ಹಾಡಹಗಲೇ ಮಹಿಳೆ ಹತ್ಯೆ: ೪೮ ಗಂಟೆಯೊಳಗೆ ಆರೋಪಿ ಬಂಧನ
ಮೈಸೂರು

ಹಾಡಹಗಲೇ ಮಹಿಳೆ ಹತ್ಯೆ: ೪೮ ಗಂಟೆಯೊಳಗೆ ಆರೋಪಿ ಬಂಧನ

June 18, 2022

ನAಬಿಕಸ್ಥ ಕೆಲಸಗಾರನೇ ಕತ್ತು ಕೊಯ್ದ !
ಕಿಕ್ಕೇರಿ, ಜೂ.೧೭- ಹಾಡಹಗಲೇ ಮೆಡಿಕಲ್ ಶಾಪ್ ಮಾಲೀಕರಾದ ಪುಷ್ಪಲತಾ ಅಲಿಯಾಸ್ ನಳಿನ(೪೫) ಅವರನ್ನು ಕತ್ತು ಕುಯ್ದು ಹತ್ಯೆ ಮಾಡಿದ್ದ ಆರೋಪಿಯನ್ನು ಘಟನೆ ನಡೆದ ೪೮ ಗಂಟೆಯೊಳಗಾಗಿ ಬಂಧಿಸುವಲ್ಲಿ ಕಿಕ್ಕೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹತ್ಯೆಗೀಡಾದ ಪುಷ್ಪ ಲತಾ ಅವರ ನಂಬಿಕೆ ಗಿಟ್ಟಿಸಿಕೊಂಡಿದ್ದು, ಅವ ರೊಂದಿಗೆ ಹಣಕಾಸಿನ ವ್ಯವಹಾರವನ್ನೂ ಹೊಂದಿದ್ದ ಉದ್ದಿನಮಲ್ಲನಹೊಸೂರು ನಿವಾಸಿ ರವಿಕುಮಾರ್(೨೯) ಬಂಧಿತ ಆರೋಪಿಯಾಗಿದ್ದು, ಹಣಕಾಸು ವ್ಯವಹಾರದ ವೈಮನಸ್ಸಿನಿಂದಾಗಿ ಹತ್ಯೆ ನಡೆದಿದೆ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

