ಚಾಮರಾಜನಗರ ದುರಂತ ಮರುಕಳಿಸದಂತೆ ಎಚ್ಚರವಹಿಸಿ;  ಮುಖ್ಯಮಂತ್ರಿ ಬಿಎಸ್‍ವೈಗೆ ದೇವೇಗೌಡರಿಂದ ಸಲಹೆ
News

ಚಾಮರಾಜನಗರ ದುರಂತ ಮರುಕಳಿಸದಂತೆ ಎಚ್ಚರವಹಿಸಿ; ಮುಖ್ಯಮಂತ್ರಿ ಬಿಎಸ್‍ವೈಗೆ ದೇವೇಗೌಡರಿಂದ ಸಲಹೆ

May 6, 2021

ಬೆಂಗಳೂರು, ಮೇ 5- ಚಾಮರಾಜನಗರದಲ್ಲಿ ಆಕ್ಸಿಜನ್, ಬೆಡ್ ಸಮಸ್ಯೆಯಿಂದಾಗಿರುವ ಅನಾಹುತ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಮುಖ್ಯಮಂತ್ರಿ ಯಡಿ ಯೂರಪ್ಪಗೆ ಸಲಹೆ ನೀಡಿದ್ದಾರೆ. ತಮ್ಮ ಹಾಸನ ಜಿಲ್ಲೆ ಯಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ದೂರವಾಣಿ ಕರೆ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಅವರೊಂ ದಿಗೆ ದೇವೇಗೌಡರು ಇಂದು ಸಂಭಾಷಣೆ ನಡೆಸಿದರು. ಈ ವೇಳೆ ಜಿಲ್ಲೆಯಲ್ಲಿನ ಸಮಸ್ಯೆಗಳ ಕುರಿತು ಗಮನಕ್ಕೆ ತಂದರು. ಹಾಸನ ಜಿಲ್ಲೆಯಲ್ಲೂ ವೈದ್ಯಕೀಯ ಸೌಲಭ್ಯಗಳು ಸಿಗದಂತೆ ಜನರು ಪರದಾಡುತ್ತಿದ್ದಾರೆ. ಲಸಿಕೆ, ರೆಮ್ಡಿಸಿವಿರ್ ಇಂಜೆಕ್ಷನ್ ಕೊರತೆ ಇದೆ ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು.

ದೇವೇಗೌಡರ ಮನವಿಗೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಡಿಸಿಗಳಿಗೆ ಸೂಚನೆ ನೀಡಿದ್ದೇನೆ. ಈ ಕುರಿತು ಸತತ ವಾಗಿ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿ ದ್ದೇನೆ ಎಂದು ಭರವಸೆ ನೀಡಿದರು. ಹಾಸನದಲ್ಲಿ ಕೂಡ ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ 46695 ಕೋವಿಡ್ ಪ್ರಕರಣಗಳಿದ್ದು, 631 ಮಂದಿ ಸಾವನ್ನಪ್ಪಿದ್ದಾರೆ. ಎರಡನೇ ಅಲೆ ಸೋಂಕು ಪ್ರಕರಣ ಹೆಚ್ಚಿದ್ದು ಕಳೆದ ನಾಲ್ಕು ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸದೇ ಹಲವು ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದಲೂ ಕಟ್ಟು ನಿಟ್ಟಿನ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ ಸುಮರು 60 ಮಂದಿ ಪೆÇಲೀಸರು ಕೂಡ ಸೋಂಕಿಗೆ ತುತ್ತಾಗಿದ್ದಾರೆ.

Translate »