ನಿಗದಿಗಿಂತ ಹೆಚ್ಚುವರಿ ತಂಬಾಕು ಬೆಳೆದರೆ ವಿಧಿಸಲಾಗುತ್ತಿದ್ದ ದಂಡದಲ್ಲಿ ಕಡಿತ
ಮೈಸೂರು

ನಿಗದಿಗಿಂತ ಹೆಚ್ಚುವರಿ ತಂಬಾಕು ಬೆಳೆದರೆ ವಿಧಿಸಲಾಗುತ್ತಿದ್ದ ದಂಡದಲ್ಲಿ ಕಡಿತ

October 29, 2021

ಮೈಸೂರು,ಅ.28(ಎಂಟಿವೈ)-ರಾಜ್ಯದಲ್ಲಿ ಅಧಿ ಕೃತ ತಂಬಾಕು ಬೆಳೆಗಾರರು ನಿಗದಿಗಿಂತ ಹೆಚ್ಚಾಗಿ ತಂಬಾಕು ಬೆಳೆದರೆ ಕಟ್ಟಬೇಕಾಗಿದ್ದ ದಂಡದ ಪ್ರಮಾಣ ವನ್ನು ಕಡಿತ ಮಾಡಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮಂತ್ರಾಲಯ ಅಧಿಸೂಚನೆ ಹೊರಡಿಸಿದೆ.

ಅಧಿಕೃತ ರೈತರು ಬೆಳೆದ ಹೆಚ್ಚುವರಿ ತಂಬಾಕಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ ಕಡಿಮೆ ಮಾಡು ವಂತೆ ಹಲವು ವರ್ಷಗಳಿಂದ ಸಾಕಷ್ಟು ಬಾರಿ ರೈತರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಆದರೆ ಇದುವರೆಗೂ ನಿಗದಿಗಿಂತ ಹೆಚ್ಚಾಗಿ ಬೆಳೆದ ತಂಬಾಕಿಗೆ ದಂಡ ವಿಧಿಸುವುದಲ್ಲದೆ, ಆದಾಯದಲ್ಲಿ ಕಡಿತ ಮಾಡಲಾಗುತ್ತಿತ್ತು. ಇದರಿಂದ ತಂಬಾಕು ಬೆಳೆಗಾರರಿಗೆ ಹೊರೆಯಾಗಿ ಪರಿಣಮಿಸುತ್ತಿತ್ತು.

ಹಲವು ವರ್ಷಗಳ ತಂಬಾಕು ಬೆಳೆಗಾರರ ಹೋರಾ ಟಕ್ಕೆ ಇದೀಗ ಅಲ್ಪ ಪ್ರಮಾಣದ ಜಯ ಸಿಕ್ಕಿದೆ. ಕೇಂದ್ರ ವಾಣಿಜ್ಯ ಕಾರ್ಯದರ್ಶಿ ಜಿ.ಜಿ.ಆರ್.ಸುಬ್ರಹ್ಮಣ್ಯ(ಐಎಎಸ್) ಮತ್ತು ಜಂಟಿ ಕಾರ್ಯದರ್ಶಿ ದಿವಾಕರ್‍ನಾಥ್ ಮಿಶ್ರಾ(ಐಎಎಸ್) ಇತ್ತೀಚೆಗೆ ಆಂದ್ರಪ್ರದೇಶದ ಗುಂಟೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದಂಡ ಪ್ರಮಾಣ ಕಡಿತ ಮಾಡುವ ಬಗ್ಗೆ ಘೋಷಣೆ ಮಾಡಿದ್ದು, ದೇಶದಾದ್ಯಂತ ಈ ಆದೇಶ ಅನ್ವಯವಾಗಲಿದೆ. ಇದರಿಂದ ರಾಜ್ಯದ ತಂಬಾಕು ಬೆಳೆಗಾರರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಈ ಹಿಂದೆ ಅಧಿಕೃತ ರೈತರು ಹೆಚ್ಚು ವರಿಯಾಗಿ ಬೆಳೆದ ತಂಬಾಕಿಗೆ ಕೆ.ಜಿ.ಗೆ 2 ರೂ. ಹಾಗೂ ಒಟ್ಟು ಮೌಲ್ಯದ ಶೇ.10 ದಂಡ ವಿಧಿಸಲಾಗುತ್ತಿತ್ತು. ಇದು ರೈತರಿಗೆ ಹೊರೆಯಾಗಿತ್ತು. ಇದೀಗ ಈ ಪ್ರಮಾಣವನ್ನು ಕಡಿತ ಮಾಡಿ ಹೆಚ್ಚುವರಿ ಬೆಳೆದ ತಂಬಾಕು ಕೆ.ಜಿ.ಗೆ 1 ರೂ. ಹಾಗೂ ಒಟ್ಟು ಮೌಲ್ಯದ ಶೇ.5 ದಂಡ ವಿಧಿಸಲಾಗುತ್ತದೆ. ಈ ನಿಯಮ ಪ್ರಸಕ್ತ ವರ್ಷದ ಹರಾಜು ಪ್ರಕ್ರಿಯೆಗೆ ಅನ್ವಯಿ ಸಲಿದೆ. ಅಲ್ಲದೆ ಅನಧಿಕೃತ ಬೆಳೆಗಾರರು ಬೆಳೆದ ತಂಬಾಕನ್ನು ಸಹ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಲು ಈಗಿಂದೀಗಲೇ ಅನುಮತಿ ನೀಡಲಾಗಿದೆ ಎಂದು ತಂಬಾಕು ಮಂಡಳಿ ಹರಾಜು (ನಿರ್ದೇಶನಾಲಯ) ಪ್ರಾದೇಶಿಕ ವ್ಯವಸ್ಥಾಪಕ ಹೆಚ್.ಕೆ.ಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Translate »