ಉಪಚುನಾವಣೆ ಫಲಿತಾಂಶದಿಂದ ಆಡಳಿತ  ವಿರೋಧಿ ಅಲೆ ಸಾಬೀತು; ಹೆಚ್‍ಎವಿ
ಮೈಸೂರು

ಉಪಚುನಾವಣೆ ಫಲಿತಾಂಶದಿಂದ ಆಡಳಿತ ವಿರೋಧಿ ಅಲೆ ಸಾಬೀತು; ಹೆಚ್‍ಎವಿ

November 3, 2021

ಮೈಸೂರು,ನ.2(ಪಿಎಂ)-ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಆಡಳಿತ ವಿರೋಧಿ ಅಲೆ ಇರುವು ದನ್ನು ಸಾಬೀತುಪಡಿಸಿದೆ. ಹಾನಗಲ್‍ನಲ್ಲಿ ಬಿಜೆಪಿ ಸೋಲು ಬಸವ ರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನ ತಿರಸ್ಕರಿಸಿರು ವುದು ಸ್ಪಷ್ಟಪಡಿಸಿದ್ದು, 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ.ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆಗಳಲ್ಲಿ ಆಡಳಿತ ಪಕ್ಷದ ಪರವಾಗಿ ಪಲಿತಾಂಶ ಬರುವುದು ಸರ್ವೇ ಸಾಮಾನ್ಯ. ಚುನಾವಣೆ ಗೆಲ್ಲಲೇಬೇಕೆಂದು ರಾಜ್ಯದ ಸಚಿವರು ಜನತೆಯ ಹಿತ ಕಾಯದೇ ಒಂದು ತಿಂಗಳ ಕಾಲ ಪ್ರಚಾರದಲ್ಲಿ ನಿರತರಾದರು. ಆಡಳಿತ ಯಂತ್ರದ ವ್ಯಾಪಕ ದುರುಪಯೋಗದೊಂದಿಗೆ ಅತಿ ಹೆಚ್ಚು ಹಣ ಹಂಚಿಕೆಯೂ ನಡೆಯಿತು. ಈ ನಡುವೆಯೂ ಬಿಜೆಪಿ ಹಾನಗಲ್‍ನಲ್ಲಿ ಹೀನಾಯ ಸೋಲು ಕಂಡಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರುವುದು ಖಚಿತವಾಗಿದೆ.

ಜೆಡಿಎಸ್‍ಗೆ ಅಸ್ತಿತ್ವವಿಲ್ಲ: ಜೆಡಿಎಸ್ ಪರವಾಗಿ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಸಂಸತ್ ಸದಸ್ಯ ಹಾಗೂ ಚಿತ್ರನಟ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಪ್ರಚಾರ ನಡೆಸಿದರು. ಈ ಪಕ್ಷ ಪಡೆದ ಮತಗಳನ್ನು ಗಮನಿಸಿದರೆ ಇದು ಚೇತರಿಸಿಕೊಳ್ಳಲು ಸಾಧ್ಯವೇ ಇಲ್ಲ. ಜೆಡಿಎಸ್ ಪಕ್ಷವು ಜನತೆಯ ವಿಶ್ವಾಸ ಗಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಮುಂದಿನ ಚುನಾವಣೆಗಳಲ್ಲಿ ನೇರ ಹಣಾಹಣಿ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಎಂಬುದು ಸಾಬೀ ತಾಗಿದೆ ಎಂದು ಹೆಚ್.ಎ.ವೆಂಕಟೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »