ವಿಧಾನಸೌಧ ಮುಂಭಾಗಕ್ಕೆ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಳಾಂತರ
News

ವಿಧಾನಸೌಧ ಮುಂಭಾಗಕ್ಕೆ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಳಾಂತರ

January 24, 2022

Éಂಗಳೂರು, ಜ.23- ವಿಧಾನಸೌಧದಲ್ಲಿ ಈಗಾಗಲೇ ನೇತಾಜಿ ಅವರ ಪ್ರತಿಮೆ ಇದ್ದು, ಅದನ್ನು ಕಟ್ಟಡದ ಮುಂಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಹೇಳಿದ್ದಾರೆ.

ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ವಿಧಾನಸೌಧ ಆವರಣದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಭಾರತಕ್ಕೆ ಇಂದು ಹೆಮ್ಮೆಯ ದಿನ, ನೇತಾಜಿ ಬ್ರಿಟಿಷರ ವಿರುದ್ಧ ಸೈನ್ಯವನ್ನು ಕಟ್ಟಿದ ಅಪ್ರತಿಮ ನಾಯಕ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಪಾತ್ರ ದೊಡ್ಡದು. ಆಜಾದ್ ಹಿಂದ್ ಫೌಜ್‍ನಲ್ಲಿ 60 ಸಾವಿರ ಯುವಕರನ್ನು ಸಂಘಟಿಸಿ ಸ್ವಾತಂತ್ರ್ಯಕ್ಕೆ ದೊಡ್ಡ ಭದ್ರ ಬುನಾದಿ ಹಾಕಿದವರು ಇವರು ಎಂದು ಹೇಳುವ ಮೂಲಕ ಸುಭಾಷ್‍ಚಂದ್ರ ಬೋಸರ ದೇಶಭಕ್ತಿ, ದೇಶಕ್ಕಾಗಿ ತ್ಯಾಗ ಮಾಡುವ ಅವರ ಧ್ಯೇಯವನ್ನು ಇಂದಿನ ಯುವಕರಲ್ಲಿ ಭಿತ್ತಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಇಡೀ ವರ್ಷ ನೇತಾಜಿಯವರ ಹುಟ್ಟುಹಬ್ಬವನ್ನು ಕಾಲೇಜಿನಲ್ಲಿ ಡಿಬೇಟ್, ಎಕ್ಸಿಬಿಷನ್‍ಗಳನ್ನು ಮಾಡುವ ಮೂಲಕ ಆಚರಿಸುವಂತೆ ತಿಳಿಸಿದರು. ಜೊತೆಗೆ ನೇತಾಜಿಯವರ ಕೃತಿಗಳನ್ನು ಕನ್ನಡದಲ್ಲಿ ಮುದ್ರಣ ಮಾಡುವ ಕೆಲಸ ಮಾಡುವುದಾಗಿ ಹೇಳಿದರು. ಮುಂದಿನ ಹುಟ್ಟುಹಬ್ಬದೊಳಗೆ ನೇತಾಜಿಯವರ ಪ್ರತಿಮೆಯನ್ನು ವಿಧಾನಸಭೆ ಮುಂದಿರುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.

Translate »