ಲಂಡನ್‍ನಲ್ಲಿ ರಾಜ್ಯದ ಪ್ರವಾಸೋದ್ಯಮ ಮಳಿಗೆ ಉದ್ಘಾಟನೆ
ಮೈಸೂರು

ಲಂಡನ್‍ನಲ್ಲಿ ರಾಜ್ಯದ ಪ್ರವಾಸೋದ್ಯಮ ಮಳಿಗೆ ಉದ್ಘಾಟನೆ

November 3, 2021

ಮೈಸೂರು, ನ.2 (ಆರ್‍ಕೆಬಿ)- ಲಂಡನ್ ನಗರದಲ್ಲಿ ವಿಶ್ವ ಪ್ರವಾಸೋ ದ್ಯಮ ಮಾರುಕಟ್ಟೆ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಮಳಿಗೆಯನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷ ಅಪ್ಪಣ್ಣ ಸೋಮವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮದ ವ್ಯವ ಸ್ಥಾಪಕ ನಿರ್ದೇಶಕರಾದ ವಿಜಯ್ ಶರ್ಮ, ಸಿಂಧು ಬಿ.ರೂಪೇಶ್ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಪ್ರಧಾನ ವ್ಯವಸ್ಥಾಪಕ ಯುವರಾಜ್ ಭಾಗವಹಿಸಿ ದ್ದರು. ಕೋವಿಡ್ ಲಾಕ್‍ಡೌನ್ ತೆರವಾದ ನಂತರ ಮೊದಲ ಬಾರಿ ನಡೆಯುತ್ತಿರುವ ವಿಶ್ವ ದರ್ಜೆಯ ಪ್ರವಾಸೋದ್ಯಮ ಸಮಾ ವೇಶದಲ್ಲಿ ವಿಶ್ವದ ನಾನಾ ದೇಶಗಳಿಂದ ಪ್ರವಾಸೋದ್ಯಮ ಉತ್ತೇಜಿಸಲು ಅನೇ ಕರು ಈ ವೇಳೆ ಭಾಗವಹಿಸಿದ್ದರು.

Translate »