ಶಾಸಕರಿಂದ ಬೀದಿಬದಿ ವ್ಯಾಪಾರಿಗಳ ಥರ್ಮಲ್ ಸ್ಕ್ರೀನಿಂಗ್
ಮೈಸೂರು

ಶಾಸಕರಿಂದ ಬೀದಿಬದಿ ವ್ಯಾಪಾರಿಗಳ ಥರ್ಮಲ್ ಸ್ಕ್ರೀನಿಂಗ್

July 8, 2020

ಮೈಸೂರು, ಜು.7(ಆರ್‍ಕೆಬಿ)- ಮೈಸೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮಂಗಳ ವಾರ ಮೈಸೂರಿನ ಕೆಲ ಪ್ರದೇಶಗಳಲ್ಲಿ ಪಾದಯಾತ್ರೆ ಕೈಗೊಂಡರು. ಬೀದಿಬದಿ ವ್ಯಾಪಾರಿಗಳಿಗೆ ಕೊರೊನಾ ವಿಚಾರದಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆಗಳ ಕುರಿತು ಅರಿವು ಮೂಡಿಸಿದರು.

ನಂಜುಮಳಿಗೆ, ತರಕಾರಿ ಮಾರುಕಟ್ಟೆ, ಮಾನಂದವಾಡಿ ರಸ್ತೆ, ನಾದಬ್ರಹ್ಮ ಸಂಗೀತ ಸಭಾ ಸುತ್ತಮುತ್ತ ಫುಟ್‍ಪಾತ್ ವ್ಯಾಪಾರಿ ಗಳಿಗೆ ಶಾಸಕರೇ ಥರ್ಮಲ್ ಸ್ಕ್ರೀನಿಂಗ್ ಮಾಡಿದರು. ಕಡ್ಡಾಯವಾಗಿ ಮಾಸ್ಕ್ ಧರಿ ಸುವಂತೆ, ಆಗಾಗ್ಗೆ ಕೈಗಳನ್ನು ಸೋಪಿ ನಿಂದ ತೊಳೆದುಕೊಳ್ಳುವಂತೆ, ಇಲ್ಲವೇ ಸ್ಯಾನಿಟೈಸರ್ ಬಳಸುವಂತೆ ಹಾಗೂ ಗ್ರಾಹಕರಿಂದ ಅಂತರ ಕಾಯ್ದುಕೊಳ್ಳು ವಂತೆ ಸಲಹೆ ನೀಡಿದರು. ವ್ಯಾಪಾರದ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆಯೂ ಸೂಚಿಸಿದರು. ಕೊರೊನಾ ಸೋಂಕಿನ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯ ವನ್ನು ಮಂಗಳವಾರ ಬೆಳಿಗ್ಗೆ 6ಕ್ಕೆ ಆರಂ ಭಿಸಲಾಗಿದೆ. ನಿತ್ಯ ಒಂದೊಂದು ಪ್ರದೇಶ ದಲ್ಲಿ ಜಾಗೃತಿ ನಡೆಸಲಾಗುವುದು. ವ್ಯಾಪಾರಿ ಗಳು, ಗ್ರಾಹಕರ ದೇಹದ ತಾಪಮಾನ ಪರೀಕ್ಷಿಸಿ, ವ್ಯತ್ಯಾಸ ಕಂಡು ಬಂದರೆ ತಕ್ಷಣವೇ ಕೋವಿಡ್ ಪರೀಕ್ಷೆಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು.

ಈ ಸಂದರ್ಭ ಪಾಲಿಕೆ ವಾರ್ಡ್ ಸದಸ್ಯೆ ಪಲ್ಲವಿ ಬೇಗಂ, ಎಸಿಪಿ ಪೂರ್ಣಚಂದ್ರ ತೇಜಸ್ವಿ, ಇನ್ಸ್‍ಪೆಕ್ಟರ್‍ಗಳಾದ ಶ್ರೀನಿವಾಸ್ ಮತ್ತು ವೆಂಕಟೇಶ್, ಸಂಚಾರ ವಿಭಾಗದ ಪೊಲೀಸ್ ಇನ್ಸ್‍ಪೆಕ್ಟರ್ ವಿನಯ್, ಪಾಲಿಕೆ ಅಭಿವೃದ್ಧಿ ಅಧಿಕಾರಿಗಳಾದ ನಂಜುಂಡೇ ಗೌಡ, ಶುಶ್ರುತ್, ಇಂಜಿನಿಯರುಗಳಾದ ದಯಾನಂದ್, ಮೇಘನಾ, ಕಿರಣ್, ಆರೋಗ್ಯ ಪರಿವೀಕ್ಷಕರಾದ ಮಂಜುಕುಮಾರ್, ಹರೀಶ್, ಪ್ರೀತಿ, ಬಿಜೆಪಿ ಕೃಷ್ಣರಾಜ ಕ್ಷೇತ್ರ ಉಪಾಧ್ಯಕ್ಷ ಎಂ.ಆರ್.ಬಾಲಕೃಷ್ಣ, ಆಶ್ರಯ ಸಮಿತಿ ಸದಸ್ಯೆ ವಿದ್ಯಾ ಅರಸ್, ಶಿವಪ್ಪ ಇನ್ನಿತರರಿದ್ದರು.

Translate »