ಕೋವಿಡ್ ಸೋಂಕಿತರ ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್
ಚಾಮರಾಜನಗರ

ಕೋವಿಡ್ ಸೋಂಕಿತರ ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‍ಕುಮಾರ್

May 6, 2021

ಚಾಮರಾಜನಗರ, ಮೇ 5-ಚಾಮ ರಾಜನಗರ ಜಿಲ್ಲಾಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡಿನೊಳಗೆಲ್ಲಾ ಓಡಾಡಿದರು. ಅಲ್ಲಿ ಜಿಲ್ಲಾಡಳಿತ ಪೂರೈಸಿರುವ ವ್ಯವಸ್ಥೆಯನ್ನು ಖುದ್ದಾಗಿ ಪರಾಮರ್ಶಿಸಿದ ಸಚಿವರು, ಅಧಿ ಕಾರಿಗಳಿಂದ ಮಾಹಿತಿ ಪಡೆದರು. ಯಾವುದೇ ಸಮಸ್ಯೆಗಳಾಗದ ರೀತಿಯಲ್ಲಿ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.

ಇಂದು 167 ಕೋವಿಡ್ ಸೋಂಕಿತರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ಜನ ವೆಂಟಿಲೇಟರ್ ಮೇಲಿದ್ದಾರೆ. ಐಸಿಯು ವಾರ್ಡ್‍ನಲ್ಲಿ 47 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರೇ ಪ್ರತಿಯೊಬ್ಬರನ್ನೂ ಖುದ್ದಾಗಿ ಭೇಟಿ ಮಾಡಿ ಬಂದು ಎಷ್ಟು ದಿನ ಆಯ್ತು? ಅವತ್ತಿಗೂ ಇವತ್ತಿಗೂ ಹೇಗಿದ್ದೀರಿ? ಊಟ ಮಾಡಿ ದರಾ? ವೈದ್ಯರು ನಿಮ್ಮನ್ನು ಚೆನ್ನಾಗಿ ನೋಡ್ಕೊಳ್ತಿದಾರಾ? ಸಕಾಲಕ್ಕೆ ಆರೈಕೆ ದೊರೆಯುತ್ತಿದೆಯಾ? ಸಮಸ್ಯೆ ಆದ ತಕ್ಷಣ ಪರಿಹಾರಕ್ಕೆ ಪ್ರಯತ್ನ ನಡೀತಿದೆಯಾ? ಎಂದು ಪ್ರಶ್ನಿಸಿ ಎಲ್ಲರನ್ನೂ ಶೀಘ್ರ ಗುಣ ಮುಖರಾಗಲು ಹಾರೈಸಿದರು.
ನಾನೂ ಕೋವಿಡ್ ಸೋಂಕಿಗೊಳ ಗಾಗಿದ್ದೆ: ಕೆಲವು ಸೋಂಕಿತರ ಆಮ್ಲಜನಕ ಸಂಪೂರ್ಣತೆಯನ್ನು (ಔxಥಿgeಟಿ sಚಿಣu ಡಿಚಿಣioಟಿ) ವೈದ್ಯಾಧಿಕಾರಿಗಳ ಸಹಾಯ ದೊಂದಿಗೆ ತಾವೇ ಖುದ್ದಾಗಿ ಪರೀಕ್ಷಿಸಿದ ಕೆಲ ತಿಂಗಳ ಹಿಂದೆ ನಿಮ್ಮ ಥರ ನಾನೂ ಕೋವಿಡ್ ಸೋಂಕಿತನಾಗಿದ್ದೆ. ನನ್ನ ಶ್ವಾಸ ಕೋಶವೂ ತೀವ್ರವಾದ ಸೋಂಕಿಗೊಳಗಾ ಗಿತ್ತು. ನಾವೆಲ್ಲ ಕೊರೊನಾ ವಾರಿಯರ್ ಗಳೇ. ದಿಟ್ಟವಾಗಿ ಇದನ್ನು ಎದುರಿಸೋಣ. ಧೃತಿಗೆಡದಿದ್ದರೆ ಅದು ನಮ್ಮನ್ನು ಹೆದರಿ ಸಲು ಸಾಧ್ಯವಿಲ್ಲ ಎಂದು ಹುರಿದುಂಬಿಸಿದರು.

