ವಾರಣಾಸಿಯಲ್ಲಿ ಮೈಸೂರು ಮೇಯರ್ ಸುನಂದಾ ಪಾಲನೇತ್ರ
ಮೈಸೂರು

ವಾರಣಾಸಿಯಲ್ಲಿ ಮೈಸೂರು ಮೇಯರ್ ಸುನಂದಾ ಪಾಲನೇತ್ರ

December 18, 2021

ಮೈಸೂರು, ಡಿ. ೧೭(ಆರ್‌ಕೆ)- ವಾರಣಾಸಿಯಲ್ಲಿ ಇಂದು ನಡೆದ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನದಲ್ಲಿ ಮೈಸೂರು ಮೇಯರ್ ಸುನಂದಾ ಪಾಲನೇತ್ರ ಅವರು ಪಾಲ್ಗೊಂಡಿದ್ದರು.

ಅವರೊAದಿಗೆ ಶಿವಮೊಗ್ಗ ಮೇಯರ್ ಸುನಿತಾ ಅಪ್ಪಣ್ಣ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ದಾವಣಗೆರೆ ಮೇಯರ್ ಎಸ್.ಟಿ. ವೀರೇಶ್ ಹಾಗೂ ತುಮಕೂರು ಮೇಯರ್ ಕೃಷ್ಣಪ್ಪ ಸಹ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಮAತ್ರಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು. ‘ನ್ಯೂ ಅರ್ಬನ್ ಇಂಡಿಯಾ’ ಸಂಕಲ್ಪದೊAದಿಗೆ ನಡೆದ ಸಮ್ಮೇಳನ ದಲ್ಲಿ ಮಾತನಾಡಿದ ಅವರು, ನಗರಗಳ ಅಭಿವೃದ್ಧಿಗಾಗಿ ಮೇಯರ್‌ಗಳ ಕಾರ್ಯ ಶ್ಲಾಘನೀಯ ಎಂದರು.
ಕಾಶಿ ನಗರದ ಅಭಿವೃದ್ಧಿಯು ದೇಶದ ಇತರ ನಗರಗಳ ಪ್ರಗತಿಗೆ ಮಾದರಿಯಾಗಿದೆ. ಬಹುತೇಕ ನಗರಗಳು ಸಾಂಪ್ರದಾಯಿಕ ರೂಪುರೇಷೆ ಹೊಂದಿದ್ದು, ಅವುಗಳನ್ನು ಸಾಂಪ್ರದಾಯಿಕವಾಗಿಯೇ ಅಭಿವೃದ್ಧಿಪಡಿಸಬೇಕು. ಅದರ ಸ್ವರೂಪ, ಸ್ಥಳೀಯ ಕೌಶಲ್ಯ ಮತ್ತು ಉತ್ಪನ್ನಗಳನ್ನೂ ಗುರುತಿಸಬೇಕು ಎಂದು ಪ್ರಧಾನಿಗಳು ನುಡಿದರು.
ದೇಶದ ಅಭಿವೃದ್ಧಿಗೆ ಸಂಸ್ಕೃತಿ ಮತ್ತು ಪಾರಂಪರಿಕತೆಯ ಕೊಡುಗೆ ಬಗ್ಗೆ ಮಾತನಾಡಿದ ಅವರು, ಭಾರತಕ್ಕೆ ರೆವಲ್ಯೂಷನ್‌ಗಿಂತ ಎವೆಲ್ಯೂಷನ್ ಅಗತ್ಯವಿದೆ. ನಾವು ಪಾರಂಪರಿಕ ಕಟ್ಟಡಗಳನ್ನು ಕೆಡವಬಾರದು ಬದಲಾಗಿ ಪುನರುಜ್ಜೀವನಗೊಳಿಸಬೇಕು. ಅಲ್ಲದೆ ಮೇಯರ್‌ಗಳು ತಮ್ಮ ನಗರಗಳನ್ನು ಸ್ವಚ್ಛವಾಗಿರಿಸಲು ಶ್ರಮಿಸಬೇಕು ಎಂದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Translate »