ಸಾಲ ಮರುಪಾವತಿಗೆ ಕಾಲಾವಕಾಶ ನೀಡುವಂತೆ ಮನವಿ
ಮೈಸೂರು

ಸಾಲ ಮರುಪಾವತಿಗೆ ಕಾಲಾವಕಾಶ ನೀಡುವಂತೆ ಮನವಿ

May 6, 2021

ಸರಗೂರು, ಮೇ 5 (ನಾಗೇಶ್)- ಕಫ್ರ್ಯೂ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂ ಲಾತಿಗಾಗಿ ಜನರನ್ನು ಪೀಡಿಸುತ್ತಿದ್ದು, ಸರಿಯಾದ ಕೂಲಿ ಇಲ್ಲದೆ ಜನರು ಸಾಲ ಮರುಪಾವತಿಸಲಾದೆ ಕಂಗಾಲಾಗಿದ್ದಾರೆ. ಆದ್ದರಿಂದ ತಾಲೂಕು ಆಡಳಿತ ಸಾಲ ಮರುಪಾವತಿಗೆ ಸಂಸ್ಥೆಗಳಿಂದ 6 ತಿಂಗಳ ಗಡುವು ಕೊಡಿಸುವಂತೆ ಕೋರಿ ಪಟ್ಟಣ ಪಂಚಾಯಿತಿ ಸದಸ್ಯರು ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪೋಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.

