ಮೈಸೂರಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ
ಮೈಸೂರು

ಮೈಸೂರಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ

July 8, 2020

ಮೈಸೂರು,ಜು.7(ಆರ್‍ಕೆ)- ಕೋವಿಡ್- 19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮೈಸೂರಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಸಾರ್ವ ಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಅಧಿಕಾರಿಗಳು, ಸಿಬ್ಬಂದಿ ಆರೋಗ್ಯ ರಕ್ಷಣೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಪ್ರಧಾನ ಕಚೇರಿ, ಮೈಸೂರು ವಿಶ್ವವಿದ್ಯಾ ನಿಲಯದ ಕ್ರಾಫರ್ಡ್ ಭವನ, ನಗರ ಸಂಚಾರ ಎಸಿಪಿ ಕಚೇರಿ ಹಾಗೂ ದಕ್ಷಿಣ ವಲಯ ಐಜಿಪಿಯವರ ನಿವಾಸದಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದರಿಂದ ಮೈಸೂರು ನಗರದ ಇನ್ನಿತರ ಸರ್ಕಾರಿ ಕಚೇರಿಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ (ಹಳೇ ಪಾರಂ ಪರಿಕ ಕಟ್ಟಡ)ಯ ಪ್ರವೇಶ ದ್ವಾರದಲ್ಲಿ ಸಿಬ್ಬಂದಿ ನಿಯೋಜಿಸಿ ಅಲ್ಲಿಯೇ ಇರುವ ಅಹವಾಲು ಸ್ವೀಕೃತಿ ಕೌಂಟರ್‍ನಲ್ಲಿ ಎಲ್ಲಾ ರೀತಿಯ ಅರ್ಜಿ ಸ್ವೀಕರಿಸುವಂತೆ ಸಲಹೆ ನೀಡಿ ಸ್ಯಾನಿಟೈಸರ್ ನೀಡಿ ಅಲ್ಲಿಂದಲೇ ವಾಪಸ್ ಕಳುಹಿಸಲಾಗುತ್ತಿದೆ. ತುರ್ತು ಹಾಗೂ ಗಂಭೀರ ವಿಷಯಗಳನ್ನೊ ರತುಪಡಿಸಿ ಉಳಿದಂತೆ ಯಾರನ್ನೂ ಕಚೇ ರಿಗೆ ಹೋಗಲು ಅವಕಾಶ ನೀಡುತ್ತಿಲ್ಲ.

ಜಿಲ್ಲಾಧಿಕಾರಿ ಕಚೇರಿಗೆ 50 ವರ್ಷ ಮೇಲ್ಪಟ್ಟ ಸಿಬ್ಬಂದಿ ಹಾಜರಾಗಬೇಡಿ ಎಂದು ಹೇಳಿರುವುದರಿಂದ ಹಾಜರಾತಿಯೂ ಕಡಿಮೆ ಇರುವ ಕಾರಣ ಸಾರ್ವಜನಿಕರ ಭೇಟಿ ಹಾಗೂ ಕೆಲಸಗಳು ನಡೆಯುತ್ತಿಲ್ಲ. ಕೊರೊನಾ ಆತಂಕವಿರುವುದರಿಂದ ಸಾರ್ವಜನಿಕರೂ ಮೊದಲಿನಂತೆ ಈಗ ಕಚೇರಿಗೆ ಬರುತ್ತಿಲ್ಲ.

ಅದೇ ರೀತಿ ಮುಡಾ, ತಹಸೀಲ್ದಾರ್ ಕಚೇರಿ, ಕಾಡಾ, ಪಾಲಿಕೆ ವಲಯ ಕಚೇರಿ ಗಳು, ಚೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಕಚೇರಿ, ಕಾವೇರಿ ನೀರಾವರಿ ನಿಗಮ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಐಎಡಿಬಿ, ನಗರ ಪೊಲೀಸ್ ಆಯುಕ್ತರ ಕಚೇರಿ, ಎಸ್ಪಿ, ಐಜಿಪಿ ಕಚೇರಿ ಸೇರಿದಂತೆ ಎಲ್ಲಾ ಬಹುತೇಕ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕೆಲ ಗಂಭೀರ ದೂರು ಗಳನ್ನು ಹೊರತುಪಡಿಸಿ ಉಳಿದಂತೆ ಸಾಮಾನ್ಯ ಸಮಸ್ಯೆ ಹೊತ್ತು ಬರುವ ಸಾರ್ವ ಜನಿಕರನ್ನು ಪೊಲೀಸ್ ಠಾಣೆಗಳಿಗೆ ಪ್ರವೇಶಿ ಸಲು ನಿರ್ಬಂಧಿಸಲಾಗಿದೆ. ಮೈಸೂರು ನಗರ ದಲ್ಲಿ ರಿಸೆಪ್ಷನ್ ಕೌಂಟರ್ ಮತ್ತು ಜಿಲ್ಲೆಯಾ ದ್ಯಂತ ಗ್ರಾಮಾಂತರ ಪ್ರದೇಶದ ಪೊಲೀಸ್ ಠಾಣೆಗಳಲ್ಲಿ ಹೆಲ್ಪ್ ಡೆಸ್ಕ್‍ಗಳನ್ನು ತೆರೆಯ ಲಾಗಿದ್ದು, ಅಲ್ಲಿಯೇ ದೂರು ಮತ್ತು ಅರ್ಜಿಗಳನ್ನು ಸ್ವೀಕರಿಸಿ ಕಳುಹಿಸಲಾಗುತ್ತಿದೆ.

Translate »