ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು-ಆಸ್ಪತ್ರೆ ನಿರ್ಮಾಣವಾಗಬೇಕು
ಮೈಸೂರು

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು-ಆಸ್ಪತ್ರೆ ನಿರ್ಮಾಣವಾಗಬೇಕು

December 18, 2021

ಮೈಸೂರು, ಡಿ.೧೭(ಎಸ್‌ಬಿಡಿ)- ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದ ಆವರಣದಲ್ಲಿ ಶುಕ್ರವಾರ ನಡೆದ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ೧೨ನೇ ಘಟಿಕೋತ್ಸವದಲ್ಲಿ ಮಾತನಾಡಿ, ಕೊರೊನಾ ಸಮಯದಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಹೆಚ್ಚು ಬಿಲ್ ಪಡೆದ ಪರಿಣಾಮವಾಗಿ ಸಾಮಾನ್ಯರು ಆಸ್ಪತ್ರೆಗಳಿಗೆ ಹೋಗುವುದಕ್ಕೂ ಭಯಪಟ್ಟಿದ್ದರು. ಆದರೆ ಜೆಎಸ್‌ಎಸ್, ಎಸ್‌ಡಿಎಂ ಇನ್ನಿತರ ಹಲವು ಆಸ್ಪತ್ರೆಗಳಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿ ಮರೆಯದೆ ಕನಿಷ್ಟ ಶುಲ್ಕ ಪಡೆದು ಉತ್ತಮ ಚಿಕಿತ್ಸೆ ಕಲ್ಪಿಸುವ ಮೂಲಕ ಕೊರೊನಾ ಸೋಂಕಿತರಿಗೆ ಆತ್ಮ ವಿಶ್ವಾಸ ತುಂಬಲಾಯಿತು. ಹೀಗೆ ಎಲ್ಲಾ ಭಾಗದ ಜನರಿಗೂ ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣ ವಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ವೈದ್ಯರಾಗಬೇಕೆಂಬ ಗುರಿಯ ಹಿಂದಿರುವ ಉದ್ದೇಶ ಭಿನ್ನವಾಗಿರಬಹುದು. ಆದರೆ ಐಷಾರಾಮಿ ಕಾರು, ಬಂಗಲೆ, ಆಡಂಬರದ ಜೀವನದ ಆಸೆಯೊಂದಿಗೆ ವೈದ್ಯ ಕ್ಷೇತ್ರಕ್ಕೆ ಬರಬಾರದು. ಸಮಾಜಕ್ಕೆ ಅವಿಸ್ಮರಣ Ãಯ ಸೇವೆ ನೀಡುವ ಬಯಕೆ ಇರಬೇಕು. ಕೇವಲ ಚಿಕಿತ್ಸೆಯಿಂದ ರೋಗ ಗುಣ ವಾಗುವುದಿಲ್ಲ. ದೈವಿಕ ಹೃದಯದ ಸೇವೆ ಕಲ್ಪಿತವಾಗಬೇಕು. ವೈದ್ಯರು ಮಾನವೀಯತೆ, ಸಮುದಾಯ ಹಾಗೂ ರಾಷ್ಟಿçÃಯತೆ ಮರೆಯದೆ ಸೇವೆ ಸಲ್ಲಿಸಬೇಕು. ಕರುಣೆ ಇಲ್ಲದ ಯಾವ ಸೇವೆಯೂ ಪರಿಪೂರ್ಣವಲ್ಲ ಎನ್ನುವ ಜಾಗೃತಿ ಇರಬೇಕು. ಈ ಸಂದರ್ಭ ದಲ್ಲಿ ಜ್ಞಾನ ಮತ್ತು ಸೇವೆ ಎಲ್ಲೆಡೆ ಪಸರಿ ಸುವುದು ಬಹಳ ಮುಖ್ಯ. ಜಾಗತಿಕ ತಲ್ಲಣ ಉಂಟು ಮಾಡಿರುವ ಕೊರೊನಾ ವೈರಸ್ ಕಾಲಕಳೆದಂತೆ ರೂಪಾಂತರಿಯಾಗುತ್ತಿದೆ. ಈ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕು. ಪದವಿ ಪಡೆ ಯುವುದು ಬದುಕಿನ ಒಂದು ಘಟ್ಟವಷ್ಟೇ. ಮುಂದಿನ ದಿನಗಳಲ್ಲಿ ವೈದ್ಯಕೀಯ ಸಂಶೋ ಧನೆ, ಅಧ್ಯಯನ ಹಾಗೂ ಸಾಧನೆಗೆ ಮೀಸಲಿ ಡಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಕಾಳಜಿ ಅಗತ್ಯ: ಮಾನವನ ದೇಹ ರೋಗಗಳಿಂದ ತುಂಬಿರುವ ಎಲುಬಿನ ಗೂಡು. ಇದು ಸೊರಗಿ ನಾಶವಾಗುವ ವಸ್ತು ಎಂಬ ಸತ್ಯ ಅರಿಯದ ಅಜ್ಞಾನಿ ಗಳು ಶರೀರವನ್ನೇ ಆತ್ಮ ಎಂದು ತಿಳಿದು ದುಃಖಿತರಾಗುತ್ತಾರೆ ಎಂದು ಹಿರಿಯರು ಹೇಳಿದ್ದಾರೆ. ಜೀವನದ ಮೊದಲಾರ್ಧ ದುಡಿಮೆ, ಸಾಧನೆ, ಕುಟುಂಬ ನಿರ್ವಹಣೆ ಇನ್ನಿತರ ಕಾರಣಗಳಿಂದ ತಮ್ಮ ದೇಹದ ಆರೋಗ್ಯದ ಬಗ್ಗೆ ಗಮನ ಹರಿಸದೆ ತಪ್ಪು ಮಾಡುತ್ತೇವೆ. ಆರೋಗ್ಯವಾಗಿದ್ದರೆ ಹತ್ತಾರು ಕೆಲಸಗಳನ್ನು ಮಾಡಲು ಚೈತನ್ಯವಿರುತ್ತದೆ. ಆತ್ಮವಿಶ್ವಾಸ, ಜ್ಞಾನ, ನಂಬಿಕೆಯಿAದ ಎಂತಹ ಕಠಿಣ ಸಂದರ್ಭವನ್ನೂ ಎದುರಿಸಬಹುದು ಎಂದು ಕಿವಿಮಾತು ಹೇಳಿದರು.

ಅಕಾಡೆಮಿಯ ಕುಲಾಧಿಪತಿಗಳೂ ಆದ ಸುತ್ತೂರು ಸ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಘಟಿಕೋತ್ಸವದ ಸಾನ್ನಿಧ್ಯ ವಹಿಸಿದ್ದರು. ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರುಮಠ, ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಸುರೀಂದರ್ ಸಿಂಗ್, ಕುಲ ಸಚಿವ ಡಾ.ಬಿ.ಮಂಜುನಾಥ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್. ಸುಧೀಂದ್ರ ಭಟ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

 

Translate »