ಖ್ಯಾತ ಕ್ಯಾನ್ಸರ್ ವಿಕಿರಣ ತಜ್ಞ  ಡಾ.ಎಂ.ಎಸ್.ವಿಶ್ವೇಶ್ವರ ಇನ್ನಿಲ್ಲ
ಮೈಸೂರು

ಖ್ಯಾತ ಕ್ಯಾನ್ಸರ್ ವಿಕಿರಣ ತಜ್ಞ ಡಾ.ಎಂ.ಎಸ್.ವಿಶ್ವೇಶ್ವರ ಇನ್ನಿಲ್ಲ

August 18, 2022

ಮೈಸೂರು, ಆ.17(ಆರ್‍ಕೆ)-ಮೈಸೂರಿನ ಖ್ಯಾತ ಕ್ಯಾನ್ಸರ್ ವಿಕಿರಣತಜ್ಞ (ರೇಡಿಯೇಷನ್ ಆಂಕಾಲಜಿಸ್ಟ್) ಡಾ. ಎಂ.ಎಸ್. ವಿಶ್ವೇಶ್ವರ(59) ಅವರು ಇಂದು (ಬುಧವಾರ) ಮಧ್ಯಾಹ್ನ ನಿಧನ ರಾದರು. ಮೈಸೂರಿನ ವಿಜಯ ನಗರ 3ನೇ ಹಂತ ನಿವಾಸಿಯಾದ ಡಾ.ವಿಶ್ವೇಶ್ವರ ಅವರು ಪತ್ನಿ ಶ್ರೀಮತಿ ಜಲಜಾ, ಪುತ್ರ ರಾಘವ್, ಪುತ್ರಿ ಡಾ.ರಾಧಿಕಾ, ಸ್ನೇಹಿತರು, ವೈದ್ಯ ವೃಂದ, ವಿದ್ಯಾರ್ಥಿ ಬಳಗ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ನಾಳೆ(ಆ.18) ಬೆಳಗ್ಗೆ 11.30 ಗಂಟೆಗೆ ವಿದ್ಯಾರಣ್ಯ ಪುರಂನ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೈಸೂರು ಮೆಡಿಕಲ್ ಕಾಲೇಜಿ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದ ಡಾ. ವಿಶ್ವೇಶ್ವರ ಅವರು, ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಿಂದ ರೇಡಿಯೇಷನ್ ಆಂಕಾ ಲಜಿ ವಿಷಯದಲ್ಲಿ ಎಂಎಸ್ ಮಾಡಿದ ನಂತರ 1991 ರಿಂದ ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕ ರಾಗಿ ಸೇವೆ ಸಲ್ಲಿಸುತ್ತಿದ್ದರು. ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅತ್ಯಂತ ಪ್ರೀತಿಯಿಂದ ನಗು-ನಗುತ್ತಲೇ ತಮ್ಮ ವಿಶಿಷ್ಟ ಶೈಲಿಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಅವರು, ಆತ್ಮವಿಶ್ವಾಸ ಮೂಡಿಸುತ್ತಿದ್ದರು. ಜೆಎಸ್‍ಎಸ್ ಆಸ್ಪತ್ರೆಯ ಆಂಕಾಲಜಿಸ್ಟ್ ವಿಭಾಗದಲ್ಲಿ ವಿದ್ಯಾರ್ಥಿ ಗಳಿಗೆ ಬೋಧನೆ ಮಾಡುವ ಮೂಲಕ
ಅಪಾರ ಜ್ಞಾನ ಧಾರೆ ಎರೆಯುತ್ತಿದ್ದ ಡಾ.ವಿಶ್ವೇಶ್ವರ ಅವರು, ಭಾರತೀಯ ವೈದ್ಯಕೀಯ ಸಂಘ(Iಒಂ) ಮೈಸೂರು ಚಾಪ್ಟರ್ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ವೈದ್ಯ ವೃತ್ತಿ ಜೊತೆಗೆ ಹಾಡುಗಾರಿಕೆಯಲ್ಲೂ ಆಸಕ್ತಿ ಹೊಂದಿದ್ದ ಅವರು, ವೈದ್ಯ ವೃಂದದವರು ಪ್ರತೀ ವರ್ಷ ನಡೆಸಿಕೊಡುತ್ತಿದ್ದ `ಗೀತ್-ಗಾತ್ ಚಲ್’ ಸಾಂಸ್ಕøತಿಕ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಹಳೇ ಚಲನಚಿತ್ರ ಗೀತೆಗಳನ್ನು ತಮ್ಮ ಕಂಠ ಸಿರಿಯಿಂದ ಹಾಡಿ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಡಾ. ವಿಶ್ವೇಶ್ವರ ಅವರ ನಿಧನಕ್ಕೆ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯ ವೃಂದ, ವೈದ್ಯಕೇತರ ಸಿಬ್ಬಂದಿ, ಐಎಂಎ ಪದಾಧಿಕಾರಿಗಳು ಹಾಗೂ ಸದಸ್ಯರು, ಮಾಜಿ ಶಾಸಕ ಡಾ. ಭಾರತಿ ಶಂಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಜಿಟಿಡಿ ಸಂತಾಪ: ಮೈಸೂರಿನ ಪ್ರತಿಷ್ಠತ ಭಾರತ್ ಆಸ್ಪತ್ರೆ ಮತ್ತು ಆಂಕೋಲಾಜಿ ಸಂಸ್ಥೆಯ ವೈದ್ಯಕೀಯ ಅಧೀಕ್ಷರಾಗಿ ಸೇವೆಯನ್ನು ಸಲ್ಲಿಸಿ, ಅಪಾರ ಕ್ಯಾನ್ಸರ್ ರೋಗಿಗಳನ್ನು ಗುಣಮುಖರನ್ನಾಗಿ ಮಾಡಿ, ಸಾವಿರಾರು ಜನರ ಆರಾಧ್ಯದೈವರಾಗಿದ್ದ ಡಾ. ಎಂ.ಎಸ್.ವಿಶ್ವೇಶ್ವರ ಅವರ ನಿಧನ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಶ್ರೀಯುತರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಿವಾಸಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ್ದಾರೆ, ಶ್ರೀಯುತರ ನಿಧನ ಅವರ ಕುಟುಂಬ ವರ್ಗಕ್ಕಷ್ಟೆ ಮಾತ್ರವಲ್ಲದೆ, ಇಡೀ ವೈದ್ಯಕೀಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಶ್ರೀಯುತರ ನಿಧನದಿಂದ ಅವರ ಕುಟುಂಬ ವರ್ಗಕ್ಕೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ.ಎಸ್.ಪಿ. ಯೋಗಣ್ಣ ಸಂತಾಪ : ಹಿರಿಯ ಕ್ಯಾನ್ಸರ್ ತಜ್ಞ ಡಾ.ವಿಶ್ವೇಶ್ವರ ಅವರು ನಾಡು ಕಂಡ ಅಪರೂಪದ ವೈದ್ಯರು. ಮೈಸೂರಿನಲ್ಲಿ ಪ್ರಪ್ರಥಮ ಕ್ಯಾನ್ಸರ್ ತಜ್ಞರಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ತಮ್ಮ ವೃತ್ತಿಯಲ್ಲಿ ಬಹು ಪಾವಿತ್ರ್ಯತೆಯನ್ನು ಹೊಂದಿದ್ದ ಅವರು ಮಾನವೀಯ ಮೌಲ್ಯಗಳನ್ನಿಟ್ಟುಕೊಂಡು ಸೇವೆ ಮಾಡುತ್ತಿದ್ದ ಅಪರೂಪ ವೈದ್ಯರು. ಅವರ ಅಕಾಲಿಕ ನಿಧನ ನಾಡಿಗೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಸುಯೋಗ್ ಆಸ್ಪತ್ರೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.

Translate »