ಕಿಕ್ಕೇರಿಯ ಶ್ರೀಕಾಂತ್ ಮೆಡಿಕಲ್ ಸ್ಟೋರ್ ಮಾಲೀಕರಾಗಿದ್ದ ಪುಷ್ಪಲತಾ ಕಿಕ್ಕೇರಿ ಟೌನ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮೆಡಿಕಲ್ ಶಾಪ್‌ಗೆ ಹೊಂದಿಕೊAಡAತಿರುವ ಡಾ.ಯಶ ವಂತ್ ಅವರ ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಪುಷ್ಟಲತಾ ಟೋಕನ್ ಕೊಡುವ ಕೆಲಸವನ್ನೂ ನಿರ್ವಹಿಸುತ್ತಿದ್ದರು. ತನ್ನ ಕೃಷಿ ಚಟುವಟಿಕೆಗೆ ಸಹಕಾರಿಯಾಗಿರುವಂತೆ ರವಿಕುಮಾರ್‌ನನ್ನು ಟ್ರಾಕ್ಟರ್ ಚಾಲಕನನ್ನಾಗಿ ನೇಮಕ ಮಾಡಿಕೊಂಡಿ ದ್ದರು. ತನ್ನ ನಂಬಿಕಸ್ತನಾಗಿದ್ದರಿAದ ಆತನೊಂದಿಗೆ ಹಣಕಾಸಿನ ವ್ಯವಹಾರವನ್ನೂ ಕೂಡ ಹೊಂದಿದ್ದರು. ಆತನೂ ಕೂಡ ಪುಷ್ಪಲತಾ ಅವರಿಗೆ ಕೃಷಿ ಚಟುವಟಿಕೆಯಲ್ಲಿ ಸಹಕರಿಸುವುದರ ಜೊತೆಗೆ ಮೆಡಿಕಲ್ ಶಾಪ್‌ಗೂ ಬಂದು ಸಹಾಯ ಮಾಡು ತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪುಷ್ಪಲತಾ ಮತ್ತು ರವಿಕುಮಾರ್ ನಡುವೆ ಹಣಕಾಸು ವಿಚಾರದಲ್ಲಿ ಇತೀಚೆಗೆ ವೈಮನಸ್ಸು ಇತ್ತಾದರೂ ಪುಷ್ಪಲತಾ, ಬಹಳ ನಂಬಿಕಸ್ಥನಾದ ಆತನ ನೆರವು ಆಗಾಗ ಪಡೆಯುತ್ತಲೇ ಇದ್ದರು. ಆದರೆ ಅವರನ್ನು ಹತ್ಯೆ ಮಾಡಿಬಿಟ್ಟರೇ ತನ್ನ ಹಣಕಾಸು ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಕಾರಣಕ್ಕಾಗಿ ರವಿಕುಮಾರ್ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಜೂ.೧೫ರಂದು ಬೆಳಗ್ಗೆ ೧೦.೩೦ರ ಸುಮಾರಿಗೆ ಮೆಡಿಕಲ್ ಶಾಪ್‌ನಲ್ಲಿದ್ದ ಪುಷ್ಟಲತಾ ಅವರಿಗೆ ಕರೆ ಮಾಡಿ, ಅವರ ಜಮೀನಿನ ಮಾವಿನ ಫಸಲು ಖರೀದಿಸಿದವರು ಹಣ ಕೊಡಲು ಬಂದಿದ್ದಾರೆ ಎಂದು ಕರೆದಿದ್ದಾನೆ. ಇದನ್ನು ನಂಬಿದ ಪುಷ್ಪಲತಾ ಯಶವಂತ್ ಅವರ ಕ್ಲಿನಿಕ್‌ನ ಟೆಕ್ನಿಷಿಯನ್‌ಗೆ ತಾನು ಮಾವಿನ ಫಸಲು ಖರೀದಿಸಿದವರಿಂದ ಹಣ ಪಡೆದು ಬರುತ್ತೇನೆ. ಅಲ್ಲಿಯವರೆಗೂ ಮೆಡಿಕಲ್ ಶಾಪ್ ನೋಡಿಕೊಳ್ಳಿ ಎಂದು ತಿಳಿಸಿ ಹೋಗಿದ್ದಾರೆ. ಮಧ್ಯಾಹ್ನ ೨.೪೫ರ ಸುಮಾರಿನಲ್ಲಿ ಅವರ ಸಂಬAಧಿಕರೊಬ್ಬರು ಮೆಡಿಕಲ್ ಶಾಪ್‌ಗೆ ಬಂದಾಗ ಪುಷ್ಪಲತಾ ಮನೆಗೆ ಹೋಗಿದ್ದಾರೆ ಎಂಬ ವಿಚಾರ ತಿಳಿದು ಅಲ್ಲಿಗೆ ತೆರಳಿದ್ದಾರೆ. ಹೊರಗಿನಿಂದ ಮನೆಯ ಚಿಲಕ ಹಾಕಿದ್ದು, ಅದನ್ನು ತೆಗೆದು ಒಳಗೆ ಹೋಗಿ ನೋಡಿದರೇ ಹಾಲಿನಲ್ಲಿ ಕತ್ತು ಕುಯ್ದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಪುಷ್ಪಲತಾ ದೇಹ ಬಿದ್ದಿತ್ತು. ಈ ಸಂಬAಧ ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಠಾಣೆಯ ಪ್ರಭಾರ ವಹಿಸಿಕೊಂಡಿರುವ ಕೆ.ಆರ್.ಪೇಟೆ ಟೌನ್ ಠಾಣೆಯ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್ ನೇತೃತ್ವದ ತಂಡ ತನಿಖೆ ಕೈಗೊಂಡು ಪುಷ್ಪಲತಾ ಅವರ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಅಂದು ಬೆಳಗ್ಗೆ ೧೦.೩೦ರಲ್ಲಿ ರವಿಕುಮಾರ್ ಕೊನೆಯದಾಗಿ ಕರೆ ಮಾಡಿರುವುದು ಪತ್ತೆಯಾಗಿದೆ. ಪುಷ್ಪಲತಾ ಕರೆ ಸ್ವೀಕರಿಸಿದ ನಂತರ ಕ್ಲಿನಿಕ್‌ನ ಟೆಕ್ನಿಷಿಯನ್‌ಗೆ ತಿಳಿಸಿ, ಮನೆಗೆ ಹೋಗಿದ್ದು ಈತನ ಕರೆ ಮೇರೆಗೆ ಅವರು ಹೋಗಿದ್ದಾರೆ ಎಂಬುದನ್ನು ಪೊಲೀಸರು ಗ್ರಹಿಸಿದ್ದರು. ಆನಂತರ ಆತ ಮೆಡಿಕಲ್ ಶಾಪ್‌ನಲ್ಲಿ ಬಂದು ಕುಳಿತಿದ್ದ ಎಂಬುದನ್ನು ಗಮನಿಸಿದ ಪೊಲೀಸರು ರವಿ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಪುಷ್ಪಲತಾ ಹತ್ಯೆ ಬಯಲಾಗಿದೆ.

 

Translate »