ಮೈಸೂರು, ಜು.7- ಕೋವಿಡ್-19 ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಮುಸುಕಿನ ಜೋಳ ಬೆಳೆದಿ ರುವ 10,116 ರೈತರಿಗೆ ರೂ 5,000/- ಆರ್ಥಿಕ ನೆರವನ್ನು ಈಗಾಗಲೇ ವರ್ಗಾವಣೆ ಮಾಡ ಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. 2019-20ನೇ ಸಾಲಿನಲ್ಲಿ ಇ- ಆಡಳಿತ ವತಿಯಿಂದ ಕೈಗೊಳ್ಳಲಾದ ಬೆಳೆ ತಂತ್ರಾಂಶದಲ್ಲಿ ದಾಖಲಿಸಿರುವ ಮುಸುಕಿನ ಜೋಳ ಬೆಳೆದಿರುವ ರೈತರ ಪಟ್ಟಿಯನ್ನು ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ. ಈಖUIಖಿS ತಂತ್ರಾಂಶದಲ್ಲಿ ನೋಂದಣಿಯಾಗದ ರೈತರು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಪಹಣಿ(ಖಖಿಅ) ದಾಖಲೆ, ಮೊಬೈಲ್ ಸಂಖ್ಯೆ ಮತ್ತು ಸಂಪೂರ್ಣ ವಿಳಾಸದ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳತಕ್ಕದ್ದು. ಮರಣ ಹೊಂದಿರುವ ಪ್ರಕರಣಗಳಲ್ಲಿ, ತಮ್ಮ ಹೆಸರಿನಲ್ಲಿ ಜಮೀನು ಇಲ್ಲದೆ ಪೂರ್ವಜರ ಹೆಸರಿನಲ್ಲಿ ಜಮೀನು ಇರುವ ರೈತರು ಗ್ರಾಮ ಲೆಕ್ಕಾಧಿಕಾರಿಯಿಂದ ವಾರಸುದಾರರ ಪ್ರಮಾಣ ಪತ್ರ (ಅeಡಿಣiಜಿiಛಿಚಿಣe oಜಿ Suಛಿಛಿessioಟಿ) ಪಡೆಯುವುದು ಮತ್ತು ಇತರೆ ಕುಟುಂಬದ ಸದಸ್ಯರಿಂದ ಒಪ್ಪಿಗೆ ಪತ್ರ/ನಿರಾಕ್ಷೇಪಣಾ ಪತ್ರ ಪಡೆದು ಮೇಲಿನ ದಾಖಲೆ ಗಳೊಂದಿಗೆ ನೊಂದಣಿ ಮಾಡಿಸಿಕೊಳ್ಳಬೇಕು. ಈಖUIಖಿS ತಂತ್ರಾಂಶದಲ್ಲಿ ನೋಂದಾಯಿಸಿ ಕೊಂಡ ಜಂಟಿ ಖಾತೆದಾರರ ಪೈಕಿ ಕೇವಲ ಒಬ್ಬ ರೈತರಿಗೆ ಆರ್ಥಿಕ ನೆರವು ವರ್ಗಾವಣೆ ಮಾಡಲು ಅವಕಾಶವಿರುವುದರಿಂದ, ರೈತರು ಉಳಿದ ಖಾತೆದಾರರಿಂದ ಒಪ್ಪಿಗೆ ಪತ್ರವನ್ನು ನೋಟರಿಯವರಿಂದ ದೃಢೀಕರಿಸಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
