ಕೃಷಿ ಪದಾರ್ಥಗಳನ್ನು ಗ್ರಾಪಂ ವ್ಯಾಪ್ತಿಯಲ್ಲೇ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮನವಿ
ಚಾಮರಾಜನಗರ

ಕೃಷಿ ಪದಾರ್ಥಗಳನ್ನು ಗ್ರಾಪಂ ವ್ಯಾಪ್ತಿಯಲ್ಲೇ ಮಾರಾಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮನವಿ

April 23, 2020

ಚಾಮರಾಜನಗರ ಏ.22- ರೈತರು ಬೆಳೆದ ಪದಾರ್ಥ ಗಳನ್ನು ಆಯಾಯ ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲೇ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಮಾಡಿ ಕೊಡುವಂತÉ ಸಹಕಾರ ಇಲಾಖೆ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಶಾಸಕ ನಿರಂಜನ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ವತಿಯಿಂದ ಮನವಿ ಸಲ್ಲಿಸಲಾಯಿತು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಕಾರ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಕೊರೊನಾ ಲಾಕ್‍ಡೌನ್ ನಿಂದಾಗಿ ರೈತರು ಬೆಳೆದ ಪದಾರ್ಥಗಳ ಮಾರಾಟಕ್ಕೆ ತುಂಬಾ ತೊಂದರೆಯಾಗಿದೆ. ಕೆಲವು ರೈತರು ಬೆಳೆಯನ್ನೇ ಉಳುಮೆ ಮಾಡಿಸುತ್ತಿದ್ದಾರೆ. ರೈತರು ತುಂಬಾ ತೊಂದರೆಗೆ ಸಿಲುಕಿದ್ದಾರೆ. ಆದರಿಂದ ತಾವು ತೋಟಗಾರಿಗೆ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಸಿಬ್ಬಂದಿಗಳ ಸಹಯೋಗದಲ್ಲಿ ರೈತರು ಬೆಳೆದ ಪದಾರ್ಥಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಾಸ್ ವಿತರಿಸಿ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ತರಕಾರಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಹೊರರಾಜ್ಯಗಳಿಗೆ ಮಾರಾಟ ಮಾಡಲು ಹಾಗೂ ಕೃಷಿ ಸಚಿವರಿಗೆ ಈಗಾಗಲೇ ಕೋಲ್ಡ್ ಸ್ಟೋರೇಜ್ ಮಾಡಲು ಮನವಿ ಕೊಟ್ಟಿದ್ದು, ತಮ್ಮ ಇಲಾಖೆಗೆ ಸೇರಿದ ಜಾಗದಲ್ಲಿ ಅನುಮತಿ ಕೊಡಿಸಿ ಕೊಡಬೇಕು. ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಆಲೂಗೆಡ್ಡೆ ಬೇಸಾಯವನ್ನು ಮಾಡುವುದರಿಂದ ಬಿತ್ತನೆಯು ರಾಜ್ಯದ ಹಾಸನ ಜಿಲ್ಲೆ ಹಾಗೂ ತಮಿಳು ನಾಡು ಮೆಟ್ಟುಪಾಳ್ಯಂ ನಿಂದ ಸರಬರಾಜು ಆಗುತ್ತದೆ. ಈ ಸಂದರ್ಭ ದಲ್ಲಿ ಸಾಗಾಣಿಕೆಗೆ ತೊಂದರೆಯಾಗುತ್ತಿದೆ. ಈ ಲಾಭವನ್ನು ಮಧ್ಯವರ್ತಿಗಳು ದುರುಪ ಯೋಗಪಡಿಸಿಕೊಳ್ಳತ್ತಾರೆ. ಆಲೂಗೆಡ್ಡೆ ಬಿತ್ತನೆಯು ಸೂಕ್ತ ಬೆಲೆಗೆ ಸೂಕ್ತ ಸಮಯದಲ್ಲಿ ಸರಬರಾಜು ಮಾಡಲು ಕ್ರಮಕೈಗೊಳ್ಳುವಂತೆ ರೈತರ ಪರವಾಗಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಜಿ.ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ಮಹೇಶ್ ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್, ಜಿ.ಪಂ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಬಿಜೆಪಿ ರೈತ ಮುಖಂಡ ಮಲ್ಲೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರ, ಕಾಯರ್Àದರ್ಶಿ ಎಂಆರ್‍ಎಫ್ ಮಹೇಶ್, ನಗರ ಘಟಕ ಅಧ್ಯಕ್ಷ ರಾಜು, ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಮಿತ್, ಚಾಮುಲ್ ನಿರ್ದೇಶಕ ಶಶಿಕುಮಾರ್, ಎಪಿಎಂಸಿ ನಿರ್ದೇಶಕ ವಿಶ್ವ, ಜಿಲ್ಲಾ ಮಾಧ್ಯಮ ಪ್ರಮುಖ್ ವೀರೇಂದ್ರ, ಮುಖಂಡರಾದ ಚಂದ್ರಶೇಖರ್, ವೇಣು ಗೋಪಾಲ್, ಬಿಸಲವಾಡಿ ಬಸವರಾಜು, ಮಹೇಶ್ ಮರಿಯಾಲ ಇತರರು ಹಾಜರಿದ್ದರು.

Translate »