ಬೆಂಗಳೂರಿನ ಮೂವರು ಸೇರಿ ಹತ್ತು ಮಂದಿ ಕ್ವಾರೆಂಟೈನ್‍ಗೆ
ಕೊಡಗು

ಬೆಂಗಳೂರಿನ ಮೂವರು ಸೇರಿ ಹತ್ತು ಮಂದಿ ಕ್ವಾರೆಂಟೈನ್‍ಗೆ

April 23, 2020

ಕುಶಾಲನಗರ, ಏ.22- ಬೆಂಗಳೂರಿ ನಿಂದ ಕೂಡುಮಂಗಳೂರಿನ ಚಿಕ್ಕತ್ತೂರು ಗ್ರಾಮಕ್ಕೆ ಆಗಮಿಸಿ ತಂಗಿದ್ದ ಮೂವರು ಸೇರಿ ದಂತೆ ಒಟ್ಟು 10 ಮಂದಿಯನ್ನು ತಪಾ ಸಣೆಗೆ ಮಡಿಕೇರಿಗೆ ರವಾನಿಸಲಾಗಿದೆ.

ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಚಿಕ್ಕತ್ತೂರಿನಲ್ಲಿ ಸ್ನೇಹಿತನ ಮನೆಯಲ್ಲಿ ತಂಗಿದ್ದ ಯುವಕನನ್ನು ಕರೆದೊಯ್ಯಲು ಬೆಂಗಳೂರಿನಿಂದ ಆಗಮಿಸಿದ್ದ ಮೂವರು, ಬೆಂಗಳೂರಿನಿಂದ ಆಂಬ್ಯುಲೆನ್ಸ್ ಮೂಲಕ ಸುಳ್ಳು ಮಾಹಿತಿ ನೀಡಿ ಅಕ್ರಮವಾಗಿ ಕೊಪ್ಪ ಗೇಟ್ ಮೂಲಕ ಜಿಲ್ಲೆಗೆ ನುಸುಳಿ ರುವ ಶಂಕೆ ವ್ಯಕ್ತವಾಗಿದೆ.

ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಹಾರಂಗಿ ರಸ್ತೆಯ ಚಿಕ್ಕತ್ತೂರಿನ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಲಾಕ್‍ಡೌನ್ ಮುನ್ನ ಸ್ನೇಹಿತನ ಮನೆಗೆ ಆಗಮಿಸಿದ್ದ 18 ರ ಪ್ರಾಯದ ಯುವಕನನ್ನು ಕರೆದೊ ಯ್ಯಲು ತಂದೆ ರೋಗಿಯೊಬ್ಬನ ನೆರವಿನಿಂದ ಆಂಬುಲೆನ್ಸ್ ಮೂಲಕ ಚಿಕ್ಕತ್ತೂರಿಗೆ ಆಗಮಿಸಿದ್ದರೆನ್ನಲಾಗಿದೆ.

ಈ ಪೈಕಿ ಆಂಬುಲೆನ್ಸ್ ಡ್ರೈವರ್ ಬೆಂಗ ಳೂರಿನ ಪಾದರಾಯನಪುರದ ವ್ಯಾಪ್ತಿಯ ವನು ಎಂದು ತಿಳಿದುಬಂದಿದೆ. ಮಾಹಿತಿ ತಿಳಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬೆಂಗಳೂರಿನ ಯುವಕನಿಗೆ ಆಶ್ರಯ ನೀಡಿದ್ದ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 10 ಮಂದಿಯನ್ನು ತಪಾಸಣೆಗೆ ಮಡಿಕೇರಿಗೆ ಕರೆದೊಯ್ದಿದ್ದಾರೆ.

Translate »