ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದ ನನ್ನ ಸೋಲಿಗೆ ಕಾರಣ: ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಕೌಟಿಲ್ಯ ರಘು ಆರೋಪ
ಮೈಸೂರು

ಕಾಂಗ್ರೆಸ್, ಜೆಡಿಎಸ್ ಒಳ ಒಪ್ಪಂದ ನನ್ನ ಸೋಲಿಗೆ ಕಾರಣ: ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ಕೌಟಿಲ್ಯ ರಘು ಆರೋಪ

December 18, 2021

ಮೈಸೂರು,ಡಿ.೧೭(ಎಂಟಿವೈ)- ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಒಳ ಒಪ್ಪಂದವೇ ನನ್ನ ಸೋಲಿಗೆ ಕಾರಣವಾಯಿತು ಎಂದು ಬಿಜೆಪಿ ಅಭ್ಯರ್ಥಿ ಆರ್. ರಘು ಕೌಟಿಲ್ಯ ಆರೋಪಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣ ಕೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಡಿ. ತಿಮ್ಮಯ್ಯ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ಚಲಾವಣೆಯಾಗಿದ್ದ ಮತಪತ್ರದಲ್ಲಿ ದ್ವಿತೀಯ ಪ್ರಾಶಸ್ತ್ಯ ಮತ ಹೆಚ್ಚಿನ ಸಂಖ್ಯೆ ಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಅವರಿಗೆ ಚಲಾವಣೆಯಾಗಿತ್ತು. ಇದು ಜೆಡಿಎಸ್-ಕಾಂಗ್ರೆಸ್ ನಡುವಿನ ಒಳ ಒಪ್ಪಂದಕ್ಕೆ ಸಾಕ್ಷಿಯಾಗಿದೆ ಎಂದರು.

ಸಿದ್ಧಾAತ ಕುರಿತು ದೊಡ್ಡ ಮಾತುಗಳನ್ನು ಆಡುವ ಉಭಯ ಪಕ್ಷಗಳ ನಾಯಕರು ಈ ಒಳ ಒಪ್ಪಂದದ ವಿಚಾರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಸೋಲಿನೊಂದಿಗೆ ನನಗೆ ಚುನಾವಣಾ ರಾಜಕಾರಣದ ಕುರಿತು ಭ್ರಮನಿರಸನವಾಗಿದೆ. ಆದರೆ, ಸಕ್ರಿಯ ರಾಜ ಕಾರಣದಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದರು.
ನನ್ನ ಮೇಲೆ ವಿಶ್ವಾಸ ಇಟ್ಟು ಪಕ್ಷದ ವರಿಷ್ಠರು ಎರಡು ಬಾರಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು. ಆದರೆ, ಅವರು ನನ್ನ ಮೇಲೆ ಇಟ್ಟಿದ್ದ ಭರವಸೆ ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂಬ ಬೇಸರ ಇದೆ. ಸಣ್ಣ ಸಮುದಾಯಕ್ಕೆ ಸೇರಿದ ನನ್ನನ್ನು ಗುರುತಿಸಿ ಪಕ್ಷದ ವರಿಷ್ಠರು ಟಿಕೆಟ್ ನೀಡಿದರು. ಕಾರ್ಯಕರ್ತನಿಗೆ ಎರಡು ಬಾರಿ ಅವಕಾಶ ನೀಡಿದ ಬಿಜೆಪಿಗೆ ನಿಷ್ಠೆಯಾಗಿ ರುತ್ತೇನೆ. ಕಚೇರಿಯಲ್ಲಿ ಕಸ ಗುಡಿಸಿದರೂ ಬಿಜೆಪಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನನ್ನ ಸೋಲಿಗೆ ಸ್ವಪಕ್ಷದ ಕೆಲವು ನಾಯಕರು ಸಂಚು ನಡೆಸಿರುವ ಕುರಿತು ಸಾಮಾಜಿಕ ಜಾಲತಾಣ ದಲ್ಲಿ ಹಲವಾರು ವಿಮರ್ಶೆಗಳು ಬರುತ್ತಿವೆ. ಆದರೆ, ನನ್ನ ಸೋಲಿಗೆ ನಿಜವಾದ ಕಾರಣ ಏನು ಎಂಬು ದನ್ನು ನಾನು ತಿಳಿದುಕೊಳ್ಳಲು ಬಯಸುವುದಿಲ್ಲ. ಬದಲಿಗೆ ಸೋಲಿನ ವಿಮರ್ಶೆಯನ್ನು ಮತದಾರರೇ ಮಾಡಲಿ. ಈ ಸೋಲಿನಿಂದ ನಾನು ಎದೆ ಗುಂದುವುದಿಲ್ಲ. ನಾನು ನೈತಿಕವಾಗಿ ಗೆದ್ದಿz್ದೆÃನೆ. ಆದರೆ, ತಾಂತ್ರಿಕವಾಗಿ ಸೋತಿz್ದÉÃನೆ ಎಂದರು.