ಕೋವಿಡ್ ಸೋಂಕಿತ ಬಾಣಂತಿ ಮಗು ಭೇಟಿ: ಕೋವಿಡ್ ಪೀಡಿತ ಮಹಿಳೆಗೆ ಇಂದು ಬೆಳಗ್ಗೆಯಷ್ಟೇ ಹೆರಿಗೆಯಾಗಿದ್ದು, ತಾಯಿ ಮಗುವನ್ನೂ ಸಹ ಸುರೇಶ್‍ಕುಮಾರ್ ಭೇಟಿ ಮಾಡಿ, `ಕೋವಿಡ್ ಸಂದರ್ಭದಲ್ಲಿ ಮಗು ಜನಿಸಿದೆ. ಒಳ್ಳೆ ಹೆಸರಿಡಿ’ ಎಂದು ಹೇಳಿ ತಾಯಿಯ ಮುಖದ ಮೇಲೆ ವಿಶ್ವಾಸದ ನಗೆ ತುಂಬಿದರು. ಸರ್ಕಾರಿ ನೌಕರರು, ಶಿಕ್ಷಕರು ಸೇರಿದಂತೆ ನೂರಾರು ಸಾರ್ವ ಜನಿಕರು ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದು, ಸಮರ್ಪಕ ಸೌಲಭ್ಯಗಳು ದೊರೆಯುತ್ತಿ ರುವ ಬಗ್ಗೆ ಅವರೆಲ್ಲರಿಂದ ಖಚಿತಪಡಿಸಿ ಕೊಂಡ ಸಚಿವರು ಕೋಣೆಯೊಂದರಲ್ಲಿ ವಾಷ್ ರೂಂ ಸ್ವಚ್ಛ ಮಾಡಬೇಕೆಂದು ರೋಗಿ ಯೊಬ್ಬರು ಗಮನಕ್ಕೆ ತಂದಾಗ ಕೂಡಲೇ ಸಮಸ್ಯೆ ಸರಿಪಡಿಸಲು ವೈದ್ಯಕೀಯ ನಿರ್ದೇಶಕರಿಗೆ ಸೂಚನೆ ನೀಡಿದರು.

ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಅಧಿಕಾರಿಗಳನ್ನುದ್ದೇಶಿಸಿದ ಮಾತನಾಡಿದ ಸಚಿವರು ಮೊನ್ನೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ಸರ್ಕಾರ ನಿವೃತ್ತ ನ್ಯಾಯ ಮೂರ್ತಿ ಎ.ಬಿ.ಪಾಟೀಲ್ ಅವರ ನೇತ್ವತ್ವ ದಲ್ಲಿ ಇಂದು ವಿಚಾರಣಾ ಆಯೋಗ ಸ್ಥಾಪಿ ಸಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಣ್ಯವಾದ ಕ್ರಮವನ್ನು ಖಚಿತವಾಗಿಯೂ ಸರ್ಕಾರ ತೆಗೆದುಕೊಳ್ಳಲಿದೆ. ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು. ಎಲ್ಲರೂ ಜವಾಬ್ದಾರಿ ಯನ್ನರಿತು ಶ್ರಮ ವಹಿಸಿ ಸಾರ್ವಜನಿಕ ಸೇವೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಸಂಜೀವ್, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿ, ನೋಡಲ್ ಅಧಿಕಾರಿ ಡಾ.ಮಹೇಶ್ ಸೇರಿದಂತೆ ಹಲವರು ಇದ್ದರು.

Translate »