ಮೈಸೂರಲ್ಲಿ ಕೈಗಾರಿಕೆ ಸ್ಥಾಪಿಸಲು ಬೃಹತ್ ಕಂಪನಿಗಳ ಉತ್ಸುಕತೆ
ಮೈಸೂರು

ಮೈಸೂರಲ್ಲಿ ಕೈಗಾರಿಕೆ ಸ್ಥಾಪಿಸಲು ಬೃಹತ್ ಕಂಪನಿಗಳ ಉತ್ಸುಕತೆ

December 18, 2021

ಮೈಸೂರು, ಡಿ. ೧೭(ಆರ್‌ಕೆ)- ಮ್ಯಾನು ಫ್ಯಾಕ್ಚರಿಂಗ್ ಮತ್ತು ಟೆಕ್ನಾಲಜಿ ಕೈಗಾರಿಕೆ ಸ್ಥಾಪಿಸಲು ದೊಡ್ಡ ದೊಡ್ಡ ಕಂಪನಿಗಳು ಮೈಸೂರಿನತ್ತ ಮುಖ ಮಾಡಿವೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಇಂದಿಲ್ಲಿ ತಿಳಿಸಿದ್ದಾರೆ.

ಕಾನ್‌ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟಿç (ಸಿಐಐ) ವತಿಯಿಂದ ಮೈಸೂರಿನ ಹೆಬ್ಬಾಳಿನಲ್ಲಿರುವ ಹೋಟೆಲ್ ಕಂಟ್ರಿ ಇನ್ ಸಭಾಂಗಣದಲ್ಲಿ ಏರ್ಪಡಿಸಿದ್ದSustai nability Through Futuristic Manufacturing ಎಂಬ ವಿಷಯ ಕುರಿತ ಆನ್ಯುಯಲ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಟೆಕ್ನಾಲಜಿ ಕಾನ್ಫರೆನ್ಸ್-೨೦೨೧ನಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಏಷಿಯನ್ ಪೇಂಟ್ಸ್ ಸೇರಿದಂತೆ ಹಲವು ಕಂಪನಿಗಳು ಮೈಸೂರಲ್ಲಿ ತಮ್ಮ ಕೈಗಾ ರಿಕಾ ಘಟಕಗಳನ್ನು ಸ್ಥಾಪಿಸಿದ್ದು, ಟಾಟಾ ದಂತಹ ಹಲವು ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳೂ ಮೈಸೂರಲ್ಲಿ ತಮ್ಮ ಯೂನಿಟ್ ವಿಸ್ತರಿಸಲು ಆಸಕ್ತಿ ತೋರಿವೆ. ಕೈಗಾರಿಕೆ ಗಳ ಸ್ಥಾಪನೆಗೆ ಇಲ್ಲಿ ಮೂಲಭೂತ ಸೌಕರ್ಯ, ಉತ್ತಮ ವಾತಾವರಣವು ಅದಕ್ಕೆ ಪ್ರಮುಖ ಕಾರಣ ಎಂದು ಅವರು ನುಡಿದರು.

ಮಾಹಿತಿ ತಂತ್ರಜ್ಞಾನ ಅಲೆಯು ಡಿಜಿಟ ಲೈಜೇಷನ್ ಅಲೆಗಿಂತ ವಿಭಿನ್ನವಾದುದಾ ಗಿದೆ. ಐಟಿ ಅಲೆಯು ಪ್ರಾಥಮಿಕವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅನು ಕೂಲವಾದರೆ, ಡಿಜಿಟಲೈಜೇಷನ್ ಅಲೆಯು ಉತ್ಪಾದನಾ ವಲಯಕ್ಕೆ ಪೂರಕ ವಾಗಿದೆ. ಇದು ಆರ್ಥಿಕ ಸಬಲತೆಗೂ ಅನು ಕೂಲವಾಗಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.ಬ್ರಿಟನ್, ಜರ್ಮನಿ, ಜಪಾನ್, ಚೈನಾ, ಫ್ರಾನ್ಸ್ ದೇಶಗಳೂ ಸಹ ಮ್ಯಾನು ಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಬುನಾದಿಯಾಗಿದೆ. ನಾವೂ ಸಹ ಕೈಗಾರಿಕಾ ವಲಯದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ಅದೇ ರೀತಿ ಎಲೆಕ್ಟಾçನಿಕ್ಸ್ ಉತ್ಪನ್ನಗಳಾದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಹಾಗೂ ಇತರ ವಸ್ತುಗಳಲ್ಲೂ ಹಿಂದೆ ಬಿದ್ದಿಲ್ಲ ಎಂದು ಅವರು ನುಡಿದರು.