ಈ ವೇಳೆ ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಎಲ್.ರಾಜಣ್ಣ ಮಾತನಾಡಿ, ಕೊರೊನಾ ಎರಡನೇ ಅಲೆ ತಡೆಗಟ್ಟಲು ಸರ್ಕಾರ ವಿಧಿಸಿರುವ ಮಾರ್ಗಸೂಚಿ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಕೋವಿಡ್ ನಿಯಮ ಪಾಲಿಸಬೇಕಾಗಿರು ವುದು ಅವರ ಜವಾಬ್ದಾರಿ. ಆದರೆ ಕಫ್ರ್ಯೂ ನಿಂದ ಗ್ರಾಮೀಣ ಭಾಗದಲ್ಲಿ ಜನರು ಈಗಾಗಲೇ ಸರಿಯಾದ ಕೂಲಿ ಇಲ್ಲದೆ ಪರದಾಡುತ್ತಿದ್ದು, ಹೊಟ್ಟೆ ತುಂಬಿಸುವುದೇ ಜನರಿಗೆ ದೊಡ್ಡ ಸಮಸ್ಯೆಯಾಗಿದೆ. ಇದರ ನಡುವೆ ಗ್ರಾಮೀಣ ಭಾಗಗಳಿಗೂ ಕೊರೊನಾ ವಕ್ಕರಿಸಿರುವುದರಿಂದ ಜನರಿಗೆ ದಿಕ್ಕೇ ದೋಚ ದಂತಾಗಿದೆ. ಈ ಸಂದರ್ಭದಲ್ಲಿ ತಾಲೂಕಿನ ಸಣ್ಣ ಪ್ರಮಾಣದ ಖಾಸಗಿ ಫೈನಾನ್ಸ್ ಸಂಸ್ಥೆ ಗಳು ಸಾಲದ ವಸೂಲಾತಿಗೆ ಇಳಿದಿದ್ದು, ಸಾಲ ಮರು ಪಾವತಿಸಲು ಜನರು ಪರದಾಡು ವಂತಾಗಿದೆ. ಅಲ್ಲದೆ ವಸೂಲಾತಿಯ ನೆಪದಲ್ಲಿ ಸಾಲ ಪಡೆದವರ ಮನೆಯ ಮುಂದೆ ಬಂದು ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋ ಪಿಸಿದರು. ಸಂಸ್ಥೆಗಳ ವಿರುದ್ಧ ತಾಲೂಕು ಆಡಳಿತ ಕ್ರಮ ಜರುಗಿಸಿ ಸಾಲದ ಮರು ಪಾವತಿಗಾಗಿ 6 ತಿಂಗಳ ಕಾಲಾವಕಾಶ ಕೊಡಿಸುವಂತೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗು ತ್ತಿದೆ. ಇದರ ಬೆನ್ನಲ್ಲೆ ಖಾಸಗಿ ಫೈನಾನ್ಸ್‍ನ ಸಿಬ್ಬಂದಿ ಎಲ್ಲಾ ಗ್ರಾಮಗಳಲ್ಲಿಯೂ ಸಹ ಜನರನ್ನು ಗುಂಪು ಸೇರಿಸಿಕೊಂಡು ಹಣದ ವಸೂ ಲಾತಿಗೆ ಮುಂದಾಗಿವೆ. ಸಾಲ ವಸೂಲಾತಿ ಮಾಡುವ ಸಂಸ್ಥೆ ಸಿಬ್ಬಂದಿ ಯಾವುದೇ ಕೊರೊನಾ ತಪಾಸಣೆ ದೃಢೀಕರಣ ಪತ್ರವಿಲ್ಲದೆ, ಎಲ್ಲಾ ಹಳ್ಳಿಗಳಲ್ಲೂ ಗುಂಪು-ಗುಂಪಾಗಿ ಸೇರಿಸಿ ಸಾಲ ವಸೂ ಲಾತಿ ಮಾಡುವುದರಿಂದ ಖಾಸಗಿ ಫೈನಾನ್ಸ್ ವಸೂಲಿದಾರರಿಂದಲೇ ಕೊರೊನಾ ಹೆಚ್ಚು ತ್ತಿದೆ. ಇದರಿಂದ ಗ್ರಾಮಗಳಲ್ಲಿ ಕೊರೊನಾ ಭೀತಿ ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ತಾಲೂಕು ಆಡಳಿತ, ಪಟ್ಟಣ ಪಂಚಾ ಯಿತಿ ಮತ್ತು ತಾಲೂಕಿನ ಪೊಲೀಸ್ ಇಲಾಖೆ ಎಚ್ಚೆತ್ತು, ಫೈನಾನ್ಸ್ ಕಂಪನಿಗಳ ಮುಖ್ಯಸ್ಥರನ್ನು ಸ್ಥಳೀಯ ತಾಲೂಕು ಆಡಳಿತ ಕರೆಸಿ ಸಾಲದ ಮರುಪಾವತಿಗೆ ಕಾಲವಕಾಶ ಕೊಡಿಸಬೇಕಿದೆ. ಅಲ್ಲದೇ ಸಾಲದ ವಸೂಲಾತಿಗೆ ಬರುವ ಸಿಬ್ಬಂದಿ ಯು ಜನರನ್ನು ಗುಂಪು ಸೇರಿಸು ವುದನ್ನು ತಡೆಯಬೇಕು ಎಂದು ಕೋರಿದರು.

ಪಪಂ ಸದಸ್ಯರಾದ ಶ್ರೀನಿವಾಸ್, ಎಸ್.ಎಲ್. ರಾಜಣ್ಣ, ವೀರೇಶ್, ವಿನಯ್ ಪ್ರಸಾದ್, ನೂರಾಳಸ್ವಾಮಿ, ಚಲುವಕೃಷ್ಣ, ಸಣ್ಣ ತಾಯಮ್ಮ, ಮುಖಂಡರಾದ ರಾಮು, ರಮೇಶ್, ನವೀನ್, ಶ್ರೀನಾಥ್, ಸ್ವಾಮಿ, ಅಂಬೇಡ್ಕರ್ ಟ್ರಸ್ಟ್ ಅಧ್ಯಕ್ಷ ಕ್ರಷ್ಣಯ್ಯ, ಪ್ರಾಧ್ಯಾಪಕ ಕೃಷ್ಣಮೂರ್ತಿ, ರಾಜು, ಮುಜೀಫ್, ಕಿಚ್ಚ ಗಣೇಶ್, ಪುಟ್ಟ ಹನುಮಯ್ಯ ಇನ್ನಿತರರಿದ್ದರು.

Translate »