ಹುಣಸೂರು ತಾಲೂಕಿನಲ್ಲಿ 17 ಗ್ರಾಮ ಸೀಲ್‍ಡೌನ್
ಮೈಸೂರು

ಹುಣಸೂರು ತಾಲೂಕಿನಲ್ಲಿ 17 ಗ್ರಾಮ ಸೀಲ್‍ಡೌನ್

May 6, 2021

ಹುಣಸೂರು, ಮೇ 5(ಕೆಕೆ)-ಹುಣ ಸೂರು ತಾಲೂಕಿನಲ್ಲಿ ಕೊರೊನಾ ದಿನೇ ದಿನೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವರೆವಿಗೆ ತಾಲೂಕಿನಲ್ಲಿ ಸುಮಾರು 17 ಗ್ರಾಮಗಳನ್ನು ಸೀಲ್‍ಡೌನ್ ಮಾಡ ಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಕೀರ್ತಿಕುಮಾರ್ ತಿಳಿಸಿದ್ದಾರೆ.

ಕೊರೊನಾ ಪ್ರಕರಣಗಳು ಅತಿ ಹೆಚ್ಚಾಗಿರುವ ಗ್ರಾಮಗಳಾದ ಕಲ್ಲಹಳ್ಳಿ, ಗುರುಪುರ, ಕೆಂಪಮ್ಮನಹೊಸೂರು, ತಮ್ಮಡಹಳ್ಳಿ, ಹಳೇಪುರ, ವಡ್ಡಂಬಾಳು, ಕಾಮೆಗೌಡನಹಳ್ಳಿ, ಹಂದನಹಳ್ಲಿ, ಕೆರೆಯುರು, ಹರವೆಕಲ್ಲಹಳ್ಳಿ, ಮೂಳ್ಳೂರು, ವಿನೋಬಾ ಕಾಲೋನಿ, ಮನುಗನಹಳ್ಳಿ, ಗಾವಡಗೆರೆ, ಕಳ್ಳಬೆಟ್ಟ ಕಾಲೋನಿ, ರತ್ನಪುರಿ ಹಾಗೂ ರಾಯನಹಳ್ಳಿ ಗ್ರಾಮಗಳನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್‍ಡೌನ್ ಮಾಡಲಾಗಿದೆ ಎಂದರು.
ಸೀಲ್‍ಡೌನ್ ಆಗಿರುವ ಗ್ರಾಮಗಳಲ್ಲಿ ಆಯಾ ಗ್ರಾಪಂನಿಂದ ಪ್ರವೇಶ ನಿಷೇಧಿ ಸಿರುವ ಬಗ್ಗೆ ಬ್ಯಾನರ್ ಹಾಕಲಾಗಿದೆ. ಅವಶ್ಯವಿರುವೆಡೆ ಗ್ರಾಮಕ್ಕೆ ಸೇರುವ ರಸ್ತೆಗಳಿಗೆ ಅಡ್ದಲಾಗಿ ಮಣ್ಣನ್ನು ಸುರಿದು ವಾಹನಗಳು ಒಡಾಡ ದಂತೆ ಕ್ರಮ ವಹಿಸಲಾಗಿದೆ ಎಂದರು.

726 ಸಕ್ರಿಯ ಪ್ರಕರಣಗಳು: ಏ.1ರಿಂದ ಮೇ 4ರ ವರೆಗೆ ತಾಲೂಕಿನಲ್ಲಿ ಸುಮಾರು 1,244 ಪ್ರಕರಣಗಳು ದಾಖಲಾಗಿದೆ. ಚಿಕಿತ್ಸೆ ಪದೆದು 512 ಜನ ಮನೆಗೆ ತೆರಳಿದ್ದು, 726 ಪ್ರಕರಣಗಳು ಸಕ್ರಿಯವಾಗಿವೆ. ಹುಣಸೂರು ತಾಲೂಕು ಆಸ್ಪತ್ರೆ, ಬಾಚಳ್ಳಿ ರಸ್ತೆಯ ಕೋವಿಡ್‍ಕೇರ್ ಸೆಂಟರ್, ಮೈಸೂರಿನ ವಿವಿಧ ಆಸ್ಪತ್ರೆಗಳು ಹಾಗೂ ಮನೆಯಲ್ಲಿ ಐಸೋಲೇಷನ್ ಹೋಂ ಕ್ವಾರಂಟೈನ್‍ನಲ್ಲಿದ್ದು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇ 3ರಂದು 240 ಪ್ರಕರಣಗಳು ಮೇ 4ರಂದು 258 ಪ್ರಕರಣಗಳು ದಾಖಲಾಗಿ, ಜನರಲ್ಲಿ ಭಯದ ವಾತಾ ವರಣ ನಿರ್ಮಿಸಿದೆ. ಈ ವರೆವಿಗೆ 507 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮಂಗಳವಾರ ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಪುರುಷ, ಹರವೆ ಗ್ರಾಮದಲ್ಲಿ ಮಹಿಳೆ ಸೇರಿದಂತೆ ಇಬ್ಬರೂ ಸಾವನ್ನಪ್ಪಿದ್ದಾರೆ. ಮೇ 5ರ ಬುಧುವಾರ ಬೆಳಗ್ಗೆ ಹರವೆ ಗ್ರಾಮದಲ್ಲಿ ಪುರುಷ ಸೇರಿದಂತೆ ತಾಲೂಕಿನಲ್ಲಿ ಈ ವರೆವಿಗೆ ಒಟ್ಟು 12 ಜನ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

Translate »