ತರಕಾರಿ ಸಗಟು ಮಾರುಕಟ್ಟೆ `ಮುಂಜಾನೆ 4ಕ್ಕೇ ಬಂದ್’
ಮೈಸೂರು

ತರಕಾರಿ ಸಗಟು ಮಾರುಕಟ್ಟೆ `ಮುಂಜಾನೆ 4ಕ್ಕೇ ಬಂದ್’

May 6, 2021

ಮೈಸೂರು, ಮೇ 5(ಎಂಟಿವೈ)- ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಮೈದಾನದಲ್ಲಿ ರೈತರು ನಡೆಸುತ್ತಿರುವ ತರಕಾರಿ ಸಗಟು ಮಾರುಕಟ್ಟೆ ಯನ್ನು ಕೊರೊನಾ ಕಫ್ರ್ಯೂ ಹಿನ್ನೆಲೆಯಲ್ಲಿ ಮುಂಜಾನೆ 4 ಗಂಟೆಗೇ ಬಂದ್ ಮಾಡಿಸಲಾಗುತ್ತಿದೆ.

ಕೊರೊನಾ 2ನೇ ಅಲೆ ಬಿರುಸುಗೊಂಡಿದ್ದು, ಸೋಂಕಿತರಾಗುವ ಹಾಗೂ ಸೋಂಕಿಗೆ ಬಲಿ ಯಾಗುವ ಜನರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮೇ 2ರಿಂದ ರಾಜ್ಯಾದ್ಯಂತ ಜಾತ್ರೆ, ಸಂತೆ ನಿಷೇಧಿಸಿದೆ. ಸಂತೆ ಮಾದರಿ ಜನಜಂಗಳಿಯಲ್ಲಿ ನಡೆಯುವ ದೇವರಾಜ, ಮಂಡಿ, ವಾಣಿ ವಿಲಾಸ ಹಾಗೂ ಎಂಜಿ ರಸ್ತೆಯ ಮಾರುಕಟ್ಟೆಗಳನ್ನು ಬಂದ್ ಮಾಡಿಸಲಾಗಿದೆ. ಆದರೆ ಎಂಜಿ ರಸ್ತೆಯ ಮಾರುಕಟ್ಟೆ ಮುಂಭಾಗದಲ್ಲಿ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ರೈತರೇ ನೇರ ಮಾರಾಟ ನಡೆಸುವ `ತರಕಾರಿ ಸಗಟು ಮಾರುಕಟ್ಟೆ’ಗೆ ಸಮಯ ನಿಗದಿಪಡಿಸಿ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ.

ಮೈಸೂರು ನಗರ ಮಾತ್ರವಲ್ಲದೆ ನೆರೆಯ ಜಿಲ್ಲೆ ಗಳು, ಕೇರಳ, ಊಟಿ ಸೇರಿದಂತೆ ವಿವಿಧೆಡೆಗೆ ತರ ಕಾರಿಯನ್ನು ಸರಬರಾಜು ಮಾಡುವ ಏಜೆಂಟರು ವಸ್ತು ಪ್ರದರ್ಶನ ಆವರಣದ ಮಾರುಕಟ್ಟೆಯಲ್ಲಿ ರೈತರು ಸಗಟು ದರದಲ್ಲಿ ಮಾರಾಟ ಮಾಡುವ ತರಕಾರಿ ಯನ್ನು ಖರೀದಿಸುತ್ತಾರೆ. ಈ ಸಗಟು ಮಾರುಕಟ್ಟೆಯಲ್ಲಿ ಖರೀದಿಸಿದ ತರಕಾರಿಯನ್ನು ರಸ್ತೆ ಬದಿ ವ್ಯಾಪಾರಿ ಗಳು, ತಳ್ಳುಗಾಡಿಯವರೂ ಚಿಲ್ಲರೆಯಾಗಿ ಮಾರಾಟ ಮಾಡುತ್ತಾರೆ. ರಾತ್ರಿ 8ರಿಂದಲೇ ಈ ಮೈದಾನಕ್ಕೆ ಮೈಸೂರು, ತಿ.ನರಸೀಪುರ, ಬನ್ನೂರು ತಾಲೂಕು ಸೇರಿದಂತೆ ವಿವಿಧ ಗ್ರಾಮಗಳಿಂದ 80ಕ್ಕೂ ಹೆಚ್ಚು ರೈತರು ತಾವು ಬೆಳೆದ ಹಣ್ಣು-ತರಕಾರಿ, ಸೊಪ್ಪು, ತೆಂಗಿನಕಾಯಿ ಮತ್ತಿತರ ಆಹಾರ ಪದಾರ್ಥಗಳನ್ನು ತಂದು ಮಾರುತ್ತಾರೆ. ಮೇ 1ರವರೆಗೂ ಈ ಸಗಟು ತರಕಾರಿ ಮಾರುಕಟ್ಟೆಯನ್ನು ರಾತ್ರಿ 8ರಿಂದ ಬೆಳಿಗ್ಗೆ 8ರವರೆಗೂ ತೆರೆದಿರಲು ಅವಕಾಶ ನೀಡಲಾಗಿತ್ತು. ಆದರೆ ಮೇ2ರಿಂದ ಮಾರುಕಟ್ಟೆಗಳ ಬಂದ್‍ಗೆ ಆದೇಶ ಹೊರಡಿಸಿದ್ದರಿಂದ ಗ್ರಾಹಕರು ಸಗಟು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದೆಂಬ ಅಂದಾಜಿನಿಂದ ರೈತರ ಸಗಟು ಮಾರುಕಟ್ಟೆಯ ವಹಿವಾಟು ಅವಧಿ ಕಡಿತಗೊಳಿಸಿದ್ದು, ಮುಂಜಾನೆ 4ರ ವೇಳೆಗೆ ವ್ಯಾಪಾರ ಮುಗಿಸಬೇಕೆಂದು ಸೂಚನೆ ನೀಡಲಾಗಿದೆ. 4.30ರ ವೇಳೆಗೆ ಮೈದಾನ ಖಾಲಿ ಮಾಡಿಸಿ ಗೇಟಿಗೆ ಬೀಗ ಹಾಕಲಾಗು ತ್ತಿದೆ. ಕಳೆದೆರಡು ದಿನದಿಂದ ರೈತರ ಮಾರುಕಟ್ಟೆ ರಾತ್ರಿ 8ರಿಂದ ಮುಂಜಾನೆ 4ರವರೆಗೆ ಮಾತ್ರ ವಹಿವಾಟು ನಡೆಸುತ್ತಿದೆ ಎಂದು ಪಾಲಿಕೆಯ `ಅಭಯ’ ತಂಡದ ಉಸ್ತುವಾರಿ ಮಂಜುನಾಥ್ ತಿಳಿಸಿದ್ದಾರೆ.

Translate »