ಮಣಿವಣ್ಣನ್ ವರ್ಗಾವಣೆ ಹಿಂಪಡೆಯಲು ಕಾರ್ಮಿಕ ಸಂಘಟನೆಗಳ ಮನವಿ
ಮೈಸೂರು

ಮಣಿವಣ್ಣನ್ ವರ್ಗಾವಣೆ ಹಿಂಪಡೆಯಲು ಕಾರ್ಮಿಕ ಸಂಘಟನೆಗಳ ಮನವಿ

May 14, 2020

ಮೈಸೂರು, ಮೇ 13(ಆರ್‍ಕೆಬಿ)- ಕಾರ್ಮಿಕ ಇಲಾಖೆ ಕಾರ್ಯ ದರ್ಶಿಯಾಗಿದ್ದ ಮಣಿವಣ್ಣನ್ ವರ್ಗಾವಣೆ ಆದೇಶ ಹಿಂಪಡೆಯು ವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕೇಂದ್ರ ಗೃಹ ಸಚಿವಾಲಯ, `ವಿಕೋಪ ನಿರ್ವಹಣಾ ಕಾಯ್ದೆ-2005’ರಡಿ ಮಾ.29ರಂದು ಹೊರಡಿಸಿದ ಮಾರ್ಗಸೂಚಿಯಂತೆ ಲಾಕ್‍ಡೌನ್ ವೇಳೆ ಕಾರ್ಮಿಕರಿಗೆ ವೇತನ ನೀಡಬೇಕು, ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಏ.13ರಂದು ಹೊರಡಿಸಿದ್ದ ಆದೇಶ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ರಾಜ್ಯದ ಕಂಪನಿಗಳ ಮಾಲೀಕರ ಲಾಬಿ ಈಗ ಅವರನ್ನು ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಮಣಿವಣ್ಣನ್ ವರ್ಗಾವಣೆ ಮೂಲಕ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಪ್ರದರ್ಶಿಸಿದೆ. ಕೂಡಲೇ ವರ್ಗಾವಣೆ ಹಿಂಪಡೆದು ಅವರನ್ನು ಕಾರ್ಮಿಕ ಇಲಾಖೆ ಯಲ್ಲೇ ಮುಂದುವರಿಸಬೇಕು ಎಂದು ಜೆಸಿಟಿಯು ಜಿಲ್ಲಾ ಸಮಿತಿ ಒತ್ತಾಯಿಸಿದೆ.ಈ ಸಂದರ್ಭ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಯಶೋಧರ್, ಜಿಲ್ಲಾ ಕಾರ್ಯದರ್ಶಿ ಚಂದ್ರ ಶೇಖರ ಮೇಟಿ, ಪದಾಧಿಕಾರಿ ಮುದ್ದುಕೃಷ್ಣ, ಲೋಕೇಶ್, ಹರೀಶ್ ಇನ್ನಿತರರಿದ್ದರು.

 

Translate »