ಯಾದವಗಿರಿ ಸರ್ಕಾರಿ ಶಾಲೆ ಅಭಿವೃದ್ಧಿ  ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಮೈಸೂರು

ಯಾದವಗಿರಿ ಸರ್ಕಾರಿ ಶಾಲೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

January 21, 2022

ಮೈಸೂರು,ಜ.20(ಆರ್‍ಕೆ)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದಿಂದ ಮಂಜೂರಾದ 31.17 ಲಕ್ಷ ರೂ. ವಿಶೇಷ ಅನು ದಾನದಡಿ ಮೈಸೂರಿನ ಯಾದವಗಿರಿಯ ಸರ್ಕಾರಿ ಶಾಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್.ನಾಗೇಂದ್ರ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ದೇವರಾಜ ಮೊಹ ಲ್ಲಾದ ಡಿ.ದೇವರಾಜ ಅರಸು ಪದವಿ ಪೂರ್ವ ಕಾಲೇಜಿಗೆ ಕೋಟಿ ರೂ., ಮೇಟಗಳ್ಳಿ ಸರ್ಕಾರಿ ಶಾಲೆಗೆ ಕೋಟಿ ರೂ., ಕುಂಬಾರ ಕೊಪ್ಪಲು ಸರ್ಕಾರಿ ಶಾಲೆಗೆ 24.93 ಲಕ್ಷ ರೂ., ಕುವೆಂಪು ಟ್ರಸ್ಟ್ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ 22.09 ಲಕ್ಷ ರೂ., ಅನು ದಾನವನ್ನು ಮುಕ್ತ ವಿಶ್ವವಿದ್ಯಾನಿಲಯದಿಂದ ಕೊಡಿಸಿ ಅಭಿವೃದ್ಧಿ ಪಡಿಸಿದ್ದೇನೆ ಎಂದರು. ಯಾದವಗಿರಿ ಶಾಲೆಯಲ್ಲಿ ಓದಿದ ಹಲವರು ಸಮಾಜದಲ್ಲಿ ಎತ್ತರಕ್ಕೆ ಬೆಳೆದು ಗಣ್ಯ ವ್ಯಕ್ತಿಗಳಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸಹ ಇಲ್ಲಿ ವ್ಯಾಸಂಗ ಮಾಡಿದ್ದಾರೆ. ಇಂತಹ ಹಳೇ ಶಾಲೆಗಳನ್ನು ಪುನರುಜ್ಜೀವನಗೊಳಿಸಲು ತಾವು ಶಕ್ತಿ ಮೀರಿ ಅನುದಾನ ನೀಡಿದ್ದೇನೆ ಎಂದು ನಾಗೇಂದ್ರ ತಿಳಿಸಿದರು.

ಕಾರ್ಪೊರೇಟರ್‍ಗಳಾದ ಎಸ್‍ಬಿಎಂ ಮಂಜು, ರವೀಂದ್ರ, ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಆರ್.ರಾಜಣ್ಣ, ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರ ರಾಜೇ ಅರಸ್, ಮುಖಂಡರಾದ ಸೋಮಶೇಖರ ರಾಜ್, ದಿನೇಶ್ ಗೌಡ, ಕುಮಾರಗೌಡ, ಮಹೇಶ, ಎಲ್.ಮಂಜುನಾಥ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »