ಜುವೆಲರಿಯಲ್ಲಿ ದೋಚಿದ್ದ ಚಿನ್ನಾಭರಣ ಪೊಲೀಸರ ವಶಕ್ಕೆ
ಮೈಸೂರು

ಜುವೆಲರಿಯಲ್ಲಿ ದೋಚಿದ್ದ ಚಿನ್ನಾಭರಣ ಪೊಲೀಸರ ವಶಕ್ಕೆ

March 25, 2021

ಮೈಸೂರು,ಮಾ.24(ವೈಡಿಎಸ್)- ಚಿನ್ನವನ್ನು ಖರೀದಿಸುವ ನೆಪದಲ್ಲಿ ಖದೀಮನೋರ್ವ ಜುವೆಲರಿಗೆ ಹೋಗಿ, ಅಲ್ಲಿನ ಕೆಲಸಗಾರನ ಕಣ್ಣಿಗೆ ಕಾರದಪುಡಿ ಎರಚಿ ಚಿನ್ನಾಭರಣಗಳನ್ನು ದೋಚಿದ್ದ ಪ್ರಕರಣವನ್ನು ಮೇಟಗಳ್ಳಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಮೂಲಕ 4.20 ಲಕ್ಷ ರೂ.ಮೌಲ್ಯದ 14 ಚಿನ್ನದ ಚೈನು ಮತ್ತು 1 ಉಂಗುರ ವಶಪಡಿಸಿಕೊಂಡಿದ್ದಾರೆ.

2020ರ ಡಿ.18ರಂದು ಸಂಜೆ.7.30ರ ವೇಳೆಗೆ ವ್ಯಕ್ತಿಯೊಬ್ಬ ಚಿನ್ನವನ್ನು ಖರೀದಿ ಸುವ ನೆಪದಲ್ಲಿ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ್ ಮುಖ್ಯ ರಸ್ತೆ ಯಲ್ಲಿರುವ ಕೈಲಾಸ್ ಬ್ಯಾಂಕರ್ಸ್ ಅಂಡ್ ಜುವೆಲರಿಗೆ ಹೋಗಿದ್ದಾನೆ. ಕೆಲಸಗಾರನ ಕಣ್ಣಿಗೆ ಕಾರದಪುಡಿ ಎರಚಿ 14 ಚಿನ್ನದ ಚೈನು ಮತ್ತು 1 ಉಂಗುರವನ್ನು ದೋಚಿ ಪರಾರಿಯಾಗಿದ್ದ. ಈ ಸಂಬಂಧ ಜುವೆ ಲರಿ ಮಾಲೀಕರು ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಜುವೆಲರಿಯ ಸಿಸಿಟಿವಿ ಫುಟೇಜ್ ವೀಕ್ಷಿಸಿ, ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಚಿನ್ನಾಭರಣ ದೋಚಿದ್ದ ವ್ಯಕ್ತಿ ರಾಜಸ್ತಾನದ ಜಾಲೋರ್ ಜಿಲ್ಲೆ ಚೌರಾ ಗ್ರಾಮದ ನರೇಂದರ್(25) ಎಂಬುದು ವಿವಿಧ ಮೂಲಗಳಿಂದ ಖಚಿತವಾದ ಹಿನ್ನೆಲೆ ಯಲ್ಲಿ ವಿಶೇಷ ತಂಡ ರಾಜಸ್ತಾನಕ್ಕೆ ತೆರಳಿ, ವಾರಗಳ ಕಾಲ ಬೀಡುಬಿಟ್ಟಿತ್ತು. ನರೇಂ ದರ್ ಅವರ ತಾಯಿಯನ್ನು ತಂಡ ಭೇಟಿ ಯಾದಾಗ, ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ನಮ್ಮ ಸಂಬಂಧಿಕರು ವಾಸವಿದ್ದು, ಅವರ ಮನೆಯಲ್ಲಿ ಬಚ್ಚಿಟ್ಟಿರ ಬಹುದು ಎಂದು ತಿಳಿಸಿದ್ದಾರೆ.

ಅವರ ಮಾಹಿತಿ ಮೇರೆಗೆ ರಾಜಸ್ತಾನದಿಂದ ವಾಪಸ್ಸಾದ ತಂಡ, ವಿಜಯನಗರದ ಮನೆಗೆ ತೆರಳಿ ಪರಿಶೀಲಿಸಿದಾಗ ದೋಚಿದ್ದ ಚಿನ್ನಾಭರಣಗಳು ಪತ್ತೆಯಾಗಿವೆ. ತಲೆ ಮರೆಸಿಕೊಂಡಿರುವ ಆರೋಪಿ ನರೇಂ ದರ್ ಪತ್ತೆಗೆ ಕಾರ್ಯ ಮುಂದುವರೆದಿದೆ.

ಪತ್ತೆ ಕಾರ್ಯದಲ್ಲಿ ಡಿಸಿಪಿ ಗೀತಪ್ರಸನ್ನ, ಎನ್.ಆರ್.ಎಸಿಪಿ ಶಿವಶಂಕರ್ ಮಾರ್ಗ ದರ್ಶನದಲ್ಲಿ ಮೇಟಗಳ್ಳಿ ಠಾಣೆ ಇನ್ಸ್ ಪೆಕ್ಟರ್ ಎ.ಮಲ್ಲೇಶ್, ಎಸ್‍ಐ ಕೆ.ವಿಶ್ವ ನಾಥ್, ನಾಗರಾಜ ನಾಯಕ್, ಎಎಸ್‍ಐ ಪೊನ್ನಪ್ಪ, ಸಿಬ್ಬಂದಿ ದಿವಾಕರ್, ಪ್ರಶಾಂತ್ ಕುಮಾರ್, ಕೃಷ್ಣ, ಮಧುಕುಮಾರ್, ಲಿಖಿತ್, ಶ್ರೀಶೈಲ ಹುಗ್ಗಿ, ಆಶಾ, ಚೇತನ್, ನರಸಿಂಹರಾಜ ವಿಭಾಗದ ಅಪರಾಧ ಪತ್ತೆ ದಳದ ಎಎಸ್‍ಐ ಅನಿಲ್ ಶಂಕಪಾಲ್, ಸಿಬ್ಬಂದಿ ಲಿಂಗರಾಜಪ್ಪ, ರಮೇಶ್, ಕಾಂತ ರಾಜು, ಹನುಮಂತ ಕಲ್ಲೇದ್, ಗೌರಿ ಶಂಕರ, ತಾಂತ್ರಿಕ ಘಟಕದ ಇನ್ಸ್‍ಪೆಕ್ಟರ್ ಜಗದೀಶ್, ಸಿಬ್ಬಂದಿ ಗುರುದೇವ ಆರಾಧ್ಯ, ಮಂಜು, ಕುಮಾರ್, ಶ್ಯಾಂ ಸುಂದರ್ ಪಾಲ್ಗೊಂಡಿದ್ದರು.

Translate »