ಕೊಳ್ಳೇಗಾಲ ಕ್ಷೇತ್ರದಲ್ಲಿ 2 ದಿನಗಳಿಗಾಗುವಷ್ಟು ಆಕ್ಸಿಜನ್ ಸಂಗ್ರಹ
ಚಾಮರಾಜನಗರ

ಕೊಳ್ಳೇಗಾಲ ಕ್ಷೇತ್ರದಲ್ಲಿ 2 ದಿನಗಳಿಗಾಗುವಷ್ಟು ಆಕ್ಸಿಜನ್ ಸಂಗ್ರಹ

May 6, 2021

ಕೊಳ್ಳೇಗಾಲ, ಮೇ5(ಎನ್.ನಾಗೇಂದ್ರ) -ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಎಲ್ಲೂ ಸಹಾ ಅನಾಹುತವಾಗ ದಂತೆ ತಡೆಗಟ್ಟುವ ಹಾಗೂ ಮುಂಜಾಗ್ರತೆ ಕೈಗೊಳ್ಳುವ ಕುರಿತು ಸಂಬಂಧಪಟ್ಟ ಅಧಿಕಾರಿ ಗಳ ಜೊತೆ ಶಾಸಕ ಮಹೇಶ್ ಅವರು ಪ್ರವಾಸಿ ಮಂದಿರದಲ್ಲಿ ಮಹತ್ವದ ಸಭೆ ನಡೆಸಿದರು.

ಬುಧವಾರ ಮದ್ಯಾಹ್ನ ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ಸಂತೇಮರಳ್ಳಿ, ಯಳಂ ದೂರು ಹಾಗೂ ಕೊಳ್ಳೇಗಾಲ ಬ್ಲಾಕ್ ವ್ಯಾಪ್ತಿಯ ಆರೋಗ್ಯಾಧಿಕಾರಿಗಳು, ಇಓ, ತಹಸಿಲ್ದಾರ್ ನೇತೃತ್ವದ ಈ ಸಭೆ ಮಹತ್ವ ದೆನಿಸಿತು. ಸಭೆಯಲ್ಲಿ ಕೊಳ್ಳೇಗಾಲ ಕ್ಷೇತ್ರ ದಲ್ಲಿ ಎಲ್ಲೂ ಸಹಾ ಸಾವು, ನೋವುಗಳಾಗ ದಂತೆ ಕೊರೊನಾ ಹೆಚ್ಚು ವ್ಯಾಪಿಸದಂತೆ ತಡೆಯುವ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸುವ ಕುರಿತು ಚರ್ಚಿಸಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಹೇಶ್, ಕ್ಷೇತ್ರ ವ್ಯಾಪ್ತಿಯ ಪ್ರಮುಖ ಮೂರು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮೇತ ಬೆಡ್ ಗಳಿವೆ, ರೋಗಿಗಳ ಸಂಖ್ಯೆ ಹೆಚ್ಚಾದರೂ ಸಹಾ ಎರಡು ದಿನಕ್ಕೆ ಸಾಕಾಗುವಷ್ಟು ಆಕ್ಸಿಜನ್ ಸಿಲಿಂಡರ್ ದಾಸ್ತಾನಿದೆ ಎಂದು ಸಭೆಯಲ್ಲಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ 445, ಗ್ರಾಮಾಂತರದಲ್ಲಿ 447 ಕೇಸ್ ಕೊಳ್ಳೇಗಾಲದಲ್ಲಿ ಪತ್ತೆಯಾ ಗುತ್ತಿದೆ. ಹಳ್ಳಿಗಳಲ್ಲಿಹೋಂ ಕ್ಯಾರಂಟೈನ್ ನಲ್ಲಿದ್ದರೆ ಅವರನ್ನು ಕೊರೊನಾ ಕೇರ್ ಸೆಂಟರ್‍ಗೆ ದಾಖಲು ಮಾಡಿಸಲು ಕ್ರಮಕ್ಕೆ ಸೂಚಿಸಲಾಗಿದೆ.

ಯಳಂದೂರಿನ ವಡ್ಡಗೆರೆಯಲ್ಲಿ ನೂರು ಹಾಸಿಗೆ ಕೋವಿಡ್ ಸೆಂಟರ್, ಸಂತೇ ಮರಳ್ಳಿಯಲ್ಲಿ ಏಕಲವ್ಯದಲ್ಲಿ ಹಾಗೂ ಕೊಳ್ಳೇಗಾಲದ ತಿಮ್ಮರಾಜಿಪುರ ಕೇಂದ್ರ ದಲ್ಲಿ ದಾಖಲಿಸಲು ಸೂಕ್ತ ಎಂದು ಸೂಚಿಸಿದ್ದೇನೆ ಎಂದರು.

ಸದ್ಯಕ್ಕೆ ಕೋವಾಕ್ಯಿನ್ 1500, ಕೋವಿ ಶಿಲ್ಡ್ 1 ಸಾವಿರ ಮಾತ್ರ ದಾಸ್ತಾನಿದೆ. ಕ್ಷೇತ್ರಕ್ಕೆ ಇದರಲ್ಲಿ ಮುನ್ನೂರು ವ್ಯಾಕ್ಸಿನ್ ನೀಡುವ ಗುರಿ ಇದೆ. ಇದು ಸಾಲಲ್ಲ, ನಾಳೆ ಉಸ್ತುವಾರಿ ಸಚಿವರ ಜೊತೆ ಮಾತ ನಾಡಿ ಹೆಚ್ಚಿನ ವ್ಯಾಕ್ಸಿನೇಷನ್ ಗೆ ಬೇಡಿಕೆ ಇಡುವೆ. ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಹೆಲ್ತ್ ಸೆಂಟರ್ ಪ್ರಾರಂಭಿಸಿ ಎಂದು ಸಹಾ ಸೂಚಿಸಿರುವೆ ಎಂದರು.

Translate »