ಅರಮನೆ ತೋಟಗಾರಿಕೆ ವಿಭಾಗದ ನಿವೃತ್ತ,  ಹಾಲಿ ಸೇವೆಯಲ್ಲಿರುವ 7 ಮಂದಿ ಸಿಬ್ಬಂದಿಗೆ ಸನ್ಮಾನ
ಮೈಸೂರು

ಅರಮನೆ ತೋಟಗಾರಿಕೆ ವಿಭಾಗದ ನಿವೃತ್ತ, ಹಾಲಿ ಸೇವೆಯಲ್ಲಿರುವ 7 ಮಂದಿ ಸಿಬ್ಬಂದಿಗೆ ಸನ್ಮಾನ

March 25, 2021

ಮೈಸೂರು,ಮಾ.24(ಪಿಎಂ)- ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ 29ನೇ ಹುಟ್ಟು ಹಬ್ಬದ ಅಂಗವಾಗಿ ಮೈಸೂರು ಅರಮನೆ ತೋಟಗಾರಿಕೆ ವಿಭಾಗದ ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ 7 ಮಂದಿ ಸಿಬ್ಬಂದಿಯನ್ನು ಬುಧವಾರ ಸನ್ಮಾನಿಸಲಾಯಿತು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ರಾಮೇಗೌಡ, ಮಹದೇವ, ಚಿಕ್ಕ ಮಲ್ಲಯ್ಯ, ಸಿದ್ದಯ್ಯ, ರಾಜಣ್ಣ, ಗೌಡಯ್ಯ ಹಾಗೂ ಬಸವಯ್ಯ ಅವರನ್ನು ಸನ್ಮಾನಿಸಲಾಯಿತು. ಸಮಾರಂಭ ಉದ್ಘಾಟಿ ಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಎಸ್.ಟಿ. ರವಿಕುಮಾರ್ ಮಾತನಾಡಿ, ಅರಮನೆ ಸೌಂದರ್ಯ ಇಮ್ಮಡಿಗೊಳಿಸುವಲ್ಲಿ ತೋಟಗಾರಿಕೆ ಸಿಬ್ಬಂದಿಯ ಪರಿಶ್ರಮ ಸಾಕಷ್ಟಿದೆ. ಇಡೀ ವಿಶ್ವದ ಗಮನ ಸೆಳೆದಿರುವ ಅರಮನೆ ಆಕರ್ಷಣೆಗೆ ಉದ್ಯಾನವನದ ನಿರ್ಮಾಣದಲ್ಲಿ ಕೆಲಸ ಮಾಡುವವರಿಗೆ ಅಭಿನಂದಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ರೇಸ್ ಕ್ಲಬ್ ಮಾಜಿ ಕಾರ್ಯದರ್ಶಿ ಕೆ.ಜೆ. ಅನಂತರಾಜ ಅರಸ್, ಶ್ರೀ ನಾಲ್ವಡಿ ಫೌಂಡೇಷನ್ ಅಧ್ಯಕ್ಷ ನಂದೀಶ್ ಜಿ.ಅರಸ್, ಟ್ರಸ್ಟ್ ಅಧ್ಯಕ್ಷ ಡಾ.ಎಂ.ಜಿ.ಆರ್. ಅರಸ್, ಸಂಸ್ಥಾಪಕ ಕಾರ್ಯದರ್ಶಿ ಅಮರ್‍ನಾಥ್ ರಾಜೇ ಅರಸ್, ಉಪಾಧ್ಯಕ್ಷ ಎಸ್.ಲಿಂಗರಾಜೇ ಅರಸ್, ಪತ್ರಕರ್ತ ಕೆ.ದೀಪಕ್ ಮತ್ತಿತರರು ಹಾಜರಿದ್ದರು.

Translate »