ಸೋಂಕಿತರ ಸೇವೆಗಾಗಿ ಬಿಜೆಪಿ ಮೈಸೂರು ಘಟಕದಿಂದ 2 ಆಂಬ್ಯುಲೆನ್ಸ್ ಸೇವೆ ಆರಂಭ
ಮೈಸೂರು

ಸೋಂಕಿತರ ಸೇವೆಗಾಗಿ ಬಿಜೆಪಿ ಮೈಸೂರು ಘಟಕದಿಂದ 2 ಆಂಬ್ಯುಲೆನ್ಸ್ ಸೇವೆ ಆರಂಭ

May 6, 2021

ಮೈಸೂರು, ಮೇ 5 (ಎಸ್‍ಪಿಎನ್)- ಬಿಜೆಪಿ ಮೈಸೂರು ನಗರ ಘಟಕದ ವೈದ್ಯ ಕೀಯ ಪ್ರಕೋಷ್ಠದಿಂದ ನಗರದಲ್ಲಿ ಕೊರೊನಾ ಸೋಂಕಿತರಿಗೆ ತುರ್ತು ಸಂದರ್ಭ ದಲ್ಲಿ ಸಹಾಯವಾಗಲೆಂದು ಆರಂಭಿಸಿದ 2 ಉಚಿತ ಆ್ಯಂಬುಲೆನ್ಸ್‍ಗಳ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಚಾಲನೆ ನೀಡಿದರು.

ಮೈಸೂರಿನ ಚಾಮರಾಜಪುರಂನಲ್ಲಿ ರುವ ಬಿಜೆಪಿ ಕಾರ್ಯಾಲಯದ ಮುಂಭಾಗ ಬುಧವಾರ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಸೋಂಕು ತಡೆಗಾಗಿ ಜಿಲ್ಲಾಡಳಿತ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸಾರ್ವ ಜನಿಕರ ಸಹಕಾರದಿಂದಲೂ ಕೊರೊನಾ ತಡೆಗೆ ಯತ್ನಿಸಲಾಗುತ್ತಿದೆ ಎಂದರು.

ಇದರ ಭಾಗವಾಗಿ ಬಿಜೆಪಿಯ ವೈದ್ಯ ಕೀಯ ಪ್ರಕೋಷ್ಟದಿಂದ ಕೊರೊನಾ ಸೋಂಕಿತರಿಗಾಗಿ 2 ಆಂಬುಲೆನ್ಸ್ ಸೇವೆ ಆರಂ ಭಿಸಲಾಗಿದೆ. ಮೈಸೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಜನಪ್ರತಿನಿಧಿಗಳನ್ನು ವಿಶ್ವಾ ಸಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

ಮೇಲ್ನೋಟಕ್ಕೆ: ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ವಿತರಣೆಯಲ್ಲಿ ಮೈಸೂರು ಜಿಲ್ಲಾಡಳಿತದಿಂದ ಯಾವುದೇ ಲೋಪ ವಾದಂತೆ ಮೇಲ್ನೋಟಕ್ಕೆ ಕಂಡುಬಂದಿಲ್ಲ. ಸತ್ಯಾನುಸತ್ಯತೆ ತಿಳಿಯಲು ರಾಜ್ಯ ಸರ್ಕಾರ ವಿಚಾರಣಾಧಿಕಾರಿ ನೇಮಿಸಿದ್ದು, ವಿಚಾ ರಣೆ ಮುಗಿದ ನಂತರ ಸತ್ಯ ಹೊರ ಬರಲಿದೆ ಎಂದು ಸಚಿವರು ಹೇಳಿದರು.

ಸಂಸದ ಪ್ರತಾಪ ಸಿಂಹ, ಶಾಸಕ ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಮೈಸೂರು ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್, ರಾಜ್ಯ ವಕ್ತಾರ ಎಂಜಿ ಮಹೇಶ್, ಜಿಲ್ಲಾಧ್ಯಕ್ಷೆÀ ಮಂಗಳಾ, ಪ್ರ. ಕಾರ್ಯದರ್ಶಿ ಸೋಮಸುಂದರ್, ವಾಣೀಶ್, ಗ್ರಾಮಾಂತರ ಪ್ರ.ಕಾರ್ಯದರ್ಶಿ ಪ್ರತಾಪ್ ದೇವನೂರು, ನಗರ ವಕ್ತಾರ ಮೋಹನ್, ಮಾಧ್ಯಮ ಸಂಚಾ ಲಕರಾದ ಮಹೇಶ್ ರಾಜೇ ಅರಸ್, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕರಾದ ಎಸ್.ಇ.ಗಿರೀಶ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜೈಶಂಕರ್, ಪ್ರದೀಪ್ ಕುಮಾರ್, ಹಿಂ. ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಮುಡಾ ಸದಸ್ಯ ನವೀನ್ ಕುಮಾರ್, ಪಾಲಿಕೆ ಸದಸ್ಯರಾದ ರಮೇಶ್, ಪಾಲಿಕೆ ಮಾಜಿ ಸದಸ್ಯ ಜಯರಾಂ, ಮಾಧ್ಯಮ ಸಹ ವಕ್ತಾರ ಕೇಬಲ್ ಮಹೇಶ್, ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಗೆಜ್ಜ ಗಳ್ಳಿ ಮಹೇಶ್, ಗೋಪಾಲ್, ಮಹೇಂದ್ರ ಸಿಂಗ್ ಕಾಳಪ್ಪ, ನಿಶಾಂತ್ ಇದ್ದರು.

ಕೊರೊನಾ ಸೋಂಕಿತರಿಗಾಗಿ ಆಂಬ್ಯು ಲೆನ್ಸ್ ಸೇವೆ ಇಂದಿನಿಂದ ಲಭ್ಯ. ಇದರಲ್ಲಿ ಆಮ್ಲಜನಕ, ಪಿಪಿಇ ಕಿಟ್, ಸ್ಯಾನಿಟೈಸರ್ ಇರುತ್ತವೆ. ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಾರೆ. ತುರ್ತು ಸಂಧರ್ಭ ವೈದ್ಯಕೀಯ ಪ್ರಕೋ ಷ್ಠದ ಮೊ.ಸಂ; 98802 30764, 93421 16598, 92437 81900ಗೆ ಕರೆ ಮಾಡಿ ಸೇವೆ ಪಡೆಯಬಹು ದಾಗಿದೆ ಎಂದು ಬಿಜೆಪಿ ನಗರ ಅಧ್ಯಕ್ಷ ಶ್ರಿವತ್ಸ ಮಾಹಿತಿ ನೀಡಿದರು.

Translate »