ಮಳೆ ಹಾನಿ ಬಗ್ಗೆ ಸಿಎಂ ಬಳಿ ಅನುದಾನ ಕೋರಿಕೆ
ಮೈಸೂರು

ಮಳೆ ಹಾನಿ ಬಗ್ಗೆ ಸಿಎಂ ಬಳಿ ಅನುದಾನ ಕೋರಿಕೆ

November 3, 2021

ಮೈಸೂರು,ನ.2(ಪಿಎಂ)- ಚಾಮ ರಾಜ ಕ್ಷೇತ್ರ ವ್ಯಾಪ್ತಿಯಲ್ಲೂ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಈ ಸಂಬಂಧ ಅಭಿವೃದ್ಧಿಗೆ ಮುಖ್ಯಮಂತ್ರಿಗಳಲ್ಲಿ ಅನು ದಾನ ಕೋರುವುದಾಗಿ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ಮೈಸೂರಿನ ವಿಜಯನಗರ ಎರಡನೇ ಹಂತದ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆಯ ಮೈಸೂರು ವಿಭಾ ಗೀಯ ಸ್ತ್ರೀಶಕ್ತಿ ತರಬೇತಿ ಭವನದಲ್ಲಿ ಜಿಲ್ಲಾ ಆಯುಷ್ ಕಚೇರಿ ಹಾಗೂ ಇಲಾಖೆಯ ಜಂಟಿ ಆಶ್ರಯದಲ್ಲಿ ಧನ್ವಂತರಿ ಜಯಂತಿ (6ನೇ ರಾಷ್ಟ್ರೀಯ ಆಯುರ್ವೇದ ದಿನ) ಅಂಗವಾಗಿ `ಆಯುರ್ವೇದದಿಂದ ಪೆÇೀಷಣೆ’ ಶೀರ್ಷಿಕೆಯಡಿ ಮಂಗಳವಾರ ಹಮ್ಮಿ ಕೊಂಡಿದ್ದ ಪೋಷಣ ಆಹಾರ ಪ್ರದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.

ಭಾರೀ ಮಳೆಯಿಂದಾಗಿ ಚಾಮರಾಜ ಕ್ಷೇತ್ರದಲ್ಲೂ ಸಾಕಷ್ಟು ಹಾನಿಯಾಗಿದೆ. ಹಲ ವೆಡೆ ಒಳಚರಂಡಿ ಉಕ್ಕಿ ಹರಿಯುವಂತಾ ಗಿದೆ. ಮಳೆ ಚರಂಡಿ ವ್ಯವಸ್ಥೆ ಸಮರ್ಪಕ ವಾಗಿಲ್ಲದೆ, ರಸ್ತೆಯಲ್ಲಿ ನೀರು ಹರಿದು ಸಂಚಾರಕ್ಕೂ ತೊಡಕಾಗಿದೆ. ಹೀಗೆ ಮಳೆ ಯಿಂದ ಎದುರಾದ ಸಮಸ್ಯೆಗಳ ನಿವಾರಣೆ ಸೇರಿದಂತೆ ಅಭಿವೃದ್ಧಿ ಕಾರ್ಯಕ್ಕಾಗಿ ಮುಖ್ಯ ಮಂತ್ರಿಗಳಲ್ಲಿ ಅನುದಾನ ಕೋರಲಿದ್ದೇನೆ. ಅವರು ಇಂದು ಕೆಆರ್‍ಎಸ್ ಜಲಾಶಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಈ ಬಗ್ಗೆ ಮನವಿ ಮಾಡುವುದಾಗಿ ತಿಳಿಸಿದರು.

ಸ್ತ್ರೀಯರಲ್ಲಿರಿಲಿ ಹೆಚ್ಚಿನ ಆರೋಗ್ಯ ಕಾಳಜಿ: ಮಹಿಳೆಯರು ತಮ್ಮ ಆರೋಗ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅದರಲ್ಲೂ ಗರ್ಭಿಣಿಯರು ಮತ್ತು ಬಾಣಂತಿಯರು ತಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕ ಆಹಾರ ಸೇವನೆ ಮೂಲಕ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಎಲ್. ನಾಗೇಂದ್ರ ಸಲಹೆ ನೀಡಿದರು.

