ಮ್ಯಾನ್‌ಹೋಲ್‌ಗಳಲ್ಲಿ ಹೂಳು ತೆಗೆಯಲು ಬಂಡಿಕೂಟ್ ರೋಬೋಟ್ ಬಳಕೆ
ಮೈಸೂರು

ಮ್ಯಾನ್‌ಹೋಲ್‌ಗಳಲ್ಲಿ ಹೂಳು ತೆಗೆಯಲು ಬಂಡಿಕೂಟ್ ರೋಬೋಟ್ ಬಳಕೆ

December 18, 2021

ಮೈಸೂರು, ಡಿ.೧೭(ಜಿಎ)- `ಬಂಡಿ ಕೂಟ್ ರೋಬೋಟ್’ ಯಂತ್ರ ಉಪಯೋಗಿಸಿ ದೊಡ್ಡ ದೊಡ್ಡ ಮ್ಯಾನ್ ಹೋಲ್‌ಗಳಲ್ಲಿ ಹೂಳು ತೆಗೆಯಲು ಮೈಸೂರು ನಗರ ಪಾಲಿಕೆ ಮುಂದಾಗಿದೆ.

ಮೈಸೂರು ಮಹಾನಗರ ಪಾಲಿಕೆ ೨೦೨೧ರ ಜನವರಿಯಲ್ಲಿ ಜೆಮ್ ಪೋರ್ಟಲ್ ಮೂಲಕ ಕೌನ್ಸಿಲ್‌ನಿಂದ ೩೯ ಲಕ್ಷ ರೂ. ಗಳಿಗೆ ಅನುಮೋದನೆ ಪಡೆದು `ಬಂಡಿ ಕೂಟ್ ರೋಬೋಟ್’ ಯಂತ್ರವನ್ನು ಕೇರಳ ಮೂಲದ ಚೆನ್ ರೊಬೋಟಿಕ್ಸ್ ಎಂಬ ಸಂಸ್ಥೆಯಿAದ ಖರೀದಿಸಲಾಗಿತ್ತು.

ರೊಬೋಟಿಕ್ಸ್ ಸಂಸ್ಥೆಯಿAದ ರೊಬೋಟ್ ಯಂತ್ರ ಬಳಕೆ ಮತ್ತು ನಿರ್ವಹಣೆ ಹೇಗೆಂಬುದರ ಕುರಿತು ಹಲವು ತಿಂಗ ಳಿಂದ ಪಾಲಿಕೆ ಸಿಬ್ಬಂದಿಗಳಿಗೆ ತರಬೇತಿ ಕೊಡಿಸಲಾಗಿದೆ. ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ೭ರಿಂದ ೮ ಅಡಿ ಬೃಹತ್ ಮ್ಯಾನ್ ಹೋಲ್‌ಗಳಿವೆ. ಈ ಮ್ಯಾನ್ ಹೋಲ್‌ಗಳಲ್ಲಿ ತುಂಬಿಕೊಳ್ಳುವ ದಪ್ಪ ಕಲ್ಲು, ಹೂಳನ್ನು ತೆಗೆಯಲು ಈ ಯಂತ್ರ ವನ್ನು ಬಳಸಿಕೊಳ್ಳಲಾಗುವುದು ಎಂದು ನಗರಪಾಲಿಕೆ ಒಳಚರಂಡಿ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಸಿಂಧು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.


