ಜನವರಿ 23, 24ರಂದು  ಅರ್ಕ ಮಹಾ ಗಣಪತಿ  ದೇವಸ್ಥಾನದ ವಾರ್ಷಿಕೋತ್ಸವ
ಮೈಸೂರು

ಜನವರಿ 23, 24ರಂದು ಅರ್ಕ ಮಹಾ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ

January 21, 2022

ಮೈಸೂರು, ಜ.20-ಮೈಸೂರು-ಗದ್ದಿಗೆ ರಸ್ತೆಯ ಕಣಿ ಯನಹುಂಡಿ ಗೇಟ್‍ನಲ್ಲಿರುವ ಶ್ರೀ ಅರ್ಕ ಮಹಾಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಜ.23 ಮತ್ತು 24ರಂದು ನಡೆಯಲಿದೆ. ಜ.23ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಯಾಗಶಾಲಾ ಮಂಟಪ ಪ್ರವೇಶ, ಗುರು ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ದೇವನಾಂದಿ, ಕೌತುಕ ಬಂಧನ, ಅಂಕುರಾರ್ಪಣ, ಋತಿಕ್ ವರಣ ಮತ್ತು ಕಳಸ ಸ್ಥಾಪನೆ, ಗಂಗಾಪೂಜೆ, ವಾಸ್ತು ಹೋಮ, ಅಷ್ಟ ದಿಕ್ಪಾಲಕ ಬಲಿ ನಡೆಯಲಿದೆ. ಜ.24ರಂದು ಬೆಳಗ್ಗೆ 9 ಗಂಟೆಗೆ ನವಗ್ರಹ ಪುರಸ್ಸರ ಮೋದಕ ಗಣಪತಿ ಹೋಮ, 11 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 12ಕ್ಕೆ ಯೋಗಿ ಶ್ರೀ ಅರ್ಕ ಗುರೂಜಿ ಅವರಿಂದ ಅನುಗ್ರಹ ಭಾಷಣ ನಡೆಯಲಿದೆ. ಈ ಕಾರ್ಯಕ್ರಮ ಗಳ ದಿವ್ಯ ಸಾನ್ನಿಧ್ಯವನ್ನು ನಂಜನಗೂಡು ದೇವನೂರು ಮಠದ ಶ್ರೀ ಮಹಾಂತ ಸ್ವಾಮಿಗಳು, ಹುಣಸೂರು ಮಾದಹಳ್ಳಿ, ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮಿಗಳು, ಬರಡನಪುರ ಮಹಾಂತೇಶ್ವರ ಮಠದ ಶ್ರೀ ಪರಶಿವಮೂರ್ತಿ ಸ್ವಾಮಿಗಳು ಮತ್ತು ಕುಂದೂರು ಮಠದ ಶ್ರೀ ಶರತ್‍ಚಂದ್ರ ಸ್ವಾಮಿಗಳು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Translate »