ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಲಾಂಛನ ಬಿಡುಗಡೆ
ಮೈಸೂರು

ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಲಾಂಛನ ಬಿಡುಗಡೆ

January 21, 2022

ಮೈಸೂರು,ಜ.20(ಆರ್‍ಕೆ)-ಎರಡು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗದೊಂದಿಗೆ ಯಶಸ್ವಿಯಾಗಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿದ್ದ ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರೂ ಆದ ರಘು ಆರ್.ಕೌಟಿಲ್ಯ, ಈಗ ಮತ್ತೊಮ್ಮೆ ಹಿರಿದಾದ ಸಾಹಸಕ್ಕೆ ಕೈಹಾಕಿದ್ದಾರೆ. ಪ್ರಸಕ್ತ ಕಾಲಮಾನಕ್ಕೆ ಮಕ್ಕಳಿಗೆ ಅನಿವಾರ್ಯವಾ ದಂತಹ ಜ್ಞಾನ ಕೌಶಲ್ಯವುಳ್ಳ ಶಾಲೆ ಸ್ಥಾಪನೆ ಮಾಡಿ ದ್ದಾರೆ. ಅದಕ್ಕೆ ಆಕರ್ಷಕ ಹಾಗೂ ಅರ್ಥಪೂರ್ಣ ವಾದ `ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್’ ಎಂದು ಹೆಸರಿಡಲಾಗಿದ್ದು, ಈ ನೂತನ ಸಂಸ್ಥೆಯ ಲಾಂಛನ (ಲೋಗೋ)ವನ್ನು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದಜೀ, ಗುರುವಾರ ಬೆಳಗ್ಗೆ ಕೆಆರ್‍ಎಸ್ ರಸ್ತೆಯಲ್ಲಿರುವ ಶ್ರೀ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸ್ವಾಮೀಜಿ ಅವರು, ಶಿಕ್ಷಣ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವ ಹೊಂದಿರುವ ಜೊತೆಗೆ ನಾಯಕತ್ವ ಗುಣವುಳ್ಳ ಆರ್.ರಘು, ಮೈಸೂರಿನ ರವೀಂದ್ರನಾಥ ಟಾಗೋರ್ ನಗರ (ಆರ್.ಟಿ.ನಗರ)ದಂತಹ ಅಭಿವೃದ್ಧಿಗೊಳ್ಳುತ್ತಿರುವ ವಸತಿ ಬಡಾವಣೆಯಲ್ಲಿ ವಿನೂತನ ಶಿಕ್ಷಣ ಸಂಸ್ಥೆ ಆರಂಭಿಸುತ್ತಿರುವುದು ಶ್ಲಾಘನೀಯ ಎಂದರು.