ನನ್ನ ಗೆಲುವಿಗೆ ಪಕ್ಷದ ಎಲ್ಲರೂ ಪ್ರಾಮಾಣ ಕವಾಗಿ ಪ್ರಯತ್ನ ಮಾಡಿದ್ದಾರೆ. ಬಿಜೆಪಿಯವರೇ ನನ್ನ ಸೋಲಿಗೆ ಕಾರಣ ಎಂಬ ಮಾತು ಸರಿಯಲ್ಲ. ಚುನಾವಣೆಯಲ್ಲಿ ಆ ರೀತಿಯ ವಾತಾವರಣ ಕಂಡು ಬರಲಿಲ್ಲ. ಕೊಡಗು ಜಿಲ್ಲೆಯ ಪರಿಷತ್ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಹೆಚ್ಚು ಇಲ್ಲ. ಅಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದ ಹಿನ್ನೆಲೆ ಹಾಗೂ ಅಲ್ಲಿ ಮತಗಳ ಸಂಖ್ಯೆ ಕಡಿಮೆ ಇದ್ದ ಕಾರಣಕ್ಕೆ ಸಂಸದ ಪ್ರತಾಪ್ ಸಿಂಹ ಮಡಿಕೇರಿಯಲ್ಲಿ ಮತದಾನ ಮಾಡಿದರು. ಅದರಲ್ಲಿ ತಪ್ಪೇನೂ ಇಲ್ಲ. ನಾನು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುವುದಿಲ್ಲ. ಒಂದು ವೇಳೆ ಪಕ್ಷದ ಯಾವುದೇ ಮುಖಂಡರು, ಕಾರ್ಯಕರ್ತರು ನನ್ನ ಸೋಲಿಗೆ ಕಾರಣವಾಗಿದ್ದರೆ ಅದನ್ನು ಪಕ್ಷ ಪರಾಮರ್ಶೆ ಮಾಡುತ್ತದೆ ಎಂದು ಹೇಳಿದರು.

ನಾನು ಮೊದಲ ಪ್ರಾಶಸ್ತ್ಯ ಮತಗಳಿಂದಲೇ ಗೆಲುವು ಸಾಧಿಸುವ ವಿಶ್ವಾಸ ಹೊಂದಿದ್ದೆ. ಸಮರ್ಥವಾದ ಹಡಗಿ ನಲ್ಲಿ(ಮೊದಲ ಪ್ರಾಶಸ್ತö್ಯದ ಮತ) ಸುರಕ್ಷಿತವಾಗಿ ಗೆಲುವಿನ ದಡ ಸೇರುತ್ತೇನೆ ಎಂಬ ದೃಢ ವಿಶ್ವಾಸದಿಂದ ಚುನಾ ವಣಾ ಫಲಿತಾಂಶ ನಿರೀಕ್ಷಿಸಿದ್ದೆ. ಆದರೆ, ಅದು ಸಾಧ್ಯ ವಾಗಲಿಲ್ಲ. ತೆಪ್ಪದಲ್ಲಿ(ಎರಡನೇ ಪ್ರಾಶಸ್ತö್ಯದ ಮತ) ಏರಿಳಿತದ ಅಲೆಗಳ ನಡುವೆ ಸಾಗಿ ಸೋಲಿನ ಸುಳಿಯಲ್ಲಿ ಮುಳುಗಿದೆ. ಮೊದಲ ಪ್ರಾಶಸ್ತ್ಯ ಮತ ಹಡಗು ಇದ್ದಂತೆ, ದ್ವಿತೀಯ ಪ್ರಾಶಸ್ತ್ಯ ಮತ ತೆಪ್ಪ ಇದ್ದಂತೆ. ಹಡಗಿನಲ್ಲಿ ಸಾಗಿದರೆ ಗೆಲುವಿನ ದಡ ಸೇರುವುದು ನಿಶ್ಚಿತ. ನಾನು ತೆಪ್ಪದಲ್ಲಿ ಸಾಗಿ ಹೋರಾಟ ಮಾಡಲು ಆಗದೆ ಸೋಲಿನ ಕಡಲಿನಲ್ಲಿ ಮುಳುಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದು ಅಲ್ಪಸಂಖ್ಯಾತ: ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಹಲವು ಸಮಾಜಗಳು ಇಂದಿಗೂ ಸೌಲಭ್ಯದಿಂದ ವಂಚಿತವಾಗಿವೆ. ಮೀಸಲಾತಿ ಸೌಲಭ್ಯ ಸಿಕ್ಕದೆ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹಿಂದುಗಳಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಹಲವಾರು ಸಮುದಾಯಗಳು ಇವೆ. ಆ ಸಮುದಾಯಗಳ ಅಭಿ ವೃದ್ಧಿ `ಹಿಂದುಳಿದ ವರ್ಗ’ ಮೀಸಲಾತಿಯಡಿ ಸಾಧ್ಯವಿಲ್ಲ. ಇದುವರೆಗೆ ೭೦ಕ್ಕೂ ಹೆಚ್ಚು ಜಾತಿಗಳು ಇಂದಿಗೂ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಖಾತೆಯನ್ನೇ ತೆರೆದಿಲ್ಲ. ಹಾಗಾಗಿ ಮೀಸಲಾತಿ ಸೌಲಭ್ಯ ಪಡೆಯುವಲ್ಲಿ ವಿಫಲವಾಗಿ ರುವ ಸೂಕ್ಷö್ಮ ಸಮಾಜವನ್ನು `ಹಿಂದು ಹಿಂದುಳಿದ ವರ್ಗ’ದವರನ್ನು ಹಿಂದು ಅಲ್ಪಸಂಖ್ಯಾತರನ್ನಾಗಿ ಸರ್ಕಾರ ಪರಿಗಣ ಸಿ, ಪ್ರತ್ಯೇಕ ಮೀಸಲಾತಿ ಸೌಲಭ್ಯ ನೀಡುವಂತೆ ಮನವಿ ಮಾಡುತ್ತೇನೆ. ನಾನು ಸಹ `ಹಿಂದೂ ಅಲ್ಪಸಂಖ್ಯಾತ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಾಧ್ಯಕ್ಷ ಶ್ರೀವತ್ಸ, ಬಿಜೆಪಿ ಮುಖಂಡರಾದ ವಿ. ಸೋಮಸುಂದರ್, ವಾಣ Ãಶ್ ಕುಮಾರ್, ಮಹೇಶ್‌ರಾಜೇ ಅರಸ್, ಪ್ರದೀಪ್ ಇದ್ದರು.

Translate »