ಭಾರತ ಸರ್ಕಾರವು ೭೬,೦೦೦ ಕೋಟಿ ರೂ.ಗಳ ಮ್ಯಾನುಫ್ಯಾಕ್ಚರಿಂಗ್ ಸೆಮಿ ಕಂಡಕ್ರ‍್ಸ್ನ ಪಿಎಲ್‌ಐ ಯೋಜನೆಗೆ ಅನುಮೋದನೆ ನೀಡಿದೆ. ಹಾಗಾಗಿ ಯುವ ಉದ್ದಿಮೆದಾರರಿಗೆ ಕೈಗಾರಿಕೆ ಸ್ಥಾಪಿಸಲು ಮೈಸೂರು ಭಾಗದಲ್ಲಿ ವಿಫುಲ ಅವಕಾಶ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ಡಾ. ಬಗಾದಿ ಗೌತಮ್ ನುಡಿದರು.

ಸಿಐಐ ಮೈಸೂರು ಅಧ್ಯಕ್ಷ ಪವನ್ ರಂಗ ಅವರು ಮಾತನಾಡಿ, ಕೋವಿಡ್ ನಿಂದಾಗಿ ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟಿç ಮೇಲೆ ಹೊಡೆತ ಬಿದ್ದಿತ್ತಾದರೂ, ನಂತರ ವಿಶ್ವದಾದ್ಯಂತ ಚೇತರಿಕೆಯಾಗುತ್ತಿದೆ, ತಂತ್ರಜ್ಞಾನ ಮತ್ತು ಡಿಜಿಟಲೀಕರಣವನ್ನು ಬಳಸಿಕೊಂಡು ಭವಿಷ್ಯದಲ್ಲಿ ಪ್ರಗತಿ ಸಾಧಿಸಬೇಕಾಗಿದೆ ಎಂದರು.

ಸಿಐಐ ಮೈಸೂರು ಮ್ಯಾನುಫ್ಯಾಕ್ಚರಿಂಗ್ ಪ್ಯಾನೆಲ್ ಸಂಚಾಲಕ ವಿ. ಈಶ್ವರರಾವ್, ಡಿಐಐಎಲ್ ಮಾಜಿ ಅಧ್ಯಕ್ಷ ಅಶೋಕ ರಾವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು, ಸಿಐಐ ಉಪಾಧ್ಯಕ್ಷ ಸುಪ್ರಿಯಾ ಸಾಲಿಯಾನ್ ಅವರು ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡಿದ್ದರು.

ಸಿಐಐ ಕರ್ನಾಟಕ ಉಪಾಧ್ಯಕ್ಷ ಜ್ಯೋತಿ ಪ್ರಧಾನ ಅವರೂ ಸಹ ಆನ್‌ಲೈನ್‌ನಲ್ಲಿ ಭಾಗವಹಿಸಿ ಮಾತನಾಡಿದರು. ಮೈಸೂರು ಹಾಗೂ ವಿವಿಧ ಭಾಗಗಳಿಂದ ೧೫೦ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು ಪಾಲ್ಗೊಂಡಿ ದ್ದರು. ನಂತರ ವಿವಿಧ ವಿಷಯಗಳ ಕುರಿತ ಮೂರು ಗೋಷ್ಠಿಗಳು ನಡೆದವು.

Translate »