ಹಜ್ರತ್ ಅಹಮದ್ ಕಬೀರರ ಗಂಧೋತ್ಸವ
ಚಾಮರಾಜನಗರ

ಹಜ್ರತ್ ಅಹಮದ್ ಕಬೀರರ ಗಂಧೋತ್ಸವ

May 6, 2021

ಚಾಮರಾಜನಗರ, ಮೇ 5- ಗಡಿ ಜಿಲ್ಲೆ ಚಾಮರಾಜನಗರದ ಹರದನಹಳ್ಳಿ ಗ್ರಾಮ ದಲ್ಲಿ ಹಜ್ರತ್ ಅಹಮದ್ ಕಬೀರರ ಗಂಧೋತ್ಸವವನ್ನು ಭಕ್ತಿಯಿಂದ ಸರಳ ವಾಗಿ ಆಚರಿಸಲಾಯಿತು.

ಗ್ರಾಮದ ಹೊರ ಭಾಗದ ರಾಷ್ಟ್ರೀಯ ಹೆದ್ದಾರಿ 209 ಯಲ್ಲಿರುವ ಅಹಮದ್ ಕಬೀರರ ಗೋರಿಯಲ್ಲಿ ಗಂಧವನ್ನು ಅಭಿಷೇಕ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು.

ಗ್ರಾಮದ ಮುಸ್ಲಿಮ್ ಸಮುದಾಯದ ಮನೆಗಳಿಂದ ಸ್ವೀಕರಿಸಿ ತಂದಿದ್ದ ತೇದ ಗಂಧ ಮತ್ತು ಸಿಹಿಯನ್ನು ಹಜ್ರತ್ ಅಹಮದ್ ಕಬೀರರ ಗೋರಿಗೆ ಸಮರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯ್ತು.

ಪ್ರತೀ ರಂಜಾನ್ ತಿಂಗಳ 21ನೇ ಉಪವಾಸ ದಂದು ಹಜ್ರತ್ ಅಹಮದ್ ಕಬೀರರ ಗಂಧೋತ್ಸವವನ್ನು ಗ್ರಾಮಸ್ಥರು ವಿಜೃಂಭಣೆ ಯಿಂದ ಆಚರಿಸಿಕೊಂಡು ಬರುತ್ತಿದ್ದರು. ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿ ರುವ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಗಂಧೋತ್ಸವವನ್ನು ಸರಳವಾಗಿ ಆಚರಿಸಲಾಗು ತ್ತಿದೆ. ಧರ್ಮ ಗುರುಗಳಾದ ಶಹಬ್ಬಾಸ್ ಅವರು ಗೋರಿಗಳಿಗೆ ಗಂಧೋತ್ಸವವನ್ನು ಅಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿ ಮಹಮ್ಮದ್ ಪೈಗಂಬರರ ಗುಣಗಾನ ಮಾಡಿದರು.

ಈ ವೇಳೆ ಗ್ರಾಮಸ್ಥರು ಮಾಸ್ಕ್ ಧರಿಸಿ ಕೊಂಡು ಸಾಮಾಜಿಕ ಅಂತರ ಕಾಪಾಡಿ ಕೊಂಡು ಕೊರೊನಾ ಸೋಂಕು ನಮ್ಮ ದೇಶ ಸೇರಿದಂತೆ ಇಡೀ ಪ್ರಪಂಚದಿಂದ ಶೀಘ್ರ ನಿರ್ಗಮವಾಗಿ ಜನಸಾಮಾನ್ಯರಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವಂತೆ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಗಂಧೋತ್ಸವದಲ್ಲಿ ಗ್ರಾಮದ ಯಜ ಮಾನರಾದ ಶಫೀಕ್ ಅಹಮದ್, ಅಜ್ಮಲ್ ಪಾಷು, ರೆಹಮಾನ್ ಸೇರಿದಂತೆ ಮುಸ್ಲಿಮ್ ಮುಖಂಡರಾದ ನಜೀರ್ ಅಹಮದ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Translate »