ಔಷಧಗಳಿಲ್ಲದೆ, ಆಹಾರ ಪದಾರ್ಥದಲ್ಲೇ ಆರೋಗ್ಯ ಕಾಪಾಡಿಕೊಳ್ಳುವುದು ಇಂದಿನ ಅಗತ್ಯ. ಹಾಗಾಗಿ ಆಹಾರ ಸೇವನೆ ಮುಖ್ಯ ವಾಗುತ್ತದೆ. ಅಪೌಷ್ಟಿಕತೆ ನಿವಾರಣೆಗಾಗಿ ಹಣ್ಣು ಮತ್ತು ತರಕಾರಿ ಸೇವನೆ ಬಗ್ಗೆ ಇಂದು ಮಾಹಿತಿ ನೀಡಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ ಸಂಬಂಧ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅದರ ಸದುಪಯೋಗ ಪಡೆಯಬೇಕು. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಯೊಂದಿಗೆ ಇಲ್ಲಿನ ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸು ವುದು ನನ್ನ ಕರ್ತವ್ಯ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ. ಬಸವ ರಾಜು ಮಾತನಾಡಿ, ಪೋಷಣ ಅಭಿ ಯಾನ ನಮ್ಮ ಇಲಾಖೆಯ ಮಹತ್ವದ ಕಾರ್ಯಕ್ರಮ. ಇದರ ಮೂಲಕ ಸಾರ್ವ ಜನಿಕರಿಗೆ ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಜೊತೆಗೆ ಇದರಲ್ಲಿ ಸ್ಥಳೀಯವಾಗಿ ದೊರೆ ಯುವ ಆಹಾರ ಪದಾರ್ಥಗಳನ್ನು ಗರ್ಭಿಣಿಯರು ಮತ್ತು ಬಾಣಂತಿಯರು ಯಾವ ರೀತಿ ಬಳಸಿಕೊಳ್ಳಬೇಕು ಎಂಬ ಮಾಹಿತಿ ನೀಡಲಾಗುತ್ತಿದೆ. ಆ ಮೂಲಕ ಅಪೌಷ್ಟಿಕತೆ ಹೋಗಲಾಡಿಸಲು ಪ್ರಯ ತ್ನಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಎಸ್. ಸೀತಾಲಕ್ಷ್ಮೀ ಮಾತನಾಡಿ, ನವೆಂಬರ್ ಮಾಸದಲ್ಲಿ ಪ್ರತಿ ವರ್ಷ ಧನ್ವಂತರಿ ಜಯಂತಿ ಆಚರಿಸುತ್ತಿದ್ದು, ಅದರಂತೆ ಇಂದು ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲಿ ಜಯಂತಿ ಹಮ್ಮಿಕೊಳ್ಳಲಾಗಿದೆ. ಆಹಾರವೇ ನಮಗೆ ಶಕ್ತಿ. ಅದೇ ನಮಗೆ ಔಷಧ ಎನ್ನುವ ರೀತಿಯಲ್ಲಿ ಜೀವನ ಶೈಲಿ ರೂಢಿಸಿಕೊಂಡರೆ, ಉತ್ತಮ ಆರೋಗ್ಯ ಕಾಯ್ದುಕೊಳ್ಳ ಬಹುದು. ಕೋವಿಡ್ ಇನ್ನೂ ಮುಕ್ತ ವಾಗಿಲ್ಲ. ಈ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳ ಸೇವನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
`ಆಯುಷ್ ಪೋಷಣ ಆಹಾರ’ ಕುರಿತು ಆಯುರ್ವೇದ ವೈದ್ಯೆ ಡಾ.ವಿಂದ್ಯಾ ಉಪ ನ್ಯಾಸ ನೀಡಿದರು. ಅಲ್ಲದೆ, ತರಕಾರಿ ಮತ್ತು ಹಣ್ಣುಗಳನ್ನು ಕಲಾಕೃತಿಯಂತೆ ವಿವಿಧ ವಿನ್ಯಾಸದಲ್ಲಿ ಕೆತ್ತಿ ಪ್ರದರ್ಶಿಸಲಾಯಿತು. ಮೈಸೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘಟನೆ ಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದರು. ಪಾಲಿಕೆ ಸದಸ್ಯ ಎಂ.ಯು. ಸುಬ್ಬಯ್ಯ ಮತ್ತಿತರರು ಹಾಜರಿದ್ದರು.

Translate »