ಲಿರುವ ಮತ್ತೊಂದು ಮನೆ ಹಾಗೂ ಕುವೆಂಪು ನಗರದಲ್ಲಿರುವ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗಿದೆ. ಗುತ್ತಿದೆ. ಪರಿಶೀಲನೆ ಸಂದರ್ಭದಲ್ಲಿ ರಾಮಕೃಷ್ಣ ಅವರು ಆದಾಯ ಮೂಲಕ್ಕಿಂತ ಮೂರು ಪಟ್ಟು ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿರುವುದು ಕಂಡುಬAದಿದೆ.

 

Translate »