ಇಂದಿನಿಂದ ಐದು ದಿನ ಕೊಡಗಿನಲ್ಲಿ ಸಾಧಾರಣ ಮಳೆ
ಮೈಸೂರು

ಇಂದಿನಿಂದ ಐದು ದಿನ ಕೊಡಗಿನಲ್ಲಿ ಸಾಧಾರಣ ಮಳೆ

July 8, 2020

ಮೈಸೂರು, ಚಾ.ನಗರ, ಮಂಡ್ಯದಲ್ಲಿ ತುಂತುರು ಮಳೆ
ಮೈಸೂರು, ಜು.7(ಆರ್‍ಕೆಬಿ)- ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.8ರಿಂದ 12ರವರೆಗೂ ಹಳೆ ಮೈಸೂರು ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಹಾಗೂ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆ ಗಳಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಮೈಸೂರು ಜಿಲ್ಲೆಯಲ್ಲಿ ಗರಿಷ್ಠ 28-29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21ರಿಂದ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖ ಲಾಗಲಿದೆ. ಕೊಡಗು ಜಿಲ್ಲೆಯಲ್ಲಿ ಗರಿಷ್ಠ 22-23, ಕನಿಷ್ಠ 18-19, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ 29-30, ಕನಿಷ್ಠ 20-21, ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಟ 28-29 ಹಾಗೂ ಕನಿಷ್ಠ 21-22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.

Translate »