ಮಾನವ ರೂಪಿತ ಶಿಕ್ಷಣದ ಗುಣಮಟ್ಟವು ಸಮಾ ಜದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಮಕ್ಕಳ ಮನಸ್ಸಿ ನಲ್ಲಿರುವ ಕಲಾ, ಭೌತಿಕ, ವೈಜ್ಞಾನಿಕ ಸಾಮಥ್ರ್ಯ ಕ್ಕನುಗುಣವಾಗಿ ಯೋಗ್ಯ ಶಿಕ್ಷಣ ನೀಡಬೇಕಿದೆ. ಸೃಜನಾ ತ್ಮಕ ಹೊಸತನದ ಶಿಕ್ಷಣದಿಂದ ವಿದ್ಯಾರ್ಥಿಗಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸ ಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಹೊಸತನ, ಸೃಜನಶೀಲತೆಯೊಂದಿಗೆ ಯೋಗ್ಯ ಶಿಕ್ಷಣ ನೀಡಿದರೆ ಸಮಾಜ ಉತ್ತಮಗೊಳ್ಳುತ್ತದೆ. ಇಂದಿನ ಹಲವು ಸಮಸ್ಯೆಗಳಿಗೆ ಮೌಲ್ಯಯುತ ಶಿಕ್ಷಣದ ಕೊರತೆಯೇ ಕಾರಣ. ಸಮಾಜದಲ್ಲಿ ಒಳ್ಳೆಯದಿರುವಂತೆ ಕೆಟ್ಟದ್ದೂ ಇದೆ. ಆದರೆ ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹಿಸಿದರೆ ಒಂದಷ್ಟು ಉತ್ತಮ ಕೆಲಸಗಳಾಗುತ್ತವೆ ಎಂದು ಸ್ವಾಮಿ ಮುಕ್ತಿ ದಾನಂದಜೀ ಅವರು ಇದೇ ವೇಳೆ ನುಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಸರಿಸಿಕೊಂಡು ಜ್ಞಾನಾಧಾರಿತ ಶಿಕ್ಷಣ ನೀಡುವ ಮೂಲಕ ನೈಪುಣ್ಯ ಸ್ಕೂಲ್ ಆಫ್ ಎಕ್ಸೆಲೆನ್ಸ್ ಮಕ್ಕಳಿಗೆ ವೇಗದ ಜಗತ್ತಿ ನೊಂದಿಗೆ ಹೆಜ್ಜೆ ಹಾಕಲು ಭವ್ಯ ಬುನಾದಿ ಹಾಕಲಿ, ಒಳ್ಳೆಯದು ಮಾಡಿ ಸಮಾಜವನ್ನು ಒಳ್ಳೆಯದನ್ನಾಗಿ ಪರಿವರ್ತಿಸಲಿ ಎಂದು ಅವರು ರಘು ಹಾಗೂ ಶಾಲೆಯ ಎಲ್ಲಾ ತಂಡದವರಿಗೆ ಶುಭ ಹಾರೈಸಿದರು.

ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಸಂಸ್ಥಾಪಕ ಆರ್. ರಘು, ಬೆಳೆಯುತ್ತಿರುವ ಹೊಸ ಬಡಾವಣೆಯಾದ ಆರ್.ಟಿ.ನಗರದಲ್ಲಿ ಈ ಶೈಕ್ಷಣಿಕ ವರ್ಷದಿಂದ ಐಸಿಎಸ್‍ಇ ಶಾಲಾ ಮಾದರಿ ಯಲ್ಲಿ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಆರಂ ಭಿಸುತ್ತಿದ್ದು, ಪ್ರೀಕೆಜಿಯಿಂದ 8ನೇ ತರಗತಿವರೆಗೆ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದರು.

ಮಗುವಿನ ಪ್ರತಿಭೆ ಆಧರಿಸಿ ಹೊಸ ರೂಪದ, ರಾಷ್ಟ್ರೀಯ ಶಿಕ್ಷಣ ನೀತಿಗನುಸಾರ ಹಾಗೂ ಗುರು ಕುಲ ಪದ್ಧತಿಯ, ನಿತ್ಯ ಸಂಶೋಧನೆಗೊಳಪಡಿಸಿ ಪ್ರಾಥಮಿಕ ಶಿಕ್ಷಣ ನೀಡುವ ಉದ್ದೇಶದಿಂದ ತಾವು ಈ ಸಂಸ್ಥೆ ಆರಂಭಿಸುತ್ತಿದ್ದು, ಇದರಿಂದ ಆರ್.ಟಿ.ನಗರ ಹಾಗೂ ಸುತ್ತಮುತ್ತಲ ವಸತಿ ಬಡಾವಣೆಗಳ ಅಭಿ ವೃದ್ಧಿಗೂ ಅನುಕೂಲವಾಗಲಿದೆ ಎಂದು ರಘು ನುಡಿದರು.

ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಪವಿತ್ರಾ ಚೈತನ್ಯ, ನೈಪುಣ್ಯ ಸ್ಕೂಲ್ ಆಫ್ ಎಕ್ಸೆಲೆನ್ಸ್‍ನ ಸಲಹೆಗಾರ ಡಾ. ಎಲ್.ಪಿ.ರವಿಕುಮಾರ್ ಹಾಗೂ ಪ್ರಾಂಶುಪಾಲೆ ಶ್ರೀಮತಿ ಶಿಲ್ಪಾ ಪ್ರಶಾಂತ್, ಕೌಟಿಲ್ಯ ರಘು ಹಾಗೂ ಇತರರು ಈ ಸಂದರ್ಭ ಉಪಸ್ಥಿತದ್ದರು.

Translate »