ನಿರ್ವಹಣೆ: ಈ ಯಂತ್ರದ ನಿರ್ವಹಣೆಗೆ ಪಾಲಿಕೆಯೊಂದಿಗೆ ರೋಬೋಟಿಕ್ ಸಂಸ್ಥೆಯ ಪ್ರತಿನಿಧಿಗಳು ಸದಾ ಸಂಪರ್ಕದಲ್ಲಿದ್ದು, ಈ ರೋಬೋಟ್ ಬಳಸಲು ಕೇವಲ ಒಬ್ಬ ಸಿಬ್ಬಂದಿ ಬೇಕಾಗುತ್ತದೆ. ಅದನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕೊಂಡೊ ಯ್ಯಲು ಇಬ್ಬರು ಸಿಬ್ಬಂದಿಗಳ ನೆರವು ಬೇಕಾ ಗುತ್ತದೆ. ಈ ರೋಬೋಟ್ ಚಾಲನೆಗೆ ಜನರೇಟರ್ ಬಳಕೆ ಮಾಡಿ ಕೊಳ್ಳಲಾಗು ವುದು. ಮುಂದೆ ಯಂತ್ರದಲ್ಲಿ ಯಾವುದೇ ತಾಂತ್ರಿಕ ದೋಷ ಕಾಣ ಸಿಕೊಂಡರೆ ರೋಬೋ ಟಿಕ್ ಸಂಸ್ಥೆಯವರು ನೆರವು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದರ ವಿಶೇಷತೆ: ಈ ರೋಬೋಟ್ ಬಳಕೆಯಿಂದ ಮ್ಯಾನುಯಲ್ ಸ್ಕಾ÷್ಯವೆಂಜರ್ ಕಾಯ್ದೆ -೨೦೧೩ರ ಅನುಪಾಲನೆಗೆ ಸಹಕಾರಿಯಾಗಿದೆ. ಏಕೆಂದರೆ ಬೃಹತ್ ಯುಜಿಡಿ ತಳದಲ್ಲಿ ತ್ಯಾಜ್ಯ ಸಂಗ್ರಹವಾಗಿ ಯುಜಿಡಿ ನೀರು ರಸ್ತೆಗೆ ಹರಿಯುತ್ತಿತ್ತು. ಇದನ್ನು ಸರಿಪಡಿಸಲು ಸಿಬ್ಬಂದಿಗಳನ್ನು ಇಳಿಸಲೇಬೇಕಾದ ಅನಿವಾರ್ಯತೆ ಈ ಹಿಂದೆ ಇತ್ತು. ಆದರೆ ರೋಬೋಟ್ ಖರೀದಿ ಯಿಂದ ಈ ಸಮಸ್ಯೆ ಬಗೆಹರಿದಂತಾಗಿದೆ.

ಈ ರೋಬೋಟ್‌ನಲ್ಲಿ ಅತ್ಯಾಧುನಿಕ ಕ್ಯಾಮೆರಾ ಅಳವಡಿಸಿರುವುದರಿಂದ ಯುಜಿಡಿಯೊಳಗೆ ಸಂಗ್ರಹವಾಗಿರುವ ತ್ಯಾಜ್ಯವನ್ನು ಪತ್ತೆಹಚ್ಚಿ, ಸುಲಭವಾಗಿ ಮೇಲೆತ್ತಬಹುದಾಗಿದೆ ಹಾಗೂ ಡಿಸಿ ಲ್ಟಿಂಗ್ ವಾಹನಗಳು ಪ್ರವೇಶಿಸಲಾಗದ ರಸ್ತೆ ಇಕ್ಕೆಲಗಳಲ್ಲಿರುವ ಯುಜಿಡಿ ಗುಂಡಿ ಗಳನ್ನು ಸ್ವಚ್ಛಗೊಳಿಸಲು ಈ ರೋಬೋಟ್ ಯಂತ್ರ ಅತ್ಯಂತ ಪ್ರಯೋಜನಕಾರಿ. ಒಂದು ಬಾರಿಗೆ ೧೨೫ ಕೆಜಿ ಘನತ್ಯಾಜ್ಯವನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಸುಮಾರು ೨೦ ರಿಂದ ೩೦ ಕೆಜಿಯಷ್ಟು ಭಾರದ ಹೂಳನ್ನು ಎತ್ತುವ ಸಾಮರ್ಥ್ಯ ಈ ಯಂತ್ರ ಹೊಂದಿದೆ.

Translate »