ಅರ್ಚಕ, ಪುರೋಹಿತ, ಅಡುಗೆ ಕೆಲಸದವರು `ಇ-ಶ್ರಮ್’ ಮೂಲಕ ನೋಂದಣಿ ಮಾಡಿಕೊಳ್ಳಲು ಮನವಿ
ಮೈಸೂರು

ಅರ್ಚಕ, ಪುರೋಹಿತ, ಅಡುಗೆ ಕೆಲಸದವರು `ಇ-ಶ್ರಮ್’ ಮೂಲಕ ನೋಂದಣಿ ಮಾಡಿಕೊಳ್ಳಲು ಮನವಿ

September 2, 2021

ಮೈಸೂರು, ಸೆ.1(ಆರ್‍ಕೆಬಿ)- ಕೇಂದ್ರ ಸರ್ಕಾರ ಅರ್ಚಕ, ಪುರೋ ಹಿತರು ಹಾಗೂ ಅಡುಗೆ ಕೆಲಸದವರನ್ನು ಅಸಂಘ ಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡಿಸುವ ಆದೇಶ ಹೊರಡಿಸಿದೆ. ಹಾಗಾಗಿ ಕೇಂದ್ರ ಸರ್ಕಾರದ ಇ-ಶ್ರಮ್ ವೆಬ್‍ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರಗಳ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರ್ಚಕ, ಪುರೋಹಿತರು, ಅಡುಗೆ ಕೆಲಸದವ ರನ್ನು ಅಸಂಘಟಿತ ಕಾರ್ಮಿಕರ ವಲಯಕ್ಕೆ ಸೇರ್ಪಡೆ ಮಾಡುವಂತೆ ಹೋರಾಟ ನಡೆಸಿದುದರ ಫಲವಾಗಿ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ. ಇದಕ್ಕೆ ಕಾರಣವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕೆಲವು ಸಂಘ-ಸಂಸ್ಥೆಗಳು ಅವರ ಸಂಸ್ಥೆಯಲ್ಲಿ ಸದಸ್ಯರಾದರೆ ಮಾತ್ರವೇ ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಲಾಗುತ್ತಿದೆ ಎಂಬ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದಕ್ಕೆ ಕಿವಿಗೊಡದೆ ಪುರೋಹಿತರು, ಆರ್ಚಕರು ಹಾಗೂ ಅಡುಗೆ ಕೆಲಸದವರು ನೇರವಾಗಿ hಣಣಠಿ://

ಡಿegisಣeಡಿ.eshಡಿಚಿm.gov.iಟಿ/#/useಡಿ/seಟಜಿ ಈ ಲಿಂಕ್ ಬಳಸಿ ನೋಂದಣಿ ಮಾಡಿಕೊಳ್ಳಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಆರ್.ಬಾಲಕೃಷ್ಣ, ಹಿರಿಯ ಚಿಂತಕ ಕೆ.ರಘುರಾಂ ವಾಜ ಪೇಯಿ, ವಿಪ್ರ ಮುಖಂಡರಾದ ವಿಕ್ರಂ ಅಯ್ಯಂಗಾರ್, ವಿ.ಹರೀಶ್ ಉಪಸ್ಥಿತರಿದ್ದರು.